ದೇಶ

ಆಪ್ತ ಮಿತ್ರ ಟ್ರಂಪ್ ಗೆ ಮೋದಿ ಕೊಟ್ಟ ಅಪರೂಪದ ಉಡುಗೊರೆಗಳೇನು ಗೊತ್ತೇ?

Srinivas Rao BV

ಅಹ್ಮದಾಬಾದ್: ಎರಡು ದಿನಗಳ ಭಾರತ ಪ್ರವಾಸ ಕೈಗೊಂಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅಪರೂಪದ ಉಡುಗೊರೆಗಳನ್ನು ನೀಡಿದ್ದಾರೆ. 

ಅಹಮದಾಬಾದ್ ಗೆ ಆಗಮಿಸುತ್ತಿದ್ದಂತೆಯೇ ಟ್ರಂಪ್ ದಂಪತಿಗಳನ್ನು ಸಬರ್ ಮತಿ ಆಶ್ರಮಕ್ಕೆ ಕರೆದೊಯ್ದ ಪ್ರಧಾನಿ ನರೇಂದ್ರ ಮೋದಿ ಟ್ರಂಪ್ ದಂಪತಿಗಳಿಗೆ ಮಹಾತ್ಮಾ ಗಾಂಧಿ ವಾಸವಿದ್ದ ಆಶ್ರಮದ ಪರಿಚಯ ಮಾಡಿಸಿ, ನೂಲು ನೇಯುವ ಚರಕದ ವಿಶೇಷತೆಯನ್ನು ವಿವರಿಸಿದರು. 

ಸಂದರ್ಶಕರ ಪುಸ್ತಕದಲ್ಲಿ ಟ್ರಂಪ್ ಅಭಿಪ್ರಾಯ ಬರೆದು ಅಲ್ಲಿಂದ ನಿರ್ಗಮಿಸಬೇಕಾದರೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಆಪ್ತ ಗೆಳೆಯನಿಗೆ, ಕೆಟ್ಟದ್ದನ್ನು ಕೇಳಬೇಡ ಹಾಗೂ ಕೆಟ್ಟದ್ದನ್ನು ಮಾತನಾಡಬೇಡ ಎಂಬ ಸಂದೇಶ ಸಾರುವ, ಅಮೃತಶಿಲೆಯಿಂದ ನಿರ್ಮಾಣಗೊಂಡ ಮೂರು ಕೋತಿಗಳ ಪ್ರತಿಮೆ, ಚರಕದ ಪ್ರತಿಕೃತಿಯನ್ನು, ಗಾಂಧಿ ಸಂದೇಶವಿರುವ ’ತಾಲಿಸ್ಮನ್’ ಹಾಗೂ ಗಾಂಧಿ ಅವರ ಆತ್ಮಕಥನವಾಗಿರುವ ದಿ ಸ್ಟೋರಿ ಆಫ್ ಮೈ ಎಕ್ಸಪರಿಮೆಂಟ್ಸ್ ವಿತ್ ಟ್ರುತ್ ನ್ನು ನೀಡಿದರು. 

ಇದೇ ವೇಳೆ ಟ್ರಂಪ್ ದಂಪತಿಗಳಿಗೆ ಸಬರ್ ಮತಿ ಆಶ್ರಮ ಸಂರಕ್ಷಣೆ ಹಾಗೂ ಮೆಮೋರಿಯಲ್ ಟ್ರಸ್ಟ್ ನಿಂದ ಖಾದಿ ವಸ್ತ್ರ, ಮಹಾತ್ಮಾ ಗಾಂಧಿ ಅವರ ಅಪರೂಪದ ಫೋಟೋದಿಂದ ಮರು ಚಿತ್ರಿಸಲಾಗಿರುವ ಪೆನ್ಸಿಲ್ ಸ್ಕೆಚ್ ನ್ನು ಟ್ರಂಪ್ ಗೆ ನೀಡಲಾಗಿದೆ ಎಂದು ಟಸ್ಟ್ ನ ಸದಸ್ಯರು ತಿಳಿಸಿದ್ದಾರೆ. 

SCROLL FOR NEXT