ದೇಶ

ದೆಹಲಿ ಹಿಂಸಾಚಾರ ಮುಸ್ಲಿಮರ ವಿರುದ್ಧದ ವ್ಯವಸ್ಥಿತ ದಾಳಿ: ಎಸ್‍ಡಿಪಿಐ

Srinivas Rao BV

ನವದೆಹಲಿ: ಈಶಾನ್ಯ ದೆಹಲಿಯಲ್ಲಿ ಹಿಂದುತ್ವ ಶಕ್ತಿಗಳು ಮತ್ತು ಪೊಲೀಸರು ಅತ್ಯಂತ ವ್ಯವಸ್ಥಿತವಾಗಿ  ಮತ್ತು ಉದ್ದೇಶಪೂರ್ವಕವಾಗಿ ಹಿಂಸಾಕೃತ್ಯ ಹಾಗೂ ದೌರ್ಜನ್ಯವೆಸಗಿದ್ದಾರೆ. ಈ ಘಟನೆಯಲ್ಲಿ  10 ಮಂದಿ ಸಾವನ್ನಪ್ಪಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ. ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ-ಪಾಸ್ತಿಗಳಿಗೆ ಬೆಂಕಿ ಹಚ್ಚಲಾಗಿದೆ. ಇದು ಮುಸ್ಲಿಮರ ವಿರುದ್ಧದ ವ್ಯವಸ್ಥಿತ ದಾಳಿ ಎಂದು ಎಸ್‍ಡಿಪಿಐ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ.ಫೈಝಿ ಹೇಳಿದ್ದಾರೆ.

ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, `ಸಿಎಎ ವಿರೋಧಿ ಪ್ರತಿಭಟನಕಾರರನ್ನು ಎದುರಿಸಲಾಗುವುದು' ಎಂದು ಮಾಜಿ ಶಾಸಕ ಮತ್ತು ಬಿಜೆಪಿ ಮುಖಂಡ ಕಪಿಲ್ ಮಿಶ್ರಾ ಅವರ ಹೇಳಿಕೆಯ ಬೆನ್ನಲ್ಲೇ ಈ ಘರ್ಷಣೆ ನಡೆದಿದೆ. ದುಷ್ಕರ್ಮಿಗಳು, ಧರ್ಮವನ್ನು ವಿಚಾರಿಸುತ್ತಾ ಮುಸ್ಲಿಮರ ಮೇಲೆ ತೀವ್ರ ತರವಾದ ಹಲ್ಲೆ ನಡೆಸಿದ್ದಾರೆ. 

ಈ ಬಾರಿಯ ಹಿಂಸಾಚಾರದ ಸಮಯವನ್ನು ಎಷ್ಟು ಯೋಜಿಸಲಾಗಿದೆಯೆಂದರೆ, ಇಡೀ ಮಾಧ್ಯಮಗಳ ಗಮನವು ಡೊನಾಲ್ಡ್ ಟ್ರಂಪ್ ಅವರ ಭಾರತ ಭೇಟಿಯಲ್ಲಿದ್ದಾಗ ಅದು ನಡೆಸಲಾಗಿದೆ. ಸಿಎಎ ಬೆಂಬಲಿಗರು ಮತ್ತು ಹಿಂಸಾಚಾರದಲ್ಲಿ ಭಾಗಿಯಾದ ಪೊಲೀಸರ ವಿರುದ್ಧ ಕೇಂದ್ರ ಸರ್ಕಾರ ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕು. ದಾಳಿಗೊಳಗಾಗಿರುವ ಅಲ್ಪಸಂಖ್ಯಾತರಲ್ಲಿ ವಿಶ್ವಾಸವನ್ನು ಮರಳಿ ತರಲು ದೆಹಲಿ ರಾಜ್ಯ  ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಎಂದು ಫೈಝಿ ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

SCROLL FOR NEXT