ದೇಶ

ದೆಹಲಿ ಚುನಾವಣೆ ಫಲಿತಾಂಶ: ಎಲ್ಲಾ 7 ಲೋಕಸಭಾ ಕ್ಷೇತ್ರಗಳಲ್ಲಿ 'ಆಪ್' ಹೆಜ್ಜೆಗುರುತು ಪ್ರಬಲ 

Sumana Upadhyaya

ನವದೆಹಲಿ: ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿಯಿಂದ ಪ್ರಚಾರ ಮತ್ತು ಸ್ಪರ್ಧೆಯಲ್ಲಿ ತೀವ್ರ ಪೈಪೋಟಿ ಎದುರಿಸಿದರೂ ಕೂಡ ದೆಹಲಿಯ ಎಲ್ಲಾ 7 ಲೋಕಸಭಾ ಕ್ಷೇತ್ರಗಳಲ್ಲಿ ತನ್ನ ಪ್ರಾಬಲ್ಯ ಮೆರೆಯುವಲ್ಲಿ ಆಮ್ ಆದ್ಮಿ ಪಾರ್ಟಿ ಮುಂಚೂಣಿಯಲ್ಲಿದೆ.

ಸದ್ಯದ ಮತ ಎಣಿಕೆ ಟ್ರೆಂಡ್ ನೋಡಿದರೆ ಆಮ್ ಆದ್ಮಿ ಪಾರ್ಟಿ 54 ಕ್ಷೇತ್ರಗಳಲ್ಲಿ ಬಿಜೆಪಿ 15 ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದರೆ ಕಾಂಗ್ರೆಸ್ ಇನ್ನೂ ಖಾತೆಯನ್ನು ತೆರೆಯುವ ಲಕ್ಷಣ ಕಾಣುತ್ತಿಲ್ಲ.


ಮೊನ್ನೆ 8ರಂದು ನಡೆದ ದೆಹಲಿಯ 70 ವಿಧಾನಸಭಾ ಕ್ಷೇತ್ರಗಳ ಚುನಾವಣೆಯಲ್ಲಿ ಒಟ್ಟಾರೆ ಶೇಕಡಾ 62.59ರಷ್ಟು ಮತದಾನವಾಗಿತ್ತು. ಈಗಿನ ಟ್ರೆಂಡ್ ಪ್ರಕಾರ ಚಾಂದಿ ಚೌಕ್ ಲೋಕಸಭಾ ಕ್ಷೇತ್ರದಲ್ಲಿ 8 ಸ್ಥಾನಗಳಲ್ಲಿ ಆಪ್ ಮುಂದಿದ್ದು ಬಿಜೆಪಿ ಇಲ್ಲಿ ಒಂದು ಸ್ಥಾನಗಳಲ್ಲಿ ಮುಂದಿದೆಯಷ್ಟೆ. 


ಪೂರ್ವ ದೆಹಲಿ ಲೋಕಸಭಾ ಕ್ಷೇತ್ರದ 7 ವಿಧಾನಸಭಾ ಕ್ಷೇತ್ರಗಳಲ್ಲಿ ಆಪ್ ಮುಂದಿದೆ. ಬಿಜೆಪಿ 3 ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದೆ. ನವದೆಹಲಿ ಲೋಕಸಭಾ ಕ್ಷೇತ್ರದ 7 ಸ್ಥಾನಗಳಲ್ಲಿ ಆಪ್ ಮತ್ತು ಬಿಜೆಪಿ 3 ಕ್ಷೇತ್ರಗಳಲ್ಲಿ ಮುಂದಿದೆ.ದಕ್ಷಿಣ ದೆಹಲಿ ಮತ್ತು ಈಶಾನ್ಯ ದೆಹಲಿ ಲೋಕಸಭಾ ಕ್ಷೇತ್ರಗಳಲ್ಲಿ ತಲಾ ಎರಡು ಸ್ಥಾನಗಳಲ್ಲಿ ಬಿಜೆಪಿ ಮುಂದಿದೆ. ಆಪ್ ಈ ಎರಡೂ ಕ್ಷೇತ್ರಗಳಲ್ಲಿ 7 ಸ್ಥಾನಗಳಲ್ಲಿ ಮುಂಚೂಣಿಯಲ್ಲಿದೆ.


ಪಶ್ಚಿಮ ದೆಹಲಿಯಲ್ಲಿ ಬಿಜೆಪಿ ಇದೇ ಮೊದಲ ಬಾರಿಗೆ 3 ಕ್ಷೇತ್ರಗಳಲ್ಲಿ ಆಪ್ 6 ಕ್ಷೇತ್ರಗಳಲ್ಲಿ ಮುಂದಿದೆ. ನೈರುತ್ಯ ದೆಹಲಿಯಲ್ಲಿ ಆಪ್ 9 ಕ್ಷೇತ್ರಗಳಲ್ಲಿ ಮತ್ತು ಬಿಜೆಪಿ 1 ಕ್ಷೇತ್ರದಲ್ಲಿ ಮುಂದಿದೆ.


ನವದೆಹಲಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಿಜೆಪಿಯ ಸುನಿಲ್ ಯಾದವ್ ಅವರಿಂದ 2 ಸಾವಿರ ಮತಗಳ ಮುಂದಿದ್ದಾರೆ. 


1998ರಿಂದ 2013ರವರೆಗೆ 15 ವರ್ಷಗಳ ಕಾಲ ದೆಹಲಿ ಆಳಿದ್ದ ಕಾಂಗ್ರೆಸ್ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶೂನ್ಯ ಫಲಿತಾಂಶ ಕಂಡಿತ್ತು. ಅದು ಈ ಬಾರಿ ಕೂಡ ಅದೇ ಮುಂದುವರಿಯುತ್ತದೆ ಎಂಬ ಲಕ್ಷಣ ಕಾಣುತ್ತಿದೆ. ಇನ್ನು ಬಿಜೆಪಿ ಕಳೆದ ಚುನಾವಣೆಯಲ್ಲಿ 3 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು.

SCROLL FOR NEXT