ದೇಶ

ನಿರ್ಭಯಾ ಅತ್ಯಾಚಾರಿ ವಿನಯ್ ಶರ್ಮಾ ತಿಹಾರ್ ಜೈಲಿನಲ್ಲಿ 'ಉಪವಾಸ ಪ್ರತಿಭಟನೆ' 

Nagaraja AB

ನವದೆಹಲಿ:ನಿರ್ಭಯಾ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ದಿನಗಣನೆ ಎದುರಿಸುತ್ತಿರುವ ಆರೋಪಿಗಳಲ್ಲಿ ಒಬ್ಬನಾದ ಮುಕೇಶ್ ಕುಮಾರ್ ಸಿಂಗ್  ತಮ್ಮ ಪರ ವಕೀಲ ವೃಂದಾ ಗ್ರೋವರ್  ವಕಾಲತ್ತು ವಹಿಸುವುದು ಬೇಡ ಎಂದು ನ್ಯಾಯಾಲಯದಲ್ಲಿ ಇಂದು ಹೇಳಿದ್ದಾನೆ. ಇದರಿಂದಾಗಿ ಇದೀಗ ಮುಕೇಶ್ ಸಿಂಗ್ ಗೆ ವಕೀಲ ರವಿ ಕ್ವಾಜಿ ಅವರನ್ನು ನ್ಯಾಯಾಲಯ ನೇಮಕ ಮಾಡಿದೆ.

ಮತ್ತೋರ್ವ ಆರೋಪಿ ವಿನಯ್ ಶರ್ಮಾ ತಿಹಾರ್ ಜೈಲಿನಲ್ಲಿ ಉಪವಾಸ ಮುಷ್ಕರಕ್ಕೆ ಕುಳಿತಿದ್ದಾನೆ ಎಂದು ಹೆಚ್ಚುವರಿ ಸೆಷನ್ ನ್ಯಾಯಾಧೀಶ ಧರ್ಮೇಂದ್ರ ರಾಣ ಮಾಹಿತಿ ನೀಡಿದ್ದಾರೆ.

ಅಪರಾಧಿಗಳನ್ನು ಗಲ್ಲಿಗೇರಿಸಲು ಹೊಸದಾಗಿ ದಿನಾಂಕ ನಿಗದಿಪಡಿಸುವಂತೆ ವಿಚಾರಣಾ ನ್ಯಾಯಾಲಯವನ್ನು ಕೋರಲು ಅಧಿಕಾರಿಗಳಿಗೆ ಸುಪ್ರೀಂಕೋರ್ಟ್ ಅವಕಾಶ ನೀಡಿದ ನಂತರ ನಾಲ್ವರು ಆರೋಪಿಗಳಿಗೆ ಹೊಸದಾಗಿ ಡೆತ್ ವಾರೆಂಟ್ ಹೊರಡಿಸುವಂತೆ ನಿರ್ಭಯ ಪೋಷಕರು ಹಾಗೂ ದೆಹಲಿ ಸರ್ಕಾರ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ಇಂದು ನಡೆಸಿತು.

SCROLL FOR NEXT