ದೇಶ

ಕೇಜ್ರಿವಾಲ್ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಇತರೆ ಗಣ್ಯರಿಗಿಲ್ಲ ಆಹ್ವಾನ

Manjula VN

ನವದೆಹಲಿ: ಪ್ರಚಂಡ ಬಹುಮತದೊಂದಿಗೆ ದೆಹಲಿ ಗದ್ದುಗೆ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುವ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಸ್ ಅವರ ಪದಗ್ರಹಣ ಕಾರ್ಯಕ್ರಮಕ್ಕೆ ಯಾವುದೇ ರಾಜ್ಯದ ಮುಖ್ಯಮಂತ್ರಿಗಳು ಅಥವಾ ರಾಜಕೀಯ ಮುಖಂಡರಿಗೆ ಆಮ್ ಆದ್ಮಿ ಪಕ್ಷ ಆಹ್ವಾನ ನೀಡಿಲ್ಲ ಎಂದು ತಿಳಿದುಬಂದಿದೆ. 

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗೋಪಾಲ್ ರಾಯ್ ಅವರು. ಫೆ.16ರ ಪ್ರಮಾಣವಚನ ಕಾರ್ಯಕ್ರಮಕ್ಕೆ ದೇಶದ ಯಾವುದೇ ರಾಜಕೀಯ ಮುಖಂಡರಿಗೆ ಆಹ್ವಾನ ನೀಡಿಲ್ಲ ಎಂದು ಹೇಳಿದ್ದಾರೆ. 

ಆಮ್ ಆದ್ಮಿ ಪಕ್ಷವನ್ನು ಮರಳಿ ಅಧಿಕಾರಕ್ಕೆ ತಂಡ ದೆಹಲಿ ನಾಗರೀಕರ ಸಮ್ಮುಖದಲ್ಲಿಯೇ ಅರವಿಂದ ಕೇಜ್ರಿವಾಲ್ ಅವರು ಅಧಿಕಾರ ಸ್ವೀಕಾರ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ. ದೆಹಲಿಯಲ್ಲಿ 70 ಕ್ಷೇತ್ರಗಳ ಪೈಕಿ ಆಪ್ ಪಕ್ಷ 62 ಸ್ಥಾನ, ವಿರೋಧ ಪಕ್ಷ ಬಿಜೆಪಿ ಕೇವಲ 8 ಸ್ಥಾನ ಹಾಗೂ ಕಾಂಗ್ರೆಸ್ ಶೂನ್ಯ ಸಂಪಾದನೆ ಮಾಡಿದೆ. 

ಇನ್ನು ಕೇಜ್ರಿವಾಲ್ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ವಿಶೇಷ ಅತಿಥಿಯಾಗಿ ಒಂದು ವರ್ಷದ ಮಗುವೊಂದು ಪಾಲ್ಕೊಳ್ಳಲಿದೆ. 

ದೆಹಲಿ ವಿಧಾನಸಭೆ ಫಲಿತಾಂಶದ ದಿನ ಆದ್ಮಿ ಆದ್ಮಿ ಕಚೇರಿ ಬಳಿ ಸಂಭ್ರಮಿಸುವ ವೇಳೆ ಈ ಒಂದು ವರ್ಷದ ಅವ್ಯನ್ ಥೋಮರ್ ಎಂಬ ಮಗು ಕೇಜ್ರಿವಾಲ್ ಅವರ ರೀತಿಯಲ್ಲಿಯೇ ವೇಷ ಮಾಡಿಕೊಂಡು ಕಾಣಿಸಿಕೊಂಡಿತ್ತು. ಈ ಫೋಟೋ ಸಾಕಷ್ಟು ವೈರಲ್ ಆಗಿತ್ತು. ಇದನ್ನು ಗಮನಿಸಿದ ಪಕ್ಷ ಮುಖಂಡರು ಫೆ.16ರಂದು ಬೆಳಿಗ್ಗೆ ರಾಮಲೀಲಾ ಮೈದಾನದಲ್ಲಿ ನಡೆಯಲಿರುವ ಪ್ರಮಾಣವಚನ ಸಮಾರಂಭದಲ್ಲಿ ಬೇಬಿ ಮಫ್ಲರ್ ಮ್ಯಾನ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದೆ ಎಂದು ಟ್ವೀಟರ್ ನಲ್ಲಿ ಪ್ರಕಟಿಸಿದೆ. 

SCROLL FOR NEXT