ಸಂಗ್ರಹ ಚಿತ್ರ 
ದೇಶ

ಆಧಾರ್ ಪೌರತ್ವ ದಾಖಲೆಯಲ್ಲ: ಯುಐಡಿಎಐ ಸ್ಪಷ್ಟೀಕರಣ

ಆಧಾರ್ ಪೌರತ್ವ ದೃಢಪಡಿಸುವ ದಾಖಲೆಯಲ್ಲ ಮತ್ತು ಈ ವಿಷಯಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಯೂನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ (ಯುಐಡಿಎಐ) ಸ್ಪಷ್ಟಪಡಿಸಿದೆ.

ನವದೆಹಲಿ: ಆಧಾರ್ ಪೌರತ್ವ ದೃಢಪಡಿಸುವ ದಾಖಲೆಯಲ್ಲ ಮತ್ತು ಈ ವಿಷಯಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಯೂನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ (ಯುಐಡಿಎಐ) ಸ್ಪಷ್ಟಪಡಿಸಿದೆ.

ಕಾನೂನುಬಾಹಿರ ವಲಸಿಗರು ಎಂದು ಶಂಕಿಸಿರುವ ರಾಜ್ಯ ಪೊಲೀಸರ ದೂರುಗಳ ಮೇಲೆ ಸುಳ್ಳು ನೆಪದಲ್ಲಿ ಆಧಾರ್ ಪಡೆಯಲು ಕೆಲವು ನಿವಾಸಿಗಳಿಗೆ ಯುಐಡಿಎಐ ನೋಟಿಸ್ ನೀಡಿ ವಿಚಾರಣೆ ಮಾವಲಿದೆ ಎಂಬ ಬಗ್ಗೆ ಕೆಲವು ಮಾಧ್ಯಮಗಳಲ್ಲಿ ಸುದ್ದಿ ಹಬ್ಬಿದ ನಂತರ ಈ ಸ್ಪಷ್ಟಣೆ ನೀಡಲಾಗಿದೆ.

ಈ ವರದಿಗಳನ್ನು ಸರಿಯಾದ ದೃಷ್ಟಿಕೋನದಿಂದ ಮಂಡಿಸಲಾಗಿಲ್ಲ ಮತ್ತು ಆಧಾರ್‌ಗೂ ಪೌರತ್ವಕ್ಕೂ ಯಾವುದೇ ಸಂಬಂಧವಿಲ್ಲ ಎಂದೂ ಯುಐಡಿಎಐ ಸ್ಪಷ್ಟಪಡಿಸಿದೆ. ಆಧಾರ್ ಪೌರತ್ವದ ದಾಖಲೆಯಲ್ಲ ಮತ್ತು ಆಧಾರ್‌ಗೆ ಅರ್ಜಿ ಸಲ್ಲಿಸುವ ಮೊದಲು 182 ದಿನಗಳ ಕಾಲ ಭಾರತದಲ್ಲಿ ವ್ಯಕ್ತಿಯ ವಾಸಸ್ಥಳವನ್ನು ಖಚಿತಪಡಿಸಿಕೊಳ್ಳಲು ಯುಐಡಿಎಐಗೆ ಆಧಾರ್ ಕಾಯ್ದೆಯಡಿ ಕಡ್ಡಾಯವಾಗಿದೆ ಎಂದೂ ಅದು ಹೇಳಿದೆ. ಅಲ್ಲದೆ, ಸುಪ್ರೀಂ ಕೋರ್ಟ್ ತನ್ನ ಹೆಗ್ಗುರುತು ನಿರ್ಧಾರದಲ್ಲಿ ಅಕ್ರಮ ವಲಸಿಗರಿಗೆ ಆಧಾರ್ ನೀಡದಂತೆ ಯುಐಡಿಎಐಗೆ ನಿರ್ದೇಶನ ನೀಡಿದೆ.

ಹೈದರಾಬಾದ್‌ಗೆ 127 ಜನರು ಸುಳ್ಳು ನೆಪಗಳ ಮೇಲೆ ಆಧಾರ್ ಪಡೆದಿದ್ದಾರೆ ಎಂಬ ವರದಿಗಳು ಬಂದಿದ್ದು, ಅವರ ಪ್ರಾಥಮಿಕ ವಿಚಾರಣೆಯಲ್ಲಿ ಅವರು ಆಧಾರ್ ಗರುತಿನ ಚೀಟಿ ಸಂಖ್ಯೆ ಪಡೆಯಲು ಅರ್ಹತೆ ಇಲ್ಲದ ಅಕ್ರಮ ವಲಸಿಗರು ಎಂದು ಕಂಡುಬಂದಿದೆ. ಆಧಾರ್ ಕಾಯ್ದೆಯ ಪ್ರಕಾರ, ಅಂತಹ ಆಧಾರ್ ಸಂಖ್ಯೆಗಳನ್ನು ರದ್ದುಗೊಳಿಸಲಾಗುವುದು. ಅವರ ಉತ್ತರಗಳನ್ನು ಸ್ವೀಕರಿಸಿ ನಂತರ ಪರಿಶೀಲಿಸಿದ ನಂತರ ಅವುಗಳಲ್ಲಿ ಯಾವುದಾದರೂ ಸುಳ್ಳು ದಾಖಲೆಗಳನ್ನು ಸಲ್ಲಿಸಿ, ಸುಳ್ಳು ನೆಪಗಳ ಮೂಲಕ ಆಧಾರ್ ಪಡೆದಿದ್ದರೆ ನಂತರ ಅದು ಸಾಬೀತಾದರೆ, ಅವರ ಆಧಾರ್ ಚೀಟಿಯನ್ನು ರದ್ದು ಇಲ್ಲವೇ ಅಮಾನತುಗೊಳಿಸಲಾಗುವುದು ಎಂದೂ ಯುಐಡಿಎಐ ಹೇಳಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕದನ ವಿರಾಮ ಅಂತ್ಯ; ಹೊಸ ಮಾತುಕತೆಗೆ ಡೊನಾಲ್ಡ್ ಟ್ರಂಪ್ ಒಪ್ಪಿಗೆ – 'ಶರಣಾಗುವುದಿಲ್ಲ' ಎಂದ ಇರಾನ್

ಪ್ರಿಯಾಂಕ್ ಖರ್ಗೆ RSS ಸಚಿವರು- ಪರಮೇಶ್ವರ್ 'ಗೊತ್ತಿಲ್ಲ' ಸಚಿವರು: ಶೋಭಾ ಕರಂದ್ಲಾಜೆ

ನಮ್ಮ ಆಚರಣೆಯ ನಡುವೆ ಬೇರೆಯದನ್ನು ಯಾಕೆ ತರುತ್ತೀರಾ: ದಸರಾದಲ್ಲಿ ಕಂಬಳ ಆಯೋಜನೆಗೆ ಯದುವೀರ್- ಪ್ರತಾಪ್ ಸಿಂಹ ವಿರೋಧ!

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್