ದೇಶದಾದ್ಯಂತ ಸಡಗರದ ಮಹಾಶಿವರಾತ್ರಿ ಆಚರಣೆ: ಎಲ್ಲೆಡೆ ಮೊಳಗಿದ ಮಹಾದೇವನ ಜಪ 
ದೇಶ

ದೇಶದಾದ್ಯಂತ ಸಡಗರದ ಮಹಾಶಿವರಾತ್ರಿ ಆಚರಣೆ: ಎಲ್ಲೆಡೆ ಮೊಳಗಿದ ಮಹಾದೇವನ ಜಪ

ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದಾಗಿರುವ ಮಹಾಶಿವರಾತ್ರಿ ಹಬ್ಬವನ್ನು ದೇಶದಾದ್ಯಂತ ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಗುತ್ತಿದ್ದು, ದೇಶದೆಲ್ಲೆಡೆ ಇರುವ ಶಿವ ದೇಗುಲಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತಿವೆ. 

ನವದೆಹಲಿ: ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದಾಗಿರುವ ಮಹಾಶಿವರಾತ್ರಿ ಹಬ್ಬವನ್ನು ದೇಶದಾದ್ಯಂತ ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಗುತ್ತಿದ್ದು, ದೇಶದೆಲ್ಲೆಡೆ ಇರುವ ಶಿವ ದೇಗುಲಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತಿವೆ. 

ಶಿವನ ದೇಗುಲಗಳಲ್ಲಿ ಭಕ್ತರು ಉಪವಾಸ ಮತ್ತು ಜಾಗರಣೆಯ ಮೂಲಕ ಶಿವ ಸ್ಮರಣೆ ಮಾಡಲು ವ್ಯವಸ್ಥೆಗಳನ್ನು ಮಡಾಲಾಗುತ್ತಿದೆ. 

ಕರ್ನಾಟಕದ ಕಾಡು ಮಲ್ಲೇಶ್ವರ ಮಲ್ಲಿಕಾರ್ಜುನ ಸ್ವಾಮಿ, ದೇವಾಲಯ, ಗವಿಪುರದ ಗವಿ ಗಂಗಾಧರೇಶ್ವರ ದೇವಾಲಯ, ಗುಟ್ಟಹಳ್ಳಿಯ ಪಂಚಲಿಂಗೇಶ್ವರ ಸ್ವಾಮಿ ದೇವಾಲಯ, ಹಲಸೂರಿನ ಸೋಮೇಶ್ವರ, ಮುರುಗೇಶ್ವರ ದೇವಾಲಯ, ಮುರುಗೇಶಪಾಳ್ಯದ ಶಿವ ದೇವಾಲಯ, ಅನಂದರಾವ್ ವೃತ್ತದ ಶಿವಸಾಯಿ ದೇವಾಲಯ, ಮುಂಬಾನ ಬಬುಲ್ನಾಥ್ ದೇಗುಲ, ದೆಹಲಿಯ ಶ್ರೀ ಗೌರಿ ಶಂಕರ ದೇಗುಲ, ಅಮೃತಸರದ ಶಿವಾಲ ಬಾಘ್ ಭೈಯಾನ್ ದೇಗುಲ, ಕಲುಬರುಗಿಯ ಬ್ರಹ್ಮಕುಮಾರಿ ದೇವಾಲಯ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತಿವೆ. 

ಇಂದು ಬೆಳಿಗ್ಗೆಯಿಂದಲೇ ಎಲ್ಲಾ ಶಿವ ದೇವಾಲಯಗಲ್ಲಿ ವಿಶೇಷ ಪೂಜೆಗಳು ನಡೆಯುತ್ತಿದ್ದು, ಶಿವನಿಗೆ ಬಿಲ್ವಪತ್ರ ಅರ್ಪಿಸುವ ಮೂಲಕ ಪೂಜೆ, ಮಂಗಳಾರತಿ, ಶಿವನ ಸ್ಮರಣೆ ನಡೆಯುತ್ತಿವೆ. 

ಶಿವನ ಸಹಸ್ರ ನಾಮ ಪಠಣ, ವೇದಾಂತ ಉಪನ್ಯಾಸ, ಸಂಗೀತೋತ್ಸವ ಮತ್ತು ಅಹೋರಾತ್ರಿ ಶಿವನಾಮ ಜಪ ನಡೆಯುತ್ತದೆ. ದೇವಾಲಯಗಳಲ್ಲಿ ಹೆಚ್ಚು ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಎಲ್ಲಾ ದೇಗುಲಗಳಲ್ಲಿ ವಿಸೇಷ ವ್ಯವಸ್ತೆಗಳನ್ನು ಕಲ್ಪಿಸಲಾಗುತ್ತಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಮುಂಬೈ-ಅಹಮದಾಬಾದ್ ಮಾತ್ರವಲ್ಲ, ಭಾರತದಲ್ಲಿ 7000 ಕಿ.ಮೀ ಬುಲೆಟ್ ರೈಲು ಓಡಲಿದೆ: ಜಪಾನ್‌ನಲ್ಲಿ ಪ್ರಧಾನಿ ಮೋದಿ ಘೋಷಣೆ

ಹಿಂದೂ ಮಹಿಳೆಯರ ಮೇಲೆ '3 ಮಕ್ಕಳ ಸಿದ್ಧಾಂತ'ದ ಹೊರೆ ಹೇರಬೇಡಿ: RSS ಮುಖ್ಯಸ್ಥ ಮೋಹನ್ ಭಾಗವತ್‌ಗೆ ಓವೈಸಿ

ಡಿಸೆಂಬರ್‌ನಲ್ಲಿ ಭಾರತಕ್ಕೆ ರಷ್ಯಾ ಅಧ್ಯಕ್ಷ ಪುಟಿನ್ ಭೇಟಿ

ಭಾರತದ ಜಿಡಿಪಿ ಪ್ರಬಲ ಜಿಗಿತ: ಮೊದಲ ತ್ರೈಮಾಸಿಕದಲ್ಲಿ ಶೇ. 7.8 ರಷ್ಟು ಬೆಳವಣಿಗೆ

ವಿಶ್ವ ಚಾಂಪಿಯನ್‌ಶಿಪ್‌ನಿಂದ ಹೊರಬಿದ್ದ PV Sindhu: ಇಂಡೋನೇಷ್ಯಾದ ಶಟ್ಲರ್ ಕುಸುಮಾ ವಿರುದ್ಧ ಸೋಲು!

SCROLL FOR NEXT