ದೇಶ

ಅಸ್ಸಾಂ ಎನ್ ಆರ್ ಸಿ ಡಾಟಾ ಆಫ್ ಲೈನ್: ಸ್ಪಷ್ಟನೆ ನೀಡಿದ ಗೃಹ ಸಚಿವಾಲಯ 

Srinivas Rao BV

ಅಸ್ಸಾಂ ನ ಎನ್ ಆರ್ ಸಿ ಡಾಟಾ ಆಫ್ ಲೈನ್ ಕೇಂದ್ರ ಗೃಹ ಸಚಿವಾಲಯದ ಅಧಿಕೃತ ವೆಬ್ ಸೈಟ್ ನಿಂದ ಆಫ್ ಲೈನ್ ಆಗಿದ್ದು ಆತಂಕ ಮೂಡಿಸಿತ್ತು. 

ಡಾಟಾ ಆಫ್ ಲೈನ್ ಆಗಿದ್ದ ಕುರಿತು ಸ್ಪಷ್ಟನೆ ನೀಡಿರುವ ಗೃಹ ಸಚಿವಾಲಯ, ಕೆಲವು ತಾಂತ್ರಿಕ ದೋಷಗಳು ಎದುರಾಗಿದೆ. ಸಂಗ್ರಹಿಸಲ್ಪಟ್ಟಿದ್ದ ಮಾಹಿತಿಗಳೆಲ್ಲಾ ಸುರಕ್ಷಿತವಾಗಿದ್ದು, ದೋಷಗಳನ್ನು ಶೀಘ್ರವೇ ಪರಿಹರಿಸಲಾಗುವುದು ಎಂದು ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ.

ಎನ್ ಆರ್ ಸಿ ರಾಜ್ಯ ಸಂಯೋಜಕ ಹಿತೇಶ್ ದೇವ್ ಶರ್ಮಾ, ಡಾಟಾ ಆಫ್ ಲೈನ್ ಮಾಡಿರುವುದನ್ನು ಒಪ್ಪಿಕೊಂಡಿದ್ದು ಈ ಘಟನೆಯಲ್ಲಿ ದುರುದ್ದೇಶವಿದ್ದ ಆರೋಪವನ್ನು ತಳ್ಳಿಹಾಕಿದ್ದಾರೆ. 

ಎನ್ ಆರ್ ಸಿಗೆ ಐಟಿ ಸಂಸ್ಥೆ ವಿಪ್ರೋ ಕ್ಲೌಡ್ ಸೇವೆಯನ್ನು ಒದಗಿಸುತ್ತಿತ್ತು, 2019 ರ ಅಕ್ಟೋಬರ್ 19 ರ ವರೆಗೆ ಒಪ್ಪಂದದ ಅವಧಿ ಇತ್ತು. ಆದರೆ ಇದನ್ನು ಈ ಹಿಂದೆ ಇದ್ದ ಸಂಯೋಜಕರು ವಿಸ್ತರಣೆ ಮಾಡಲಿಲ್ಲ. ಇದರ ಪರಿಣಾಮ ಡಿಸೆಂಬರ್ 15 ರ ನಂತರ ಡಾಟಾ ಆಫ್ ಲೈನ್ ಆಗಿತ್ತು ಎಂದು ಶರ್ಮಾ ಹೇಳಿದ್ದಾರೆ. 

ಜ.30ರ ಸಭೆಯಲ್ಲಿ ವಿಪ್ರೋ ಜೊತೆಗಿನ ಒಪ್ಪಂದವನ್ನು ವಿಸ್ತರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವುದರ ಬಗ್ಗೆ ಚರ್ಚಿಸಲಾಗಿದೆ ಎಂದು ಹಿತೇಶ್ ದೇವ್ ಶರ್ಮಾ ಹೇಳಿದ್ದಾರೆ.

SCROLL FOR NEXT