ದೇಶ

ದೆಹಲಿ ಹಿಂಸಾಚಾರ: ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಅಜಿತ್ ದೋವಲ್, ಭದ್ರತೆ ಪರಿಶೀಲನೆ

Manjula VN

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆಗೆ ರಾಷ್ಟ್ರ ರಾಜಧಾನಿ ಹೊತ್ತಿ ಉರಿಯುತ್ತಿದ್ದು, ಪ್ರತಿಭಟನೆ ಈ ವರೆಗೂ 13 ಮಂದಿಯನ್ನು ಬಲಿಪಡೆದುಕೊಂಡಿದೆ. ಈನಡುವಲ್ಲೇ ಪ್ರತಿಭಟನಾ ಸ್ಥಳಕ್ಕೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಭೇಟಿ ನೀಡಿದ್ದು, ಭದ್ರತೆಯನ್ನು ಪರಿಶೀಲನೆ ನಡೆಸುತ್ತಿದ್ದಾರೆಂದು ವರದಿಗಳು ತಿಳಿಸಿವೆ. 

ಈಶಾನ್ಯ ಭಾಗದ ದೆಹಲಿ ಪೊಲೀಸ್ ಆಯುಕ್ತರ ಕಚೇರಿಗೆ ಭೇಟಿ ನೀಡಿದ ದೋವಲ್ ಅವರು ಪೊಲೀಸ್ ಸಿಬ್ಬಂದಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ. ತಡರಾತ್ರಿ ಅಧಿಕಾರಿಗಳೊಂದಿಗೆ ಮಾತುಕತೆ ಮಾತುಕತೆ ನಡೆಸಿದರು ಎಂದು ವರದಿಗಳು ತಿಳಿಸಿವೆ. 

ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸೀಲಂಪುರ್, ಜಫ್ರಾಬಾದ್, ಮೌಜ್ಪುರ ಮತ್ತು ಗೋಕುಲ್ಪುರಿ ಚೌಕ್ ಪ್ರದೇಶಗಳಿಗೆ ಭೇಟಿ ನೀಡಿದ ದೋವಲ್ ಅವರು, ಪರಿಸ್ಥಿತಿ ಅವಲೋಕಿಸಿಸಿದರು.  

ಸಿಎಎ ವಿರುದ್ಧ ದೆಹಲಿಯ ಜಫ್ರಾಬಾದ್ ನಲ್ಲಿ 500ಕ್ಕೂ ಹೆಚ್ಚು ಮಹಿಳೆಯರು ಪ್ರತಿಭಟನೆ ಆರಂಭಿಸಿದ್ದರು. ಅದೇ ಪ್ರದೇಶದಲ್ಲಿ ಸಿಎಎ ಪರ ರ್ಯಾಲಿಯ ನೇತೃತ್ವ ವಹಿಸಿದ್ದ ಬಿಜೆಪಿ ನಾಯಕ ಕೆಪಿಎಲ್ ಮಿಶ್ರಾ, ಟ್ರಂಪ್ ಭಾರತದಿಂದ ತೆರಳುವವರೆಗೆ ಸುಮ್ಮನಿರುತ್ತೇವೆ. 3 ದಿನದಲ್ಲಿ ಸಿಎಎ ವಿರೋಧಿಗಳನ್ನು ತೆರವುಗೊಳಿಸದಿದ್ದಲ್ಲಿ ಪರಿಣಾಮ ನೆಟ್ಟಗಿರಲ್ಲ ಎಂದಿದ್ದರು. ಮರುದಿನ ಆರಂಭವಾದ ಸಣ್ಣ ಘರ್ಷಣೆ, ಸೋಮವಾರ ಹಿಂಸಾರೂಪ ಪಡೆದುಕೊಂಡಿತು. ಮಂಗಲವಾರ ಗಂಭೀರವಾಯಿತು. 

SCROLL FOR NEXT