ದೇಶ

ಪುಲ್ವಾಮ ದಾಳಿ ಹುತಾತ್ಮ ಯೋಧರಿಗೆ ಗೌರವ ಅರ್ಪಿಸಿದ ಸಿಆರ್ ಪಿಎಫ್

Srinivasamurthy VN

ಶ್ರೀನಗರ: ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಕಳೆದ 2019ರ ಫೆಬ್ರವರಿ 14ರಂದು ನಡೆದಿದ್ದ ಉಗ್ರರ ದಾಳಿಯಲ್ಲಿ ಹುತಾತ್ಮರಾಗಿದ್ದ ಯೋಧರ ಸ್ಮರಣಾರ್ಥ ಸ್ಮಾರಕ ಸ್ತಂಭ ಸಮರ್ಪಣೆ ಮಾಡಿ ಕೇಂದ್ರ ಮೀಸಲು ಪೊಲೀಸ್‌ ಪಡೆ ಗೌರವ ಸಲ್ಲಿಸಿದೆ. 

ಪುಲ್ವಾಮದ ಲೆಟ್‌ಪೋರಾ ಎಂಬಲ್ಲಿರುವ ಸಿಆರ್‌ಪಿಎಫ್‌ ತರಬೇತಿ ಕೇಂದ್ರದಲ್ಲಿ ಇಂದು ನಡೆಯುತ್ತಿರುವ ಸಮಾರಂಭದಲ್ಲಿ ಸಿಆರ್‌ಪಿಎಫ್‌ನ ವಿಶೇಷ ಮಹಾ ನಿರ್ದೇಶಕ ಜೂಲ್ಫಿಕರ್‌ ಹಸನ್‌, ಕಾಶ್ಮೀರ ವಲಯದ ಪೊಲೀಸ್‌ ಮಹಾ ನಿರ್ದೇಶಕ ರಾಜೇಶ್‌ ಕುಮಾರ್‌ ಮತ್ತು ಹಿರಿಯ ಅಧಿಕಾರಿಗಳು ಭಾಗವಹಿಸಿದ್ದಾರೆ. 

ಕಾರ್ಯಕ್ರಮದಲ್ಲಿ ಯೋಧರ ಸ್ಮಾರಕ ಸ್ತಂಭವನ್ನು ಅನಾವರಣ ಮಾಡಲಾಗಿದ್ದು, ಅಂದು ಉಗ್ರ ದಾಳಿಯಲ್ಲಿ ಹುತಾತ್ಮರಾದ ಎಲ್ಲ ಯೋಧರ ಹೆಸರುಗಳನ್ನು ಈ ಸ್ತಂಭದ ಮೇಲೆ ಬರೆಯಲಾಗಿದೆ. ಅಲ್ಲದೆ ಸ್ಮಾರಕ ಸ್ತಂಭ ಉದ್ಘಾಟನೆ ಬಳಿಕ ಯೋಧರಿಂದ ರಕ್ತದಾನ ಶಿಬಿರವನ್ನೂ ಆಯೋಜಿಸಲಾಗಿದೆ. 

ಈ ಕುರಿತು ಮಾತನಾಡಿದ ಸಿಆರ್‌ಪಿಎಫ್‌ನ ವಿಶೇಷ ಮಹಾ ನಿರ್ದೇಶಕ ಜೂಲ್ಫಿಕರ್‌ ಹಸನ್‌ ಅವರು, ಯೋಧರು ಹುತಾತ್ಮರಾದ ಈ ದಿನ ಅವರ ಮನೆಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಏರ್ಪಾಡಾಗುತ್ತವೆ. ಹಾಗಾಗಿಯೇ ಈ ಸಮಾರಂಭಕ್ಕೆ ಯೋದರ ಕುಟುಂಬಸ್ಥರನ್ನು ಆಹ್ವಾನಿಸಿಲ್ಲ,’ ಎಂದು ತಿಳಿಸಿದರು. 

2019ರ ಫೆ. 14ರಂದು ಪುಲ್ವಾಮದಲ್ಲಿ ಸಿಆರ್‌ಪಿಎಫ್‌ ಯೋಧರಿದ್ದ ಬಸ್‌ ಮೇಲೆ ಜೈಷ್‌ ಏ ಮೊಹಮದ್‌ ಸಂಘಟನೆ ಉಗ್ರರು ಬಾಂಬ್‌ ದಾಳಿ ನಡೆಸಿದ್ದರು. ಘಟನೆಯಲ್ಲಿ 40 ಯೋದರು  ಹುತಾತ್ಮರಾಗಿದ್ದರು.

SCROLL FOR NEXT