ದೇಶ

ಕೋವಿದ್-19: ಐಟಿಬಿಪಿ ಶಿಬಿರದಲ್ಲಿದ್ದವರ ಶುಶ್ರೂಷೆ ನಡೆಸಿದ ವೈದ್ಯರು, ಅಧಿಕಾರಿಗಳಿಗೆ ಪ್ರಧಾನಿ ಪ್ರಶಂಸೆ

Srinivasamurthy VN

ನವದೆಹಲಿ: ಚೀನಾದ ವುಹಾನ್‌ ಪ್ರಾಂತ್ಯದಿಂದ ಕರೆ ತಂದು ಚಾವ್ಲಾದ ಐಟಿಬಿಪಿ ಶಿಬಿರದಲ್ಲಿರಿಸಿದವರಿಗೆ ಚಿಕಿತ್ಸೆ ನೀಡುತ್ತಿರುವ 10 ವೈದ್ಯರು ಮತ್ತು ಶುಶ್ರೂಷಾ ಅಧಿಕಾರಿಗಳ ತಂಡದ ಪ್ರಯತ್ನವನ್ನು ಶ್ಲಾಘಿಸಿರುವ ಪ್ರಧಾನಿ ನರೇಂದ್ರ ಮೋದಿ, ಸೋಮವಾರ ಇದು "ವೈವಿಧ್ಯತೆಯ ಶಕ್ತಿಯಾಗಿದೆ" ಎಂದು ಬಣ್ಣಿಸಿದ್ದಾರೆ.

ಐಟಿಬಿಪಿ ಶಿಬಿರದಲ್ಲಿದ್ದ ಎಲ್ಲಾ 406 ಮಂದಿಯ ಪರೀಕ್ಷೆಯಲ್ಲಿ ಕೋವಿಡ್- 19 ನಕಾರಾತ್ಮಕವಾಗಿರುವ ಬಗ್ಗೆ ವರದಿ ಬಂದ ನಂತರ ಪ್ರಧಾನಮಂತ್ರಿಯವರಿಂದ ಈ ಪ್ರಶಂಸಾ ಪತ್ರ ಬಂದಿದೆ. ಇಲ್ಲಿನ ಐಟಿಬಿಪಿ ಶಿಬಿರದಲ್ಲಿರುವ ಎಲ್ಲಾ 406 ಭಾರತೀಯರ ಅಂತಿಮ ವರದಿಯಲ್ಲಿ ಯಾವುದೇ ವೈರಸ್‌ ಸೋಂಕಿನ ಲಕ್ಷಣಗಳು ಇಲ್ಲ ಎಂದು ದೃಢಪಟ್ಟ ಬಳಿಕ ಅವರನ್ನು ಹಂತ ಹಂತವಾಗಿ ಅವರ ಮನೆಗಳಿಗೆ ಕಳುಹಿಸಲಾಗುತ್ತದೆ.

ಇದೇ ವಿಚಾರವನ್ನು ಕೇಂದ್ರ ಸಚಿವ ಡಾ.ಹರ್ಷವರ್ಧನ್ ಟ್ವೀಟ್ ಮಾಡಿದ್ದು, 406 ಮಂದಿಯ ವೈದ್ಯಕೀಯ ತಪಾಸಣೆ ಬಳಿಕ ಅವರನ್ನು ಮನೆಗೆ ವಾಪಸ್ ಕಳುಹಿಸಲಾಗುತ್ತದೆ ಎಂದು ಹೇಳಿದ್ದಾರೆ.

ಶಿಬಿರದಲ್ಲಿ ಆರ್ ಎಂಎಲ್ ಆಸ್ಪತ್ರೆ, ಸಫ್ದರ್ ಜಂಗ್ ಆಸ್ಪತ್ರೆಯ ಹಲವು ವೈದ್ಯಕೀಯ ಸಿಬ್ಬಂದಿಗಳು ವುಹಾನ್ ನಿಂದ ಭಾರತಕ್ಕೆ ಆಗಮಿಸಿದ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಈ ವರೆಗೂ ವುಹಾನ್ ನಿಂದ ಭಾರತಕ್ಕೆ 645 ಮಂದಿ ಭಾರತೀಯರನ್ನು ಮತ್ತು 7 ಮಾಲ್ಡೀವ್ಸ್ ಪ್ರಜೆಗಳನ್ನು ಕರೆತರಲಾಗಿದೆ. 

SCROLL FOR NEXT