ದೇಶ

ದೆಹಲಿ ಹಿಂಸಾಚಾರದ ವಿಡಿಯೋಗಳಿದ್ದರೆ ಪೊಲೀಸರೊಂದಿಗೆ ಮಾತ್ರ ಹಂಚಿಕೊಳ್ಳಿ!

Srinivasamurthy VN

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ಪರ-ವಿರೋಧಿ ಬಣಗಳ ನಡುವೆ ನಡೆದ ಸಂಘರ್ಷಕ್ಕೆ ಸಂಬಂಧಿಸಿ ಯಾವುದೇ ವಿಡಿಯೋಗಳಿದ್ದರೆ ಪೊಲೀಸರೊಂದಿಗೆ ಮಾತ್ರ ಹಂಚಿಕೊಳ್ಳಿ ಎಂದು ದೆಹಲಿ ಪೊಲೀಸ್ ಇಲಾಖೆ ಸೂಚಿಸಿದೆ.

ಮೂರು ದಿನಗಳ ಕಾಲ ನಡೆದ ಹಿಂಸಾಚಾರದಲ್ಲಿ 34 ಮಂದಿ ಸಾವನ್ನಪ್ಪಿ 200ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಅಲ್ಲದೆ ಹಿಂಸಾಚಾರಕ್ಕೆ ಸಂಬಂಧಿಸಿದ ನೂರಾರು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ವಿಡಿಯೋಗಳನ್ನು ಪೊಲೀಸರೊಂದಿಗೆ ಮಾತ್ರ ಹಂಚಿಕೊಳ್ಳಿ ಎಂದು ದೆಹಲಿ ಪೊಲೀಸ್ ಇಲಾಖೆ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದೆ.

ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದರಿಂದ ಮತ್ತೆ ಶಾಂತಿ ಸುವ್ಯವಸ್ಥೆಗೆ ಧಕ್ಕೆಯಾಗುವ ಭೀತಿ ಇದೆ. ಅಲ್ಲದೆ ಹಿಂಸಾಚಾರದ ನಡೆಸುತ್ತಿರುವ ಪೊಲೀಸರು ಆರೋಪಿಗಳನ್ನು ಗುರಿತಿಸಲು ಈ ವಿಡಿಯೋಗಳು ನೆರವಾಗಬಹುದು ಎಂಬ ಮತ್ತೊಂದು ಕಾರಣಕ್ಕೆ ಈ ವಿಡಿಯೋಗಳನ್ನು ಪೊಲೀಸರೊಂದಿಗೆ ಮಾತ್ರ ಹಂಚಿಕೊಳ್ಳಿ ಎಂದು ಪೊಲೀಸರು ಮನವಿ ಮಾಡಿದ್ದಾರೆ.

ಇದೇ ವೇಳೆ ಮಾಧ್ಯಮಗಳಿಗೆ ಕೆಲ ನಿರ್ದೇಶನಗಳನ್ನು ನೀಡಿರುವ ದೆಹಲಿ ಪೊಲೀಸರು, ಹಿಂಸಾಚಾರಕ್ಕೆ ಸಂಬಂಧಿಸಿದ ಯಾವುದೇ ರೀತಿಯ ವಿಡಿಯೋಗಳನ್ನು ಪ್ರಸಾರ ಮಾಡದೇ ಅವರನ್ನು ಇಲಾಖೆ ನೀಡಿ ಎಂದು ಮನವಿ ಮಾಡಿದೆ. ಅಲ್ಲದೆ ಇದಕ್ಕಾಗಿ ಮೊಬೈಲ್ ನಂಬರ್ ಗಳನ್ನೂ ಕೂಡ ನೀಡಲಾಗಿದ್ದು, ಈ ಕೆಳಕಂಡ ನಂಬರ್ ಗಳಿಗೆ ವಿಡಿಯೋಗಳನ್ನು ಮತ್ತು ಇನ್ನಿತರೆ ಯಾವುದೇ ರೀತಿಯ ಮಾಹಿತಿಯನ್ನು ವಾಟ್ಸಪ್ ಮಾಡಬಹುದು ಎಂದು ಹೇಳಲಾಗಿದೆ. 

ಮೊಬೈಲ್ ಸಂಖ್ಯೆ: 8750871221, 8750871227 

SCROLL FOR NEXT