ದೇಶ

ಟ್ವೀಟ್ ಮಾಡುವುದಕ್ಕೂ ಮುನ್ನ ಪರಿಶೀಲಿಸಿ: ರಾಹುಲ್ ಗಾಂಧಿಗೆ ಸ್ಮೃತಿ ಇರಾನಿ

Manjula VN

ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಟ್ವೀಟ್ ಮಾಡುವುದಕ್ಕೂ ಮುನ್ನ ಒಮ್ಮೆ ಅದನ್ನು ಪರಿಶೀಲಿಸಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಎಚ್ಚರಿಸಿದ್ದಾರೆ. 

ಭಾರತೀಯ ಸೇನೆಯಲ್ಲಿ ಹೆಣ್ಣು, ಗಂಡು ಎನ್ನುವ ತಾರತಮ್ಯ ಮಾಡಬಾರದು. ಮಹಿಳೆಯರಿಗ ಭೂಸೇನೆಯಲ್ಲಿ ಶಾಶ್ವತ ಆಯೋಗ ರಚನೆಯಾಗಬೇಕೆಂದು ಸುಪ್ರೀಂಕೋರ್ಟ್ ಕೊಟ್ಟ ಆದೇಶದ ಕುರಿತಾಗಿ ಟ್ವೀಟ್ ಮಾಡಿದ್ದ ರಾಹುಲ್, ಸರ್ಕಾರವು ಸೇನೆಯಲ್ಲಿ ಕಮಾಂಡ್ ಪೋಸ್ಟ್ ಗಳನ್ನು ಹೆಣ್ಣು ಮಕ್ಕಳಿಗೆ ನೀಡದೇ ಮಹಿಳೆಯರಿಗೆ ಅಗೌರವ ಸೂಚಿಸುತ್ತಿತ್ತು. ಧೈರ್ಯವಾಗಿ ಎದ್ದು ನಿಂತು ಬಿಜೆಪಿ ಸರ್ಕಾರ ತಪ್ಪು ಎಂದು ತೋರಿಸಿದ್ದಕ್ಕೆ ಭಾರತದ ಎಲ್ಲಾ ಮಹಿಳೆಯರಿಗೆ ಅಭಿನಂದನೆಗಳು ಎಂದು ಟ್ವೀಟ್ ಮಾಡಿದ್ದರು. 

ಈ ಟ್ವೀಟ್'ಗೆ ಪ್ರತಿಕ್ರಿಯೆ ನೀಡಿರುವ ಸ್ಮೃತಿ ಇರಾನಿಯವರು, ಸಶಸ್ತ್ರ ಪಡೆಗಳಲ್ಲಿ ಮಹಿಳೆಯರಿಗೆ ಆಯೋಗ ರಚನೆಯನ್ನು ಘೋಷಿಸಿದ್ದು ಪ್ರಧಾನಿ ಮೋದಿಯವರು. ನಿಮ್ಮ ಸರ್ಕಾರ ಅದರ ಬೆರಳನ್ನು ತಿರುಚಲು ಪ್ರಯತ್ನಿಸಿದಾಗ ಬಿಜೆಪಿ ಮಹಿಳಾ ಮೋರ್ಚಾ ಆ ವಿಚಾರವನ್ನು ಕೈಗೆತ್ತಿಕೊಂಡಿತು. ಟ್ವೀಟ್ ಮಾಡುವ ಮೊದಲು ಪರಿಶೀಲನೆ ಮಾಡಿ ಎಂದು ಎಚ್ಚರಿಸಿದ್ದಾರೆ. 

SCROLL FOR NEXT