ದೇಶ

ಭಾರತದ 21 ಸೇರಿ ವಿಶ್ವದ 30 ನಗರಗಳು ಅತ್ಯಂತ ಮಾಲಿನ್ಯಕಾರಕ, ಮೊದಲ ಸ್ಥಾನದಲ್ಲಿ ಘಾಜಿಯಾಬಾದ್

Lingaraj Badiger

ನವದೆಹಲಿ: ವಿಶ್ವದ ಬಹುತೇಕ ಮಾಲಿನ್ಯಕಾರಕ ನಗರಗಳು ಭಾರತದಲ್ಲಿವೆ. ಜಗತ್ತಿನ 30 ಅತಿ ಕಲುಷಿತ ನಗರಗಳ ಪೈಕಿ 21 ನಗರಗಳು ಭಾರತದಲ್ಲಿದ್ದು, ಘಾಜಿಯಾಬಾದ್ ಮೊದಲ ಸ್ಥಾನ ಪಡೆದಿದೆ.

2019ರ ವರ್ಲ್ಡ್ ಏರ್ ಕ್ವಾಲಿಟಿ ಇಂಡೆಕ್ಸ್ ಪ್ರಕಾರ, ವಿಶ್ವದಲ್ಲಿ ಒಟ್ಟು 30ನಗರಗಳನ್ನು ಮಾಲಿನ್ಯಯುಕ್ತ ನಗರಗಳೆಂದು ಘೋಷಣೆ ಮಾಡಲಾಗಿದೆ. ಆದರೆ ದುರದೃಷ್ಟ ಸಂಗತಿಯೆಂದರೆ ವಿಶ್ವದ 30 ಮಾಲಿನ್ಯ ನಗರಗಳ ಪೈಕಿ 21ನಗರಗಳು ಭಾರತದಲ್ಲಿದ್ದು, ಅತ್ಯಂತ ಮಾಲಿನ್ಯ ಪೀಡಿತ ರಾಷ್ಟ್ರ ರಾಜಧಾನಿಗಳ ಪೈಕಿ ದೆಹಲಿ ಮೊದಲ ಸ್ಥಾನದಲ್ಲಿದೆ.

ದೆಹಲಿಯಲ್ಲಿ ಏರ್‌ ಕ್ಯಾಲಿಟಿ ಇಂಡೆಕ್ಸ್ ಲೆವೆಲ್ 800ಕ್ಕಿಂತ ಹೆಚ್ಚಾಗಿದೆ. ಇದು ಸಾಮಾನ್ಯ ವಾಯುಮಾಲಿನ್ಯಕ್ಕಿಂತಲೂ ಮೂರು ಪಟ್ಟು ಹೆಚ್ಚು ಎಂದೇ ಹೇಳಬಹುದು.

ವಿಶ್ವದ ಟಾಪ್ 5 ಮಾಲಿನ್ಯಕಾರಕ ನಗರಗಳು
1. ಘಾಜಿಯಾಬಾದ್
2. ಚೀನಾದ ಹೋಟನ್
3. ಗುಜ್ರನ್ ವಾಲಾ ಚೀನಾದಲ್ಲಿ ಹೋಟನ್
4. ಫೈಸಲಾಬಾದ್ (ಪಾಕಿಸ್ತಾನ)
5. ದೆಹಲಿ

SCROLL FOR NEXT