ದೇಶ

ಪೂರ್ವ-ಪಶ್ಚಿಮ ಮೆಟ್ರೋ ಉದ್ಘಾಟನೆಗೆ ಮಮತಾಗಿಲ್ಲ ಆಹ್ವಾನ, ಟಿಎಂಸಿಯಿಂದ ಬಹಿಷ್ಕಾರ

Lingaraj Badiger

ಕೋಲ್ಕತಾ: ಪೂರ್ವ-ಪಶ್ಚಿಮ ಮೆಟ್ರೋ ಕಾರಿಡಾರ್ ಉದ್ಘಾಟನೆಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಆಹ್ವಾನ ನೀಡಲು ಕೇಂದ್ರ ಸರ್ಕಾರ ನಿರಾಕರಿಸಿದ್ದು, ಇದನ್ನು ಖಂಡಿಸಿ ಆಡಳಿತರೂಢ ತೃಣಮೂಲ ಕಾಂಗ್ರೆಸ್ ಪ್ರತಿಭಟನೆ ಮಾಡಲು ನಿರ್ಧರಿಸಿದೆ.

ಪೂರ್ವ-ಪಶ್ಚಿಮ ಮೆಟ್ರೋ ಉದ್ಘಾಟನಾ ಕಾರ್ಯಕ್ರಮ ಬಹಿಷ್ಕರಿಸಲು ನಿರ್ಧರಿಸಿರುವುದಾಗಿ ಟಿಎಂಸಿ ಸಂಸದ ಕಕೋಲಿ ಘೋಷ್ ದಸ್ತಿದಾರ್ ಹಾಗೂ ಶಾಸಕ ಸುಜಿತ್ ಬೋಸ್ ಅವರು ಹೇಳಿದ್ದಾರೆ.

ಪೂರ್ವ-ಪಶ್ಚಿಮ ಮೆಟ್ರೋ ಕಾರಿಡಾರ್ ನ ಮೊದಲ ಹಂತಕ್ಕೆ ಇಂದು ಸಂಜೆ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರು ಚಾಲನೆ ನೀಡುತ್ತಿದ್ದಾರೆ.

ಮಮತಾ ಬ್ಯಾನರ್ಜಿ ಅವರು 2009 ರಿಂದ 2011ರ ವರೆಗೆ ರೈಲ್ವೆ ಸಚಿವರಾಗಿದ್ದ ವೇಳೆ ಪೂರ್ವ-ಪಶ್ಚಿಮ ಮೆಟ್ರೋ ಕಾರಿಡಾರ್ ಯೋಜನೆ ಘೋಷಿಸಿದ್ದರು. ಅಲ್ಲದೆ ಇದಕ್ಕಾಗಿ ರೈಲ್ವೆ ಬಜೆಟ್ ನಲ್ಲಿ ಅನುದಾನ ಸಹ ನೀಡಿದ್ದರು. ಈಗ ಯೋಜನೆ ಉದ್ಘಾಟನೆಗೆ ಅವರಿಗೆ ಆಹ್ವಾನ ನೀಡದಿರುವುದು ಪಶ್ಚಿಮ ಬಂಗಾಳ ಜನತೆಗೆ ಮಾಡಿದ ಅವಮಾನ ಎಂದು ದಸ್ತಿದಾರ್ ಅವರು ಪಿಟಿಐ ತಿಳಿಸಿದ್ದಾರೆ.

SCROLL FOR NEXT