ದೇಶ

ಅಮೃತಸರದ ಸ್ವರ್ಣಮಂದಿರದಲ್ಲಿ ಟಿಕ್‌ಟಾಕ್ ನಿಷೇಧ

Raghavendra Adiga

ಅಮೃತಸರ್: ಮಋತಸರ್ ನ ವಿಶ್ವವಿಖ್ಯಾತ ಗೋಲ್ಡನ್ ಟೆಂಪಲ್ (ಸ್ವರ್ಣ ಮಂದಿರ) ಆವರಣದೊಲಗೆ ಟಿಕ್‌ಟಾಕ್ ವೀಡಿಯೊ ಚಿತ್ರೀಕರಣವನ್ನು ನಿಷೇಧಿಸಲಾಗಿದೆ.ಶಿರೋಮಣಿ ಗುರುದ್ವಾರ ಪರಬಂಧಕ್ ಸಮಿತಿ (ಎಸ್‌ಜಿಪಿಸಿ) ಗೋಲ್ಡನ್ ಟೆಂಪಲ್ ಒಳಗೆ ಟಿಕ್‌ಟಾಕ್ ವೀಡಿಯೊ ನಿಷೇಧಿಸಿ ಆದೇಶಿಸಿದೆ.

ಟಿಕ್‌ಟಾಕ್ ವೀಡಿಯೊಗಳ ಮೂಲಕ ಸಂದರ್ಶಕರು ದೇವಾಲಯ ಆವರಣದಲ್ಲಿ ನಡೆಯುವ ನೃತ್ಯ ಹಾಗೂ ಸಂಗೀತ ಕಾರ್ಯಕ್ರಮಗಳನ್ನು ಚಿತ್ರಿಸುತ್ತಿದ್ದು ಅವು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿದೆ. ಸಿಖ್ಖರ ಪವಿತ್ರ ಧಾರ್ಮಿಕ ಸಂಸ್ಥೆಯಾದ ಎಸ್‌ಜಿಪಿಸಿ ಶನಿವಾರ ಗೋಲ್ಡನ್ ಟೆಂಪಲ್ ಸಂಕೀರ್ಣದೊಳಗೆ ಪೋಸ್ಟರ್‌ಗಳನ್ನು ಅಂಟಿಸಿ, ಹರ್ಮಂದಿರ್ ಸಾಹಿಬ್ ಒಳಗೆ ಟಿಕ್‌ಟಾಕ್ ವಿಡಿಯೋಗಳನ್ನು ಚಿತ್ರೀಕರಿಸದಂತೆ ಭಕ್ತರಿಗೆ ಎಚ್ಚರಿಕೆ ನೀಡಿದೆ.

'ಟಿಕ್‌ಟಾಕ್ ಅನ್ನು ಇಲ್ಲಿ ನಿಷೇಧಿಸಲಾಗಿದೆ' ಎಂದಿರುವ ಪೋಸ್ಟರ್ ಗಳ ಬಗೆಗೆ ಮಾತನಾಡಿದ ಅಕಾಲ್ ತಖ್ತ್ ನ ಪ್ರಧಾನ ಅರ್ಚಕ ಗಿಯಾನಿ ಹರ್ಪ್ರೀತ್ ಸಿಂಗ್ ಭಕ್ತರು, ಪ್ರವಾಸಿಗರು ಟೆಂಪಲ್ ಕಾಂಪ್ಲೆಕ್ಸ್ ಒಳಗೆ ಟಿಕ್ ಟಾಕ್ ವೀಡಿಯೊಗಳನ್ನುಗೆ ಚಿತ್ರೀಕರಿಸುವುದನ್ನು ಮುಂದುವರಿಸಿದರೆ ಮೊಬೈಲ್ ಫೋನ್ ನಿಷೇಧದ ಕುರಿತು ಯೋಚಿಸಬೇಕಾಗುತ್ತದೆ ಎಂದು ಹೇಳಿದ್ದರು.

"ಎಲ್ಲಾ ಭಕ್ತರು ಯಾವುದೇ ತೊಂದರೆಯಿಲ್ಲದೆ ಸ್ವರಣ ಮಂದಿರಕ್ಕೆ ಭೇಟಿ ನೀಡಬೇಕೆಂದು ನಾವು ಬಯಸುತ್ತೇವೆ ಮತ್ತು ಅಂತಹ ಯಾವುದೇ (ಮೊಬೈಲ್) ನಿಷೇಧವನ್ನು ವಿಧಿಸುವ ಬಗೆಗೆ ಯೋಚಿಸಿಲ್ಲ. , ಆದರೆ ಟಿಕ್‌ಟಾಕ್‌ನ ಬಗೆಗೆ ಹೇಳುವಾಗ ಭವಿಷ್ಯದಲ್ಲಿ ಗೋಲ್ಡನ್ ಟೆಂಪಲ್ ಒಳಗೆ ಮೊಬೈಲ್ ನಿಷೇಧಿಸುವ ಬಗೆಗೆ ಯೋಚಿಸುವುದು ಸರಿ ಎಂದು ನಾನು ಭಾವಿಸುತ್ತೇನೆ" ಜತೇದಾರ್ ಶುಕ್ರವಾರ ಅಮೃತಸರದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದರು.

ಆವರಣದೊಳಗೆ ಫೋಟೋ ತೆಗೆಯುವುದನ್ನು ನಿಷೇಧಿಸಿದ ನಂತರ  ಕೆಲವು ಭಕ್ತರು 'ಸೇವದಾರ್(ಕಾರ್ಮಿಕರು) ಅವರೊಡನೆ ವಾದ ನಡೆಸಿದ್ದಾರೆ. ಆಧ್ಯಾತ್ಮಿಕ ವಾತಾವರಣಕ್ಕೆ ಯಾವುದೇ ತೊಂದರೆ ಉಂಟಾಗದಂತೆ ಗೋಲ್ಡನ್ ಟೆಂಪಲ್‌ನ ಆವರಣದಲ್ಲಿ ಛಾಯಾಚಿತ್ರ ಹಾಗೂ ವೀಡಿಯೋ ಚಿತ್ರೀಕರಣವನ್ನು ಎಸ್‌ಜಿಪಿಸಿ ನಿಷೇಧಿಸಿದೆ.

ಕೆಲವು ದಿನಗಳ ಹಿಂದೆ, ಪಂಜಾಬಿ ಹಾಡಿನ ಹಿನ್ನೆಲೆಯಲ್ಲಿ ಮೂವರು ಯುವತಿಯರು ಚಿತ್ರೀಕರಿಸಿದ ಟಿಕ್‌ಟಾಕ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಎಸ್‌ಜಿಪಿಸಿಯನ್ನುಈ ಕಠಿಣ ನಿರ್ಧಾರ ತಳೆಯಲು ಪ್ರೇರಿಸಿದೆ. ದರ್ಬಾರ್ ಸಾಹಿಬ್ ಸಂಕೀರ್ಣದೊಳಗೆ ಡ್ಯಾನ್ಸ್ ವಿಡಿಯೋವನ್ನು ಚಿತ್ರೀಕರಿಸಿದ ನಂತರ ಸಿಖ್ಖರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಕ್ಕಾಗಿ ಯುವತಿಯರ  ಮೇಲೆ ಪೊಲೀಸ್ ದೂರು ದಾಖಲಿಸಲಾಗಿದೆ.ಆ ನಂತರ ಯುವತಿಯರು  ಕ್ಷಮೆ ಯಾಚಿಸಿದ್ದರು. 

SCROLL FOR NEXT