ದೇಶ

ಜಾರ್ಖಂಡ್ ಪ್ರಮುಖ ರಾಜಕೀಯ ಪಕ್ಷ ಜೆವಿಎಂ (ಪಿ) ಬಿಜೆಪಿಯೊಂದಿಗೆ ವಿಲೀನಕ್ಕೆ ದಿನಾಂಕ ಫಿಕ್ಸ್

Raghavendra Adiga

ರಾಂಚಿ: ಬಾಬುಲಾಲ್ ಮರಾಂಡಿ ನೇತೃತ್ವದ ಜಾರ್ಖಂಡ್ ವಿಕಾಸ್ ಮೋರ್ಚಾ (ಪ್ರಜಾತಾಂತ್ರಿಕ್) ಪಕ್ಷ ಫೆಬ್ರವರಿ 17 ರಂದು ಬಿಜೆಪಿಯೊಂದಿಗೆ ವಿಲೀನಗೊಳ್ಳುವ ನಿರ್ಧಾರವನ್ನು ಪ್ರಕಟಿಸಿದೆ.

ಪಕ್ಷಬಿಜೆಪಿಯೊಂದಿಗೆ ವಿಲೀನಗೊಳ್ಳಲು ಪಕ್ಷದ ಕೇಂದ್ರ ಸಮಿತಿ ಸಭೆ ಸರ್ವಾನುಮತದಿಂದ ಅನುಮೋದನೆ ನೀಡಿದೆ ಎಂದು ಜೆವಿಎಂ (ಪಿ) ಅಧ್ಯಕ್ಷ ಮರಾಂಡಿ  ಸುದ್ದಿಗಾರರಿಗೆ ತಿಳಿಸಿದರು.

ಫೆಬ್ರವರಿ 17 ರಂದು ರಾಂಚಿಯ  ಪ್ರಭಾತ್ ತಾರಾ ಮೈದಾನದಲ್ಲಿ ನಡೆಯಲಿರುವ ವಿಲೀನ ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡಾ ಉಪಸ್ಥಿತರಿರುತ್ತಾರೆ ಎಂದು ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ತಿಳಿಸಿದ್ದಾರೆ. ಪಕ್ಷದ ಶಾಸಕರಾದ ಪ್ರದೀಪ್ ಯಾದವ್ ಮತ್ತು ಬಂಧು ಟರ್ಕಿಯನ್ನು ಉಚ್ಚಾಟನೆ  ಮಾಡಲು ಪಕ್ಷದ ಕೇಂದ್ರ ಸಮಿತಿಯು ಅನುಮೋದನೆ ನೀಡಿದೆ ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್ ಮುಖಂಡರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರನ್ನು ನವದೆಹಲಿಯಲ್ಲಿ ಭೇಟಿಯಾದ ನಂತರ ಜೆವಿಎಂ (ಪಿ)ಕಳೆದ ವಾರ ಯಾದವ್ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವ ದಿಂದ ಹೊರಹಾಕಲಾಗಿತ್ತು. ಪಕ್ಷ ವಿರೋಧಿ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಹದಿನೈದು ದಿನಗಳಲ್ಲಿ ಟಿರ್ಕಿಯ ನಂತರ ಉಚ್ಚಾಟಿಸಲ್ಪಟ್ಟ ಎರಡನೇ ಶಾಸಕ ಯಾದವ್ ಅವರಾಗಿದ್ದಾರೆ.

ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜೆವಿಎಂ (ಪಿ) ಮೂರು ಸ್ಥಾನಗಳನ್ನು ಗಳಿಸಿತ್ತು.ಯಾದವ್ ಮತ್ತು ಟಿರ್ಕಿ ಅವರಲ್ಲದೆ ಪಕ್ಷದ ಮುಖ್ಯಸ್ಥ ಬಾಬುಲಾಲ್ ಮರಾಂಡಿ ಸಹ ಜಯ ಗಳಿಸಿದ್ದರು.

SCROLL FOR NEXT