ನಿತೀಶ್ ಕುಮಾರ್ 
ದೇಶ

ಎನ್‌ಆರ್‌ಸಿ ವಿರುದ್ಧ ನಿರ್ಣಯ ಅಂಗೀಕರಿಸಿದ ಮೊದಲ ಎನ್‌ಡಿಎ ಆಡಳಿತದ ರಾಜ್ಯ ಬಿಹಾರ!

ರಾಜ್ಯದಲ್ಲಿ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಅನುಷ್ಠಾನದ ವಿರುದ್ಧ ಬಿಹಾರ ವಿಧಾನಸಭೆ ಮಂಗಳವಾರ ಸರ್ವಾನುಮತದ ನಿರ್ಣಯವನ್ನು ಅಂಗೀಕರಿಸಿತು.. 

ಪಾಟ್ನಾ: ರಾಜ್ಯದಲ್ಲಿ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಅನುಷ್ಠಾನದ ವಿರುದ್ಧ ಬಿಹಾರ ವಿಧಾನಸಭೆ ಮಂಗಳವಾರ ಸರ್ವಾನುಮತದ ನಿರ್ಣಯವನ್ನು ಅಂಗೀಕರಿಸಿತು..

ರಾಜ್ಯದಲ್ಲಿ 2010 ರ ರಾಷ್ಟ್ರೀಯ ಜನಸಂಖ್ಯಾ ನೋಂದಣಿಯ (ಎನ್‌ಪಿಆರ್) ಹಳೆಯ ಸ್ವರೂಪವನ್ನು ಮಾತ್ರ ಜಾರಿಗೆ ತರಲು ಸಹ ರಾಜ್ಯ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರವಾಗಿದೆ.

ನೂತನ ಎನ್‌ಪಿಆರ್ ಅನುಷ್ಠಾನದ ವಿರುದ್ಧ ಮುಖ್ಯಮಂತ್ರಿ ನಿತೀಶ್ ಕುಮಾರ್ ತಮ್ಮ ನಿಲುವನ್ನು ಪುನರುಚ್ಚರಿಸಿದ ನಂತರ ಈ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ. ಎನ್‌ಪಿಆರ್‌ನಕೆಲವು ವಿವಾದಾತ್ಮಕ ಷರತ್ತುಗಳನ್ನು ಕೈಬಿಡುವಂತೆ ಕೋರಿ ಬಿಹಾರ ಸರ್ಕಾರ ಈಗಾಗಲೇ ಕೇಂದ್ರಕ್ಕೆ ಪತ್ರ ಬರೆದಿದೆ ಎಂದು ಸಿಎಂ ನಿತೀಶ್ ಕುಮಾರ್ ಹೇಳಿದ್ದಾರೆ.

ಗೊಂದಲವನ್ನು ಹೋಗಲಾಡಿಸಲುಪ್ರಧಾನಿ ನರೇಂದ್ರ ಮೋದಿಯವರ ಡಿಸೆಂಬರ್ 22, 2019 ರ ಭಾಷಣವನ್ನು ಸಹ ಕೇಳಿದ್ದಾರೆ. ಅದರಲ್ಲಿ ಎನ್‌ಆರ್‌ಸಿ ದೇಶವ್ಯಾಪಿ ಅನುಷ್ಠಾನವನ್ನು ಪ್ರಧಾನಿ ಮೋದಿ ನಿರಾಕರಿಸಿದ್ದಾರೆ.

ಎನ್‌ಪಿಆರ್‌ನಲ್ಲಿ ಟ್ರಾನ್ಸ್‌ಜೆಂಡರ್‌ಗಳನ್ನು ಸೇರಿಸಲು ಪ್ರಸ್ತಾಪಿಸಲಾಗಿದೆ ಎಂದ ನಿತೀಶ್ ಕುಮಾರ್ ವಿಧಾನಸಭೆಯಲ್ಲಿ ಎನ್‌ಪಿಆರ್‌ನ ಹೊಸ ಸ್ವರೂಪದ ವಿರುದ್ಧ ಗಿ ನಿರ್ಣಯವನ್ನು ಕೋರಿದರು, ವಿಶೇಷವಾಗಿ ಪೋಷಕರ ಜನ್ಮಸ್ಥಳ ಮತ್ತು ದಿನಾಂಕದ ಬಗ್ಗೆ ವಿವರಗಳನ್ನು ಕೋರುವ ಷರತ್ತಿನ ಬಗ್ಗೆ ಅವರು ಆಕ್ಷೇಪಿಸಿದ್ದಾರೆ.

ಗಮನಾರ್ಹ ಬೆಳವಣಿಗೆಯಲ್ಲಿ ಸಿಎಂ ನಿತೀಶ್ ಕುಮಾರ್ ಅವರ ನಿಲುವನ್ನು ಡಿಸಿಎಂ ಹಾಗೂ ಬಿಜೆಪಿಯ  ಹಿರಿಯ ನಾಯಕ ಸುಶೀಲ್ ಕುಮಾರ್ ಮೋದಿ ಅವರು ವಿಧಾನಸಭೆಯಲ್ಲಿ ಬೆಂಬಲಿಸಿದರು. ಎನ್‌ಪಿಆರ್ ಕುರಿತು ಮಾತನಾಡಿದ ಕುಮಾರ್, ತನ್ನ ತಾಯಿ ಯಾವಾಗ ಜನಿಸಿದನೆಂದು ತನಗೆ ತಿಳಿದಿಲ್ಲ ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಭಯೋತ್ಪಾದನೆಯನ್ನು ಯಾವುದೂ ಸಮರ್ಥಿಸಲು ಸಾಧ್ಯವಿಲ್ಲ, ಭಾರತ ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ': ನೆಸ್ಸೆಟ್‌ನಲ್ಲಿ ಪ್ರಧಾನಿ ಮೋದಿ ಭಾಷಣ

'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಪಾಠ: ಸುಪ್ರೀಂ ಕೋರ್ಟ್ ಚಾಟಿ ನಂತರ ವೆಬ್‌ಸೈಟ್‌ನಿಂದ ಪಠ್ಯಪುಸ್ತಕ ತೆಗೆದ NCERT

T20 World Cup 2026: ಶ್ರೀಲಂಕಾ ವಿರುದ್ಧ ನ್ಯೂಜಿಲ್ಯಾಂಡ್ ​ಗೆ 61 ರನ್ ಭರ್ಜರಿ ಗೆಲುವು

India to Israel: ಪ್ರಧಾನಿ ಮೋದಿ ಪಯಣಿಸಿದ Air India ವಿಮಾನ ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್: Flightradar24

Ranji Trophy final: ಕರ್ನಾಟಕ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಬೃಹತ್ ಮೊತ್ತ; 527/6

SCROLL FOR NEXT