ದೇಶ

ಬಿಜೆಪಿ ಸದಸ್ಯರು ಮಹಾತ್ಮ ಗಾಂಧಿ ನೈಜ ಭಕ್ತರು, ಕಾಂಗ್ರೆಸ್ ನವರು ‘ನಕಲಿ' ಗಾಂಧಿ ಅನುಯಾಯಿಗಳು: ಪ್ರಹ್ಲಾದ್ ಜೋಶಿ

Raghavendra Adiga

ನವದೆಹಲಿ: ಭಾರತೀಯ ಜನತಾ ಪಕ್ಷದ (ಬಿಜೆಪಿ) ಸದಸ್ಯರು ಮಹಾತ್ಮಾ ಗಾಂಧಿ ನಿಜವಾದ ಭಕ್ತರು, ಹಾಗೂ ಗಾಂಧೀಜಿಯ ಅನುಯಾಯಿಗಳು.  ಆದರೆ ಕಾಂಗ್ರೆಸ್ ಜನರು ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ, ರಾಹುಲ್ ಗಾಂಧಿಯವರಂತೆ  ಅವರಂತೆ ನಕಲಿ ಗಾಂಧಿಯ ಅನುಯಾಯಿಗಳು  ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.

ಮಹಾತ್ಮ ಗಾಂಧಿಯವರ ಬಗ್ಗೆ ಅನಂತ್‌ಕುಮಾರ್ ಹೆಗಡೆ ಅವರ ವಿವಾದಾತ್ಮಕ ಹೇಳಿಕೆ ಕುರಿತು ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಬಿಜೆಪಿಯ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದ ವೇಳೆ ಜೋಶಿ ಈ ಹೇಳಿಕೆ ನೀಡಿದ್ದಾರೆ.ಚೌಧರಿ ಬಿಜೆಪಿಗರು ರಾವಣನ ವಂಶಸ್ಥರು ಎಂದ ಬಳಿಕ ಜೋಶಿ ಈ ಹೇಳಿಕೆ ನೀಡಿದರು.

"ಭಾರತೀಯ ಜನತಾ ಪಕ್ಷದ ಸದಸ್ಯರು ಗಾಂಧೀಜಿಯ ನಿಜವಾದ ಭಕ್ತರು. . ನಾವು ಮಹಾತ್ಮ ಗಾಂಧಿಯವರ ನಿಜವಾದ ಅನುಯಾಯಿಗಳು. ಈ ಜನರು (ಕಾಂಗ್ರೆಸ್ ನ ಸದಸ್ಯರು)ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯಂತಹ 'ನಕಲಿ' ಗಾಂಧಿಯ ಅನುಯಾಯಿಗಳು" ಎಂದು ಲೋಕಸಭೆಯಲ್ಲಿ ಜೋಶಿ ಹೇಳಿದರು. ‘ಸೋನಿಯಾ ಮತ್ತು ರಾಹುಲ್ ಜಾಮೀನಿನ ಮೇಲೆ ಹೊರಗಿದ್ದಾರೆ. ಇದಕ್ಕೆ ಕಾಂಗ್ರೆಸ್ ಏನನ್ನುತ್ತಾರೆ? ಎಂದು ಪ್ರಹ್ಲಾದ್ ಜೋಶಿ ಪ್ರಶ್ನಿಸಿದರು. 

ಇದಕ್ಕೆ ಮುನ್ನ "ಇಂದು ಅವರು ಮಹಾತ್ಮ ಗಾಂಧಿಯನ್ನು ನಿಂದಿಸುತ್ತಾರೆ. ಅವರು ರಾವಣನ ಮಕ್ಕಳು. ಅವರು ಭಗವಾನ್ ರಾಮನ ಭಕ್ತರನ್ನು ಅವಮಾನಿಸುತ್ತಿದ್ದಾರೆ" ಎಂದು ಚೌಧರಿ ವ್ಯಂಗ್ಯಭರಿತ ಂಆತುಗಳನ್ನಾಡಿದ್ದರು.

ಈ ಮಧ್ಯೆ, ಕಾಂಗ್ರೆಸ್ ಸದಸ್ಯರು ಬಾವಿಗೆ ಇಳಿದು ‘ಬಿಜೆಪಿ ಪಕ್ಷ, ಗೂಡ್ಸೆ ಪಕ್ಷ’, ‘ಮಹಾತ್ಮ ಗಾಂಧಿ ಅಮರ್ ರಹೇ’ ಎಂಬ ಘೋಷಣೆಗಳನ್ನು ಕೂಗಿದರು. 

ಕಾಂಗ್ರೆಸ್ ಮುಖಂಡ ತರುಣ್ ಗೊಗೊಯ್ ಮತ್ತು ಇತರ ಸದಸ್ಯರು ಪ್ರಧಾನಿ ನರೇಂದ್ರ ಮೋದಿ ಸದನದಲ್ಲಿ ಹೇಳಿಕೆ ನೀಡಬೇಕೆಂದು ಒತ್ತಾಯಿಸಿದರು. 

ಸ್ಪೀಕರ್ ಓಂ ಬಿರ್ಲಾ ಅವರು ಪ್ರತಿಭಟನೆ ನಡೆಸುತ್ತಿದ್ದ  ಸದಸ್ಯರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು. ಪ್ರತಿಭಟನೆ ಮುಂದುವರಿಸಿದರೆ ಸದನ ಸುಗಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ನಂತರ, ಚೌಧರಿ ಮತ್ತು ಅವರ ಕಾಂಗ್ರೆಸ್ ಪಕ್ಷದ ಸದಸ್ಯರು, ‘ ಯಾವುದೇ ಪರ್ಯಾಯ ಸಿಗದಿದ್ದರಿಂದ ಸಭಾತ್ಯಾಗ ಮಾಡುತ್ತಿದ್ದೇವೆ.’ ಎಂದು ಸದನದಿಂದ ಹೊರ ನಡೆದರು. ಡಿಎಂಕೆ ಮತ್ತು ತೃಣಮೂಲ ಕಾಂಗ್ರೆಸ್ ಸದಸ್ಯರು ಸಹ ಅವರ ಜೊತೆ ಸೇರಿದರು.

SCROLL FOR NEXT