ದೇಶ

ಕೊರೋನಾ ವೈರಸ್: ಭಾರತೀಯರ ರಕ್ಷಣೆಗೆ ವುಹಾನ್ ಗೆ ತೆರಳಿಲಿದೆ ಐಎಎಫ್ ನ ಸಿ-17 ಯುದ್ಧ ವಿಮಾನ!

Srinivasamurthy VN

ನವದೆಹಲಿ: ಚೀನಾದಲ್ಲಿ ಮರಣ ಮೃದಂಗ ಬಾರಿಸುತ್ತಿರುವ ಕೊರೋನಾ ವೈರಸ್ ಪೀಡಿತ ವುಹಾನ್ ಗೆ ಭಾರತೀಯ ವಾಯುಸೇನೆಯ ದೈತ್ಯಾಕಾರದ ಯುದ್ಧ ವಿಮಾನ ಸಿ-17 ತೆರಳಿದ್ದು, ಅಲ್ಲಿರುವ ಭಾರತೀಯರನ್ನು ರಕ್ಷಿಸಿ ಮರಳಿ ಭಾರತಕ್ಕೆ ಕರೆತರಲಿದೆ.

ಹೌದು..ಇದೇ ಫೆಬ್ರವರಿ 20ರಂದು ಭಾರತೀಯ ವಾಯುಸೇನೆಯ ಬೃಹತ್ ಯುದ್ಧ ವಿಮಾನ ಸಿ-17 ಚೀನಾದತ್ತ ಹಾರಲಿದ್ದು, ಚೀನಾದ ಹುಬೈ ಪ್ರಾಂತ್ಯದ ವುಹಾನ್ ನಲ್ಲಿ ಇಳಿಯಲಿದೆ. ಬಳಿಕ ಅಲ್ಲಿರುವ ಬೃಹತ್ ಪ್ರಮಾಣದ ಭಾರತೀಯರನ್ನು ಭಾರತಕ್ಕೆ ವಾಪಸ್ ಕರೆತರಲಿದೆ. ಭಾರತಕ್ಕೆ ವಾಪಸ್ ಆಗುವ ಭಾರತೀಯರನ್ನು ಮತ್ತೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಿದ್ದು, ಕೊರೋನಾ ವೈರಸ್ ಸೋಂಕು ಇಲ್ಲದವರನ್ನು ಮನೆಗೆ ವಾಪಸ್ ಕಳುಹಿಸಿ, ಸೋಂಕು ಕಂಡುಬಂದವನ್ನು ವಿಶೇಷ ಚಿಕಿತ್ಸೆಗೆ ಒಳಪಡಿಸಲಾಗುತ್ತದೆ.

ಈಗಾಗಲೇ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೊರೋನಾ ವೈರಸ್ ಚಿಕಿತ್ಸಾ ವಿಭಾಗವನ್ನು ತೆರೆಯಲಾಗಿದ್ದು, ಅಲ್ಲಿಯೇ ಎಲ್ಲ ರೀತಿಯ ಪರೀಕ್ಷೆ ಮತ್ತು ಚಿಕಿತ್ಸೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಈ ಹಿಂದೆ ಏರ್ ಇಂಡಿಯಾ ವಿಮಾನ ಈಗಾಗಲೇ 2 ಬಾರಿ ಚೀನಾದ ವುಹಾನ್ ಗೆ ತೆರಳಿ ಭಾರತೀಯರನ್ನು ವಾಪಸ್ ದೇಶಕ್ಕೆ ಕರೆ ತಂದಿತ್ತು.

SCROLL FOR NEXT