ದೇಶ

ದೆಹಲಿ ರಕ್ತಪಾತ: ಕೇಜ್ರಿವಾಲ್ ನಿವಾಸದ ಮುಂದೆಯೂ ಭುಗಿಲೆದ್ದ ಪ್ರತಿಭಟನೆ

Manjula VN

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಹಿಂಸಾಚಾರಕ್ಕೆ ಕಾರಣರಾದವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಿವಾಸದ ಎದುರು ಘೇರಾವ್ ಮಾಡಿದ ಪ್ರತಿಭಟನಕಾರರ ಗುಂಪನ್ನು ದೆಹಲಿ ಪೊಲೀಸರು ಬುಧವಾರ ಮುಂಜಾನೆ ಚದುರಿಸಿದ್ದಾರೆ.

ಕೇಜ್ರಿವಾಲ್ ಹೊರಗೆ ಬನ್ನಿ, ನಮ್ಮೊಂದಿಗೆ ಮಾತನಾಡಿ ' ಎಂಬ ಘೋಷಣೆ ಕೂಗುತ್ತಿದ್ದ ಜನರನ್ನು ಪೊಲೀಸರು ಜಲಪಿರಂಗಿ ಬಳಸಿ ಚದುರಿಸಿದ್ದಾರೆ.

ಪ್ರತಿಭಟನೆಯನ್ನು ಅಲುಮ್ನಿ ಅಸೋಸಿಯೇಶನ್ ಆಫ್ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ (ಎಎಜೆಎಂಐ) ಮತ್ತು ಜಾಮಿಯಾ ಸಮನ್ವಯ ಸಮಿತಿ (ಜೆಸಿಸಿ) ಆಯೋಜಿಸಿದ್ದವು.

ಈಶಾನ್ಯ ಜಿಲ್ಲೆಯಲ್ಲಿ ಹಿಂಸಾಚಾರವೆಸಗುವವರ ವಿರುದ್ಧ ಕ್ರಮಕೈಗೊಳ್ಳಬೇಕು. ಪರಿಸ್ಥಿತಿಯನ್ನು ಸಹಜಸ್ಥಿತಿಗೆ ತರಲು ಸ್ಥಳೀಯ ಶಾಸಕರೊಂದಿಗೆ ಗಲಭೆಪೀಡಿತ ಪ್ರದೇಶಗಳಿಗೆ ವೈಯಕ್ತಿಕವಾಗಿ ಭೇಟಿ ನೀಡಬೇಕು ಎಂದು ಅವರು ಮುಖ್ಯಮಂತ್ರಿಗೆ ಮನವಿ ಮಾಡಿದರು.

ದೆಹಲಿ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ಜನರಿಗೆ ತಿಳಿಸಲು ಮತ್ತು ಎಲ್ಲಾ ರಕ್ಷಣಾ ಕಾರ್ಯಾಚರಣೆಗಳಿಗೆ ಗಲಭೆ ಪೀಡಿತ ಪ್ರದೇಶಗಳಿಂದ ಆಸ್ಪತ್ರೆಗಳನ್ನು ತಲುಪಲು ಅವಕಾಶ ಮಾಡಿಕೊಡಬೇಕೆಂದು ಅವರು ಕೇಜ್ರಿವಾಲ್ ಅವರನ್ನು ಒತ್ತಾಯಿಸಿದರು.

ನಿನ್ನೆ ತಡರಾತ್ರಿ ದೆಹಲಿ ಮುಖ್ಯಮಂತ್ರಿ ಹಿರಿಯ ಅಧಿಕಾರಿಗಳೊಂದಿಗೆ ಸರ್ವ ಪಕ್ಷ ಸಭೆಯನ್ನು ಕರೆದು ಪರಿಸ್ಥಿತಿಯನ್ನು ಪರಿಶೀಲಿಸಿದರು. ಶಾಂತಿ ಪುನಃಸ್ಥಾಪಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅವರಿಗೆ ನಿರ್ದೇಶನ ನೀಡಿದ್ದರು.

ಎಲ್ಲಾ ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಶಾಂತಿ ಸಮಿತಿ ಸಭೆಗಳನ್ನು ಎಲ್ಲಾ ಧರ್ಮದ ಜನರೊಂದಿಗೆ ನಡೆಸುವಂತೆ ಅವರು ಶಾಸಕರಿಗೆ ನಿರ್ದೇಶನ ನೀಡಿದ್ದರು.

SCROLL FOR NEXT