ದೇಶ

ಡಿಫೆನ್ಸ್ ಎಕ್ಸ್ಪೋ 2020: ಎಕೆ-47 ಗುಂಡು ನಿಗ್ರಹಿಸುವ ವಿಶ್ವದ ಮೊದಲ ಹೆಲ್ಮೆಟ್ ಪ್ರದರ್ಶಿಸಿದ ಭಾರತ!

Srinivas Rao BV

ಲಖನೌ: ಡಿಫೆನ್ಸ್ ಎಕ್ಸ್ಪೋ-2020 ರಲ್ಲಿ ಭಾರತ ಎಕೆ-47 ಗುಂಡು ನಿಗ್ರಹಿಸುವ ಸಾಮರ್ಥ್ಯವುಳ್ಳ ಹೆಲ್ಮೆಟ್ ನ್ನು ಇಡಿ ವಿಶ್ವದಲ್ಲೇ ಮೊದಲ ಬಾರಿಗೆ ತಯಾರಿಸಿ ಪ್ರದರ್ಶನಕ್ಕೆ ಇಟ್ಟಿದೆ. 

ಭಾರತೀಯ ಸೇನೆಯ ಸೇನಾ ಇಂಜಿನಿಯರಿಂಗ್ ಕಾಲೇಜು ಈ ವಿನೂತನ ಹೆಲ್ಮೆಟ್ ನ್ನು ತಯಾರಿಸಿದ್ದು, 10 ಮೀಟರ್ ಗಳ ಅಂತರದಿಂದಲೇ ಎಕೆ-47 ಬುಲೆಟ್ ನ್ನು ನಿಗ್ರಹಿಸುವ ಸಾಮರ್ಥ್ಯ ಹೊಂದಿದ್ದು 1.4 ಕೆ.ಜಿ ತೂಕವಿದೆ. 

ಲಖನೌ ನಲ್ಲಿ ಈ ಹೆಲ್ಮೆಟ್ ಲೋಕಾರ್ಪಣೆಗೊಂಡಿದೆ. ಇದೇ ಕಾಲೇಜು ಖಾಸಗಿ ಸಂಸ್ಥೆಯ ಸಹಭಾಗಿತ್ವದಲ್ಲಿ ಭಾರತದ ಮೊದಲ ಹಾಗೂ ವಿಶ್ವದ ಅತ್ಯಂತ ಅಗ್ಗದ ಗನ್ ಶೂಟ್ ಲೊಕೇಟರ್ ನ್ನು ತಯಾರಿಸಿದ್ದು, 400 ಮೀಟರ್ ಗಳ ಅಂತರದಿಂದಲೇ ಬುಲೆಟ್ ನ ಲೊಕೇಷನ್ ನ್ನು ಪತ್ತೆ ಮಾಡುವ ಸಾಮರ್ಥ್ಯ ಹೊಂದಿದೆ. ಇದರಿಂದಾಗಿ ಭಯೋತ್ಪಾದಕರು ಇರುವ ಸ್ಥಳವನ್ನು ಗುರುತಿಸಿ ಉಗ್ರರನ್ನು ಹತ್ಯೆ ಮಾಡುವುದಕ್ಕೆ ಸಹಕಾರಿಯಾಗಲಿದೆ. 

ಲಖನೌ ನಲ್ಲಿ ಡಿಫೆನ್ಸ್ ಎಕ್ಸ್ಪೋ 11 ನೇ ಆವೃತ್ತಿಗೆ ಚಾಲನೆ ದೊರೆತಿದ್ದು ವಿಶ್ವದ ಬೇರೆ ಬೇರೆ ಭಾಗಗಳಿಂದ ಸಾವಿರಕ್ಕೂ ಹೆಚ್ಚು ರಕ್ಷಣಾ ಉತ್ಪಾದಕ ಸಂಸ್ಥೆಗಳು ಹಾಗೂ 150 ಕ್ಕೂ ಹೆಚ್ಚು ರಕ್ಷಣಾ ಉಪಕರಣಗಳಿಗೆ ಸಂಬಂಧಿಸಿದ ಸಂಸ್ಥೆಗಳು ಎಕ್ಸ್ಪೋದಲ್ಲಿ ಭಾಗವಹಿಸಿವೆ. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಫೆ.07 ರಂದು 200 ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. 

SCROLL FOR NEXT