ದೇಶ

ವೀಡಿಯೋ: ಅಸ್ಸಾಂನ ಈ ನದಿಯಲ್ಲಿ ನೀರಿನ ಬದಲು ಬೆಂಕಿ ಹರಿಯುತ್ತಿದೆ!

Raghavendra Adiga

ಗುವಾಹತಿ: ಸಾಮಾನ್ಯವಾಗಿ ನದಿಯಲ್ಲಿ ನೀರು ಹರಿಯುವುದು ಎಲ್ಲರೂ  ನೋಡಿರುತ್ತೀರಿ. ಅದರಲ್ಲಿ ಈಜುವುದಕ್ಕೆ , ಸ್ನಾನ ಮಾಡುವುದಕ್ಕೆ ಅದೇನೋ ಖುಷಿ. ಆದರೆ ಒಂದೊಮ್ಮೆ ನದಿಯಲ್ಲಿ ನೀರಿನ ಬದಲು ಬೆಂಕಿ ಕಾಣಿಸಿಕೊಂಡರೆ?! ಹೌದು ಅಸ್ಸಾಂನ ಪ್ರಮುಖ ನದಿಯೊಂದರಲ್ಲಿ ನೀರಿನ ಬದಲು ಬೆಂಕಿ ಭುಗಿಲೆದ್ದಿದೆ. 

ಅಸ್ಸಾಂನ ಆಯಿಲ್ ಇಂಡಿಯಾ ಲಿಮಿಟೆಡ್ (ಒಐಎಲ್) ನ ಪ್ರಮುಖ ಕಚ್ಚಾ ತೈಲ ಸ್ವೀಕರಣಾ ಕೇಂದ್ರದಲ್ಲಿ ತಾಂತ್ರಿಕ ಸಲಕರಣೆಗಳ ತೊಂದರೆಗಳ ಕಾರಣ ಕಚ್ಚಾತೈಲ ಸೋರಿಕೆಯುಂಟಾಗಿದೆ.  ಇದರಿಂದಾಗಿ ರಾಜ್ಯದ ದಿಬ್ರುಘರ್ ಜಿಲ್ಲೆ ದಿಹಿಂಗ್ ನದಿಯಲ್ಲಿ ಭಾರೀ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದೆ.

ಮೂರು ದಿನಗಳ ಹಿಂದೆಯೇ ಬೆಂಕಿ ಕಾಣಿಸಿಕೊಂದ್ದು ದಿನದಿನವೂ ಉಲ್ಬಣಗೊಳ್ಳುತ್ತಿದೆ ಎಂದು ವರದಿ ಹೇಳಿದೆ. ದೃಶ್ಯಗಳು ಭೀತಿಗೊಳಿಸುವಂತೆ ಕಾಣಿಸುತ್ತಿವೆ  ಆದರೆ ಅಪಾಯದ ಹಂತದಲ್ಲಿಲ್ಲ ಎಂದು ಹಿರಿಯ ಒಐಎಲ್ ಅಧಿಕಾರಿಯೊಬ್ಬರು,  ಹೇಳಿದ್ದಾರೆ."ಸೆಂಟ್ರಲ್ ಟ್ಯಾಂಕ್ ಪಂಪ್‌ನಲ್ಲಿ, ತೊಂದರೆ ಕಾಣಿಸಿಕೊಂಡಿದ್ದು ಇದರಿಂದಾಗಿ ಕವಾಟಗಳು ಲಾಕ್ ಆಗಿವೆ. ಹಾಗಾಗಿ ವಿವಿಧ ಕಡೆಗಳಿಂದ ಪಂಪ್ ಮಾಡಲಾಗುತ್ತಿದ್ದ ಕಚ್ಚಾ ತೈಲವು ಕೇಂದ್ರ ಪಂಪ್ ಟ್ಯಾಂಕ್‌ಗೆ ಪ್ರವೇಶಿಸಲು ಸಾಧ್ಯವಾಗಲಿಲ್ಲ.  ಹಾಗಾಗಿ  ಸಂಪೂರ್ಣ ಪೈಪ್ ಲೈನ್ ನೆಟ್ ವರ್ಕ್ ನಲ್ಲಿ ಹಿಮ್ಮುಖ ಒತ್ತಡ ಏರ್ಪಟ್ಟಿದೆ. ಆದರೆ ಒಂದೆರಡು ಕಡೆಗಳಲ್ಲಿ ಹೀಗೆ ಹಿಮ್ಮುಖ ಒತ್ತಡ ಏರ್ಪಡಲೂ ಸಹ ತೊಡಕಾಗಿದೆ. ಅದು ಪಂಕ್ಚರ್ ಆಗಿದ್ದು ಪರಿಣಾಮ ನದಿಗೆ ಕಚ್ಚಾ ತೈಲ ಸೋರಿಕೆಯಾಗಿ ಬೆಂಕಿ ಕಾಣಿಸಿದೆ"

ಪಂಕ್ಚರ್ ನಡೆದ ದುಲಿಯಾಜನ್ ಬಳಿಯ ಒಂದು ಪ್ರದೇಶದಲ್ಲಿ, ಸ್ವಲ್ಪ ಪ್ರಮಾಣದ ಕಚ್ಚಾ ತೈಲ ಚೆಲ್ಲಿದ್ದು ಅದು ಚರಂಡಿಗೆ ಹೋಗಿ ಅಲ್ಲಿಂದ ನದಿಯಲ್ಲಿ ವಿಲೀನಗೊಂಡಿದೆ ಎಂದು ಅವರು ಹೇಳಿದರು. ಮರುದಿನ ಬೆಳಿಗ್ಗೆ, ನದಿಯ ಸಮೀಪ ಯಾರಾದರೂ ಬೆಂಕಿಕಡ್ಡಿ ಹಚ್ಚಿ ಅಥವಾ ಸಿಗರೇಟ್ ಎಸೆದಿದ್ದಾರೆ. ಅದು ಬೆಂಕಿಯನ್ನು ಆಹ್ವಾನಿಸಿದೆ ಎಂದು ಅವರು ಹೇಳಿದರು. ಒಐಎಲ್ ಸೋರಿಕೆಯ ಸ್ಥಳಗಳನ್ನು ಈಗಾಗಲೇ ಗುರುತಿಸಿದೆ ಮತ್ತು ಪಂಕ್ಚರ್ ಗಳನ್ನು ಸರಿಪಡಿಸಲಾಗಿದೆ ಎಂದು ಅಧಿಕಾರಿ ಹೇಳಿದರು.

“ಚೆಲ್ಲಿದ ಕಚ್ಚಾ ತೈಲವನ್ನು ಮರುಪಡೆಯಲು ನಮ್ಮಲ್ಲಿ ಒಂದು ವ್ಯವಸ್ಥೆ ಇದೆ. ಹೇಗಾದರೂ, ತೈಲವು ಹರಿಯುವ ನೀರಿಗೆ ಸೇರಿದಾಗ  ಅದು ಸವಾಲಾಗಿ ಪರಿಣಮಿಸುತ್ತದೆ. ಅದು ಕೆರೆಯಾಗಿದ್ದರೆ ಕೆಲಸ ಸುಲಭವಾಗುತ್ತದೆ. ಆದರೆ ನದಿಯಲ್ಲಿ ಹೀಗಾದಾಗ ಸುಧಾರಣೆ ಕಠಿಣವಾಗಲಿದೆ.  ಆದರೆ ಹಿಂದಿನ ವಿಪತ್ತು ಸನ್ನಿವೇಶಗಳಿಗೆ ಹೋಲಿಸಿದರೆ, ಇದು 99% ನಷ್ಟು ಸೋರಿಕೆ  ಭೂ ಸ್ಥಳಗಳಲ್ಲಿ ನಡೆದಿರುವುದರಿಂದ ಇದು ಗಂಭೀರವಾಗಿಲ್ಲ" ಅವರು ವಿವರಿಸಿದ್ದಾರೆ. 

SCROLL FOR NEXT