ದೇಶ

ಸರ್ವರಿಗೂ ನ್ಯಾಯ ನಮ್ಮ ಸರ್ಕಾರದ ಆದ್ಯತೆ: ದಿವ್ಯಾಂಗರಿಗೆ ಸಲಕರಣೆ ವಿತರಿಸಿದ ಪ್ರಧಾನಿ, ಗಿನ್ನಿಸ್ ವಿಶ್ವ ದಾಖಲೆ

Raghavendra Adiga

ಹಲವು ವಿಶ್ವ ದಾಖಲೆಗಳ ನಿರ್ಮಾಣ

ಪ್ರಯಾಗ್ ರಾಜ್: ಎಲ್ಲಾ ನಾಗರಿಕರ ಸೌಖ್ಯ, ಲಾಭ ಹಾಗೂ ಸರ್ವರಿಗೂ ನ್ಯಾಯ ದೊರಕುವಂತೆ ಮಾಡುವುದು ಸರ್ಕಾರದ ಜವಾಬ್ದಾರಿಯಾಗಿದೆ ಮತ್ತು 'ಸಬ್ಕಾ ಸಾಥ್, ಸಬ್ಕಾ ವಿಕಾಸ್ ಬ್ಕಾ ವಿಶ್ವಾಸ್' ನ ಮೂಲ ಆಧಾರವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಸಾಮಾಜಿಕ್ ಸಹಕಾರಿಕಾ ಶಿಬಿರ್  ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಮೋದಿ, ದಿವ್ಯಾಂಗರು ಹಾಗೂ  ಹಿರಿಯ ನಾಗರಿಕರಿಗೆ ನೆರವಿನ ಉಪಕರಣ ಒದಗಿಸಿದ್ದಾರೆ. ಈ ವೇಳೆ ದೇಶದ 130 ಕೋಟಿ ಜನರಿಗೆ ಸೇವೆ ನೀಡುವುದು ತಮ್ಮ ಸರ್ಕಾರದ ಆದ್ಯತೆಯಾಗಿದೆ ಎಂದು ಅವರು ಹೇಳಿದ್ದಾರೆ.

ಇದೇ ವೇಳೆ ಹಿಂದಿನ ಸರ್ಕಾರಗಳ ಕುರಿತು ಟೀಕಿಸಿದ ಪ್ರಧಾನಿಗಳು "ಹಿಂದಿನ ಸರ್ಕಾರಗಳು ದಿವ್ಯಾಂಗರಿಗೆ ನೆರವಾಗಬಲ್ಲ ಕೆಲವೇ ಶಿಬಿರಗಳನ್ನು ಆಯೋಜಿಸಿದ್ದವು. ಆದರೆ ನಮ್ಮ ಸರ್ಕಾರ ಮೆಗಾ ಕ್ಯಾಂಪ್ ಗಳ ಮೂಲಕ ದಿವ್ಯಾಂಗರಿಗೆ ವಿಶೇಷ ಸೌಲಭ್ಯ ಕಲ್ಪಿಸುತ್ತಿದೆ" ಎಂದಿದ್ದಾರೆ. ಈ ವೇಳೆ ಅವರು , ಅದರಲ್ಲೂ ವಿಶೇಷವಾಗಿ ಅಲಹಾಬಾದ್‌ನಲ್ಲಿ ಶನಿವಾರ ಆಯೋಜಿಸಿದ್ದಂತಹ ಮೆಗಾ ಕ್ಯಾಂಪ್ ಅನ್ನು ಉಲ್ಲೇಖಿಸಿದರು.

"ಕಳೆದ 5 ವರ್ಷಗಳಲ್ಲಿ, ದೇಶದ ವಿವಿಧ ಭಾಗಗಳಲ್ಲಿ 9,000 ಶಿಬಿರಗಳನ್ನು ದಿವ್ಯಾಂಗರಿಗಾಗಿ ಆಯೋಜಿಸಲಾಗಿದೆ 2.5 ಪಟ್ಟು ಹೆಚ್ಚಿನ ಸಲಕರಣೆಗಳನ್ನು ವಿತರಿಸಿದ್ದೇವೆ." ಎಂದು ಪ್ರಧಾನಿ ಹೇಳಿದ್ದಾರೆ.

ಹಲವು ವಿಶ್ವ ದಾಖಲೆಗಳ ನಿರ್ಮಾಣ

ಪ್ರಧಾನಿ ನರೇಂದ್ರಮೋದಿ ಅವರು ಶನಿವಾರ ನಗರಕ್ಕೆ ಆಗಮಿಸುವ ಮುನ್ನ ಮೂರು ಗಿನ್ನೆಸ್ ವಿಶ್ವ ದಾಖಲೆಗಳನ್ನು ನಿರ್ಮಿಸಲಾಗಿದೆ.
  
 ನಗರದಲ್ಲಿ ದಿವ್ಯಾಂಗರು ಮತ್ತು ಹಿರಿಯ ನಾಗರಿಕರಿಗೆ ಉಪಕರಣಗಳು ಮತ್ತು ಸಹಾಯಕ ಸಾಧನಗಳನ್ನು ವಿತರಿಸುವ ಬೃಹತ್ ಕಾರ್ಯಕ್ರಮದಲ್ಲಿ ಪ್ರಧಾನಿ ಭಾಗವಹಿಸುತ್ತಿದ್ದಾರೆ.
  
ಶುಕ್ರವಾರ ಇಲ್ಲಿಗೆ ತಲುಪಿದ ಲಂಡನ್‌ನ ಗಿನ್ನೆಸ್ ವಿಶ್ವ ದಾಖಲೆ ತಂಡ ಇಡೀ ಕಾರ್ಯಕ್ರಮವನ್ನು ದಾಖಲಿಸಿದ್ದು, ಮೂರು ದಾಖಲೆಗಳು ನಿರ್ಮಾಣವಾಗಿವೆ ಎಂದು ಪ್ರಕಟಿಸಿದೆ ಎಂಬುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
  
ಸಂಗಮಿಕ್ ಸಮೀಪದ ಪೆರೇಡ್ ಮೈದಾನದಲ್ಲಿ ‘ಸಮಾಜಿಕ್ ಅಧಿಕಾರಿತ  ಶಿವಿರ್’ ಎಂಬ ಶೀರ್ಷಿಕೆಯಡಿ ಸಮಾರಂಭ ನಡೆಯುತ್ತಿದ್ದು, ಪ್ರಧಾನಿಯವರೊಂದಿಗೆ ಉತ್ತರ ಪ್ರದೇಶ್ ರಾಜ್ಯಪಾಲೆ ಆನಂದಿಬೆನ್ ಪಟೇಲ್ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೆ ಶನಿವಾರ ಭಾಗವಹಿಸಲಿದ್ದಾರೆ.
  
ಶುಕ್ರವಾರ ಸಂಜೆ 1.8 ಕಿ.ಮೀ ದೂರದ  ತ್ರಿಚಕ್ರ ಸೈಕಲ್ ಸ್ಪರ್ಧೆಯಲ್ಲಿ ಮೊದಲ ದಾಖಲೆಯನ್ನು ಮಾಡಲಾಗಿದೆ. ಈ ಸ್ಪರ್ಧೆಯಲ್ಲಿ 300 ತ್ರಿಚಕ್ರ ಸೈಕಲ್ ಗಳಲ್ಲಿ ದಿವ್ಯಾಂಗರು ಸಾಹಸ ಮೆರೆದರು. 
  
ಇತರ ಎರಡು ದಾಖಲೆಗಳನ್ನು ಶನಿವಾರ ಬೆಳಿಗ್ಗೆ ನಿರ್ಮಿಸಲಾಗಿದೆ. 600 ವ್ಹೀಲ್ ಚೇರ್ ಗಳು ಮತ್ತು 400 ವ್ಹೀಲ್ ಚೇರ್ ಗಳ ಸ್ಪರ್ಧೆಯಲ್ಲಿ ದಿವ್ಯಾಂಗರು  ಪಾಲ್ಗೊಂಡರು.

SCROLL FOR NEXT