ದೇಶ

'ಸಮಾಜದಲ್ಲಿ ಆರೋಗ್ಯಕರ ಚರ್ಚೆಯಾಗಬೇಕೆ ಹೊರತು ಹಿಂಸಾಚಾರ ನಡೆಯಬಾರದು': ಸುಪ್ರೀಂ ಕೋರ್ಟ್ 

Sumana Upadhyaya

ನವದೆಹಲಿ:ವ್ಯತ್ಯಾಸಗಳು ಬಂದಾಗ ಎಲ್ಲಾ ರಾಜಕೀಯ ಪಕ್ಷಗಳು ತಾಳ್ಮೆಯಿಂದ ವರ್ತಿಸಿ ಆರೋಗ್ಯಕರ ಚರ್ಚೆ ನಡೆಸಬೇಕೆ ಹೊರತು ಹಿಂಸಾಚಾರದಲ್ಲಿ ತೊಡಗುವುದು ಸರಿಯಲ್ಲ ಎಂದು ಸುಪ್ರೀಂ ಕೋರ್ಟ್ ಬುಧವಾರ ಶಾಹೀನ್ ಬಾಗ್ ಪ್ರತಿಭಟನೆ ಕುರಿತು ಉಲ್ಲೇಖಿಸಿ ಹೇಳಿದೆ. 


ನ್ಯಾಯಮೂರ್ತಿಗಳಾದ ಎಸ್ ಕೆ ಕೌಲ್ ಮತ್ತು ಕೆ ಎಂ ಜೋಸೆಫ್ ಅವರನ್ನೊಳಗೊಂಡ ನ್ಯಾಯಪೀಠ, ಒಂದು ಕುಟುಂಬ, ದೇಶ ಎಂದು ಬಂದಾಗ ಇಲ್ಲಿರುವ ಜನರಲ್ಲಿ ವ್ಯತ್ಯಾಸಗಳು ಬರುವುದು ಸಹಜ. ಒಂದು ವಿಚಾರವನ್ನು ವಿರೋಧಿಸುವಾಗ ಅದು ಆರೋಗ್ಯಕರ ಚರ್ಚೆಯಾಗಬೇಕು, ಆದರೆ ಇಲ್ಲಿ ಹಿಂಸಾಚಾರ ನಡೆಯುತ್ತಿದೆ. ಅದು ಎಲ್ಲಿಂದಲೋ ಆರಂಭವಾಗಿ ಇನ್ನೆಲ್ಲಿಗೋ ಹೋಗುತ್ತದೆ. ಶಾಹೀನ್ ಬಾಗ್ ಪ್ರತಿಭಟನೆ ಒಂದು ದುರುದೃಷ್ಟಕರ, ಸಮಾಜ ಈ ರೀತಿ ಇರಬಾರದು ಎಂದು ಖೇದ ವ್ಯಕ್ತಪಡಿಸಿತು. 
ದೆಹಲಿ ಹಿಂಸಾಚಾರ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಮತ್ತು ಸಂಬಂಧಪಟ್ಟವರು ಶಾಂತಿ, ಸಾಮರಸ್ಯ ಕಾಪಾಡುವಂತೆ ಕೋರ್ಟ್ ಕರೆ ನೀಡಿದೆ. 


ಶಾಹೀನ್ ಬಾಗ್ ಕೇಸಿಗೆ ಸಂಬಂಧಿಸಿದಂತೆ ಇತರ ಮಧ್ಯಂತರ ಅರ್ಜಿಗಳನ್ನು ಆಲಿಸಲು ನಿರಾಕರಿಸಿದ ಸುಪ್ರೀಂ ಕೋರ್ಟ್, ವಿಚಾರಣೆಗೆ ಬಾಕಿ ಉಳಿದಿರುವ ಕೇಸುಗಳ ವಿಚಾರಣೆಯನ್ನು ವಿಸ್ತರಿಸುವ ಬಗ್ಗೆ ನಮಗೆ ಒಲವು ಇಲ್ಲ. ಸದ್ಯ ಪರಿಸ್ಥಿತಿ ಸರಿಯಿಲ್ಲದಿರುವುದರಿಂದ ಪ್ರಚೋದನಕಾರಿ ವರದಿಯ ವಿಚಾರಣೆಯನ್ನು ಮುಂದಿನ ಸಲ ಮಾಡಲಾಗುವುದು ಎಂದು ಹೇಳಿ ವಿಚಾರಣೆಯನ್ನು ಮಾರ್ಚ್ 20ಕ್ಕೆ ಮುಂದೂಡಿತು. 

SCROLL FOR NEXT