ಸ್ಪೈಸ್ ಜೆಟ್ ನಿಂದ 20 ಹೊಸ ವಿಮಾನ ಸೇವೆ: ಬೆಂಗಳೂರು, ಮಂಗಳೂರು ಪಟ್ಟಿಯಲ್ಲಿದೆ!
ಸ್ಪೈಸ್ ಜೆಟ್ ವಿಮಾನ ಸಂಸ್ಥೆ 20 ಹೊಸ ವಿಮಾನ ಸೇವೆಗಳನ್ನು ಶೀಘ್ರವೇ ಪ್ರಾರಂಭಿಸುವುದಾಗಿ ಘೋಷಿಸಿದೆ.
ನವದೆಹಲಿ: ಸ್ಪೈಸ್ ಜೆಟ್ ವಿಮಾನ ಸಂಸ್ಥೆ 20 ಹೊಸ ವಿಮಾನ ಸೇವೆಗಳನ್ನು ಶೀಘ್ರವೇ ಪ್ರಾರಂಭಿಸುವುದಾಗಿ ಘೋಷಿಸಿದೆ.
ದಿನಂಪ್ರತಿ ಈ ವಿಮನ ಸೇವೆಗಳ ಸೌಲಭ್ಯ ಇರಲಿದ್ದು, ಗುವಾಹಟಿ-ಪಾಟ್ನಾ, ಹೈದರಾಬಾದ್-ಮಂಗಳೂರು, ಬೆಂಗಳೂರು-ಜಬಲ್ಪುರ್, ಪಾಟ್ನಾ-ವಾರಾಣಸಿ, ಮುಂಬೈ-ಔರಂಗಾಬಾದ್ ಮಾರ್ಗಗಳಲ್ಲಿ ಹೊಸ ವಿಮಾನ ಸೇವೆಗಳು ಉಡಾನ್ ಯೋಜನೆಯಡಿ ಮಾ.29 ರಿಂದ ಕಾರ್ಯಾರಂಭ ಮಾಡಲಿವೆ.
ಹೊಸ ವಿಮಾನ ಸೇವೆಗಳ ಮೂಲಕ ಸಂಸ್ಥೆ ಪ್ರಾದೇಶಿಕ ಸಂಚಾರ ವ್ಯಾಪ್ತಿಯಲ್ಲಿ ಒಟ್ಟಾರೆ 52 ವಿಮಾನಗಳ ಸಂಚಾರವನ್ನು ಹೊಂದಲಿದ್ದು, 12 ನಗರಗಳನ್ನು ಸಂಪರ್ಕಿಸಲಿದೆ.
ಮುಂಬೈ-ಬಾಗ್ದೋಗ್ರಾ, ಮುಂಬೈ-ಚೆನ್ನೈ- ಹೈದರಾಬಾದ್-ಮಂಗಳೂರು, ಗುವಾಹಟಿ-ದೆಹಲಿ ಮಾರ್ಗಗಳಲ್ಲಿ ಹೆಚ್ಚುವರಿ ವಿಮಾನ ಸೇವೆಗಳನ್ನು ಒದಗಿಸುವುದಾಗಿಯೂ ಸ್ಪೈಸ್ ಜೆಟ್ ಹೇಳಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.