ದೇಶ

ಅಯೋಧ್ಯೆ ರಾಮಮಂದಿರ ಟ್ರಸ್ಟ್'ನ 15 ಮಂದಿ ಸದಸ್ಯರಿವರು

Manjula VN

ನವದೆಹಲಿ: ರಾಮಮಂದಿರ ನಿರ್ಮಾಣಕ್ಕೆ ಕೇಂದ್ರ ಸರ್ಕಾರ 15 ಜನರ ಟ್ರಸ್ಟ್ ರಚನೆ ಘೋಷಣೆ ಮಾಡಿದ ಬೆನ್ನಲ್ಲೇ ಅದರ ಸದಸ್ಯರ ಹೆಸರನ್ನು ಅಂತಿಮಗೊಳಿಸಲಾಗಿದೆ.

15 ಮಂದಿಯ ಟ್ರಸ್ಟ್ ನಲ್ಲಿ ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನರೂ ಕೂಡ ಇದ್ದಾರೆಂಬುದು ವಿಶೇಷ ವಿಚಾರವಾಗಿದೆ. 

ಏಪ್ರಿಲ್ 2 ರಂದು ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣಕ್ಕೆ ಚಾಲನೆ ಸಿಗುವ ಎಲ್ಲಾ ಸಾಧ್ಯತೆಗಳಿದ್ದು. ಈ ಕುರಿತು ಹೊಸದಾಗಿ ರಚನೆಗೊಂಡಿರುವ ಸಮಿತಿಯು ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಲಾಗುತ್ತಿದೆ. 

1989ರಲ್ಲಿ ವಿಶ್ವ ಹಿಂದೂ ಪರಿಷತ್, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ಮಾಡಿತ್ತು. ಆಗ ಬಿಹಾರ ಮೂಲದ ದಲಿತ ವ್ಯಕ್ತಿ ಕಮಲೇಶ್ವರ್ ಚೌಪಾಲ್ ರಿಂದ ಮೊದಲ ಇಟ್ಟಿಗೆ ಇಡಿಸಲಾಗಿತ್ತು. ಇದೀಗ ಕೇಂದ್ರ ಸರ್ಕಾರ, ರಾಮ ಮಂದಿರ ಟ್ರಸ್ಟ್ ನಲ್ಲಿ ದಲಿತ ಸದಸ್ಯರಾಗಿ ಅದೇ ಕಮೇಶ್ವರ್ ಚೌಪಾಲ್ ಅವರನ್ನು ನೇಮಕ ಮಾಡಿದೆ. 

ಇನ್ನು ಟ್ರಸ್ಟ್ ನಲ್ಲಿ ಪ್ರಯಾಗ್ ರಾಜ್'ನ ವಾಸುದೇವಾನಂದ ಸರಸ್ವತಿ ಸ್ವಾಮೀಜಿ, ಉಡುಪಿಯ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದಂಗಳು, ಹರಿದ್ವಾರದ ಪರಮಾನಂದ ಜೀ ಮಹರಾಜ್, ಪುಣೆಯ ಸ್ವಾಮಿ ಗೋವಿಂದ ದೋವಗಿರಿ ಜಿ. ಮಹಾರಾಜ್, ನಿರ್ಮೋಹಿ ಅಖಾಡಾ ಮುಖ್ಯಸ್ಥ ಮಹಾಂತ ಧೀರೇಂದ್ರ ದಾಸ್, ಹಿರಿಯ ವಕೀಲ ಕೆ.ಪರಾಶರನ್, ಸಮಾಜಸೇವಕ ವಿಮಲೇಂದ್ರ ಮೋಹನ ಪ್ರತಾಪ್ ಮಿಶ್ರಾ, ಅಯೋಧ್ಯೆಯಲ್ಲಿ ವೈದ್ಯರಾಗಿರುವ ಡಾ.ಅನಿಲ್ ಮಿಶ್ರಾ, ಟ್ರಸ್ಟಿಗಳೇ ನೇಮಿಸುವ ಓರ್ವ ಹಿಂದೂ ಸದಸ್ಯ, ಮಂದಿರಕ್ಕೆ ಶಿಲಾನ್ಯಾಸ ನೆರವೇರಿಸಿದ್ದ ದಲಿತ ವ್ಯಕ್ತಿ ಕಮಲೇಶ್ವರ್ ಚೌಪಾಲ್, ಟ್ರಸ್ಟಿಗಳೇ ನೇಮಕ ಮಾಡುವ ಮತ್ತೊಬ್ಬ ಹಿಂದೂ ವ್ಯಕ್ತಿ, ಕೇಂದ್ರ ಸರ್ಕಾರದ ವತಿಯಿಂದ ಓರ್ವ ಐಎಎಸ್ ಅಧಿಕಾರಿ, ರಾಜ್ಯ ಸರ್ಕಾರದ ನೇಮಕ ಮಾಡುವ ಓರ್ವ ಐಎಎಸ್ ಅಧಿಕಾರಿ, ಆಯೋಧ್ಯೆ ಜಿಲ್ಲಾಧಿಕಾರಿ, ಟ್ರಸ್ಟಿಗಳೇ ನೇಮಿಸಿರುವ ಅದ್ಯಕ್ಷಕರು ಸಮಿತಿಯಲ್ಲಿ ಸದಸ್ಯರಾಗಿ ಇರಲಿದ್ದಾರೆ. 

SCROLL FOR NEXT