ದೇಶ

'ಸುಷ್ಮಾ ಸ್ವರಾಜ್ ಒಬ್ಬ ಅಸಾಧಾರಣ ಸಹೋದ್ಯೋಗಿ ಮತ್ತು ಅತ್ಯುತ್ತಮ ಮಂತ್ರಿಯಾಗಿದ್ದರು':ಪ್ರಧಾನಿ ಮೋದಿ ಸ್ಮರಣೆ  

Sumana Upadhyaya

ನವದೆಹಲಿ: ಫೆಬ್ರವರಿ 14 ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಜನ್ಮದಿನ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ಮರಿಸಿಕೊಂಡಿದ್ದಾರೆ. 


''ಒಬ್ಬ ಅಸಾಧಾರಣ ಸಹೋದ್ಯೋಗಿ, ಘನತೆ, ಸಭ್ಯತೆ ಮತ್ತು ಸಾರ್ವಜನಿಕ ಸೇವೆಗೆ ಅಚಲವಾದ ಬದ್ಧತೆಯನ್ನು ನಿರೂಪಿಸಿದ ಮಹೋನ್ನತ ಮಂತ್ರಿ'' ಎಂದು ಸುಷ್ಮಾ ಸ್ವರಾಜ್ ಅವರನ್ನು ಪ್ರಧಾನಿ ಬಣ್ಣಿಸಿದ್ದಾರೆ.


ಭಾರತದ ಮೌಲ್ಯ ಮತ್ತು ತತ್ವ, ನೈತಿಕತೆಗಳ ಮೇಲೆ ದೃಢ ನಂಬಿಕೆ ಇರಿಸಿಕೊಂಡಿದ್ದ ಸುಷ್ಮಾ ಸ್ವರಾಜ್ ಅವರಿಗೆ ದೇಶದ ಬಗ್ಗೆ ಬಹುದೊಡ್ಡ ಕನಸುಗಳಿದ್ದವು. ಅವರೊಬ್ಬ ಅಸಾಧಾರಣ ಸಹೋದ್ಯೋಗಿ ಮತ್ತು ಅದ್ವಿತೀಯ ಮಂತ್ರಿಯಾಗಿದ್ದರು ಎಂದು ನೆನಪಿಸಿಕೊಂಡಿದ್ದಾರೆ.


ಹಿಂದಿನ ಎನ್ ಡಿಎ ಸರ್ಕಾರದಲ್ಲಿ ವಿದೇಶಾಂಗ ಇಲಾಖೆ ಖಾತೆ ವಹಿಸಿದ್ದ ಸುಷ್ಮಾ ಸ್ವರಾಜ್ ಅವರು ಕಳೆದ ವರ್ಷ ಆಗಸ್ಟ್ 6ರಂದು ಹೃದಯಾಘಾತದಿಂದ ನಿಧನ ಹೊಂದಿದ್ದರು. ಅವರ ಜನ್ಮದಿನದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ನಿನ್ನೆ ದೆಹಲಿಯಲ್ಲಿರುವ ಪ್ರವಾಸಿ ಭಾರತೀಯ ಕೇಂದ್ರ ಮತ್ತು ವಿದೇಶಾಂಗ ಸೇವೆ ಸಂಸ್ಥೆಗೆ ಸುಷ್ಮಾ ಸ್ವರಾಜ್ ಅವರ ಹೆಸರನ್ನು ನಾಮಕರಣ ಮಾಡಿದೆ. 

SCROLL FOR NEXT