ದೇಶ

ನಮ್ಮ ತಂದೆ ಮಾಡಿದ ತಪ್ಪೇನು? ಕಲ್ಲೇಟಿಗೆ ಬಲಿಯಾದ ರತನ್ ಲಾಲ್ ನ 3 ಮುದ್ದು ಮಕ್ಕಳ ಪ್ರಶ್ನೆ

Shilpa D

ನವದೆಹಲಿ:  ರಾಜಧಾನಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯ ಪರ ಮತ್ತು ವಿರೋಧದ ಹೋರಾಟ, ಸಂಘರ್ಷದಲ್ಲಿ ಅನೇಕರ ಬದುಕು ನಲುಗಿಹೋಗುತ್ತಿದೆ. ಅವರಲ್ಲಿ ತಮ್ಮದಲ್ಲದ ತಪ್ಪಿಗೆ ಬಲಿಯಾದ ಹೆಡ್‌ಕಾನ್‌ಸ್ಟೆಬಲ್ ರತನ್‌ ಲಾಲ್ ಕುಟುಂಬವೂ ಒಂದು.

ನನ್ನ ತಂದೆ ಮಾಡಿದ ತಪ್ಪಾದರೂ ಏನು? ಅವರನ್ನು ಏಕೆ ಸಾಯಿಸಿದರು?' ಎಂದು ರತನ್ ಲಾಲ್ ಅವರ ಮೂವರು ಮುಗ್ಧ ಮಕ್ಕಳು ಕೇಳುವ ಪ್ರಶ್ನೆಗೆ ಪೊಲೀಸ್ ಕಮಿಷನರ್ ಉತ್ತರಿಸಲಾಗದೆ ವೇದನೆಯಿಂದ ನಿಂತಿದ್ದರು. 

ಪತಿಯ ಸಾವಿನ ಸುದ್ದಿ ಕೇಳುತ್ತಿದ್ದಂತೆಯೇ ರತನ್ ಲಾಲ್ ಪತ್ನಿ ಪೂನಂ ನಿಶಕ್ತರಾಗಿ ಕುಸಿದುಬಿದ್ದರು. ಅವರ ಮಕ್ಕಳಾದ ಸಿದ್ದಿ (13), ಕನಕ್ (10) ಮತ್ತು ರಾಮ್ (8) ಕಂಗಾಲಾದರು. ಈ ವರ್ಷ ತಮ್ಮ ಹುಟ್ಟೂರಿಗೆ ಹೋಗಿ ಹೋಳಿ ಆಚರಿಸೋಣ ಎಂದು ಮಕ್ಕಳಿಗೆ ರತನ್ ಲಾಲ್ ಭರವಸೆ ನೀಡಿದ್ದರು.

ನ್ ಲಾಲ್ ಅವರನ್ನು ಬಲ್ಲವರ ಪ್ರಕಾರ, ಅವರು ಬಹಳ ಶಾಂತಿಪ್ರಿಯ ವ್ಯಕ್ತಿ. ಯಾರೊಂದಿಗೂ ಯಾವುದೇ ವಾಗ್ದಾದ ಅಥವಾ ಗಲಾಟೆ ಮಾಡಿಕೊಂಡವರಲ್ಲ. ಆದರೆ ಅವರು ತಮ್ಮದಲ್ಲದ ತಪ್ಪಿಗೆ ದುಷ್ಕರ್ಮಿಗಳ ಏಟಿಗೆ ಬಲಿಯಾಗಬೇಕಾಯಿತು. 

ರಾಜಸ್ಥಾನದ ಸಿಕಾರ್‌ನ ಫತೇಪುರ ತಿಹಾವಲಿ ಗ್ರಾಮದವರಾದ ರತನ್‌ಲಾಲ್‌ಗೆ ಇಬ್ಬರು ಸಹೋದರರು ಮತ್ತು ಒಬ್ಬ ಸಹೋದರಿ ಇದ್ದಾರೆ. ದೆಹಲಿಯ ಬುರಾರಿಯ ಅಮೃತ ವಿಹಾರ ಕಾಲನಿಯಲ್ಲಿ ಅವರು ತಮ್ಮ ಪತ್ನಿ ಹಾಗೂ ಮೂವರು ಮುದ್ದಾದ ಮಕ್ಕಳೊಂದಿಗೆ ವಾಸಿಸುತ್ತಿದ್ದರು. ಸೋಮವಾರ ಬೆಳಿಗ್ಗೆ ಕರ್ತವ್ಯಕ್ಕೆ ತೆರಳಿದವರು ಜೀವಂತವಾಗಿ ಮರಳಿ ಬರಲಿಲ್ಲ.
 

SCROLL FOR NEXT