ಸಂಗ್ರಹ ಚಿತ್ರ 
ದೇಶ

ದೆಹಲಿ ಹಿಂಸಾಚಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ರಾಷ್ಟ್ರಪತಿಗೆ ಪ್ರತಿಪಕ್ಷಗಳ ಮನವಿ

ದೆಹಲಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ದಾಖಲಿಸಿರುವ 123 ಎಫ್ಐಆರ್‌ ಗಳಲ್ಲಿ ದ್ವೇಷ ಭಾಷಣ ಮಾಡಿದ ಬಿಜೆಪಿ ನಾಯಕರ ಹೆಸರೇ ಇಲ್ಲ ಎಂದು ಕರ್ನಾಟಕ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.

ನವದೆಹಲಿ: ದೆಹಲಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ದ್ವೇಷ ಭಾಷಣ ಮಾಡಿದ ಮತ್ತು ಹಿಂಸಾಚಾರದಲ್ಲಿ ಪಾಲ್ಗೊಂಡ ರಾಜಕೀಯ ನಾಯಕರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ವಿಪಕ್ಷಗಳು ಪತ್ರವೊಂದನ್ನು ಬರೆದಿವೆ.

ದೆಹಲಿಯಲ್ಲಿ ತಕ್ಷಣವೇ ಶಾಂತಿ ಸ್ಥಾಪನೆ ಮತ್ತು ರಾಷ್ಟ್ರಪತಿಗಳಿಗೆ ನೇರವಾಗಿ ಉತ್ತರದಾಯಿಯಾಗಿರುವ ಉಪರಾಜ್ಯಪಾಲ ಮತ್ತಿತರ ಅಧಿಕಾರಿಗಳಿಗೆ ತ್ವರಿತವಾಗಿ ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರುವಂತೆ ನಿರ್ದೇಶನ ನೀಡಬೇಕು. ಉದ್ರೇಕಕಾರಿ ದ್ವೇಷ ಭಾಷಣಗಳನ್ನು ಮಾಡಿದ ಎಲ್ಲರ ವಿರುದ್ಧ ತಕ್ಷಣವೇ ಎಫ್‌ಐಆರ್ ದಾಖಲಿಸುವಂತೆ ಮತ್ತು ಹಿಂಸಾಚಾರ ನಡೆಸಿದವರನ್ನು ಶಿಕ್ಷಿಸುವಂತೆ ಖಾತರಿಪಡಿಸಬೇಕು ಎಂದು ದೇಶದ ಏಳು ಪ್ರಮುಖ ವಿರೋಧ ಪಕ್ಷಗಳು ರಾಷ್ಟ್ರಪತಿಗಳಿಗೆ ಪತ್ರದ ಮೂಲಕ ಮನವಿ ಮಾಡಿವೆ.

ದೇಶದ ರಾಜಧಾನಿಯಲ್ಲಿ ಉಂಟಾಗಿರುವ ಪ್ರಕ್ಷುಬ್ಧ ಪರಿಸ್ಥಿತಿಯ ಬಗ್ಗೆ ರಾಷ್ಟ್ರಪತಿಯವರನ್ನು ಭೇಟಿಯಾಗಿ ಅಭಿಪ್ರಾಯಗಳನ್ನು ಮಂಡಿಸಲು ಅವಕಾಶ ಮಾಡಿಕೊಡಬೇಕು ಎಂದು ಹಲವು ಪ್ರತಿಪಕ್ಷಗಳ ಪರವಾಗಿ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಫೆಬ್ರುವರಿ 26ರಂದು ಪತ್ರ ಬರೆದಿದ್ದರು. ಫೆಬ್ರುವರಿ 28ರಿಂದ ಮಾರ್ಚ್ 2 ರವರೆಗೆ ರಾಷ್ಟ್ರಪತಿಗಳನ್ನು ಭೇಟಿಯಾಗಲು ಆಗುವುದಿಲ್ಲ ಎಂಬ ಮಾಹಿತಿ ಅಲ್ಲಿಂದ ಬಂದ ನಂತರ ಏಳು ಪಕ್ಷಗಳ ಮುಖಂಡರು ಫೆಬ್ರುವರಿ 28ರ ಸಂಜೆ ರಾಷ್ಟ್ರಪತಿಗಳಿಗೆ ಒಂದು ಜಂಟಿ ಮನವಿಪತ್ರ ಸಲ್ಲಿಸಿ, ರಾಷ್ಟ್ರಪತಿಗಳು ತಕ್ಷಣವೇ ಮಧ್ಯಪ್ರವೇಶಿಸಿ ಮಾನವೀಯತೆಯ ಆಧಾರದಲ್ಲಿ, ಗಲಭೆ ಪೀಡಿತ ಪ್ರದೇಶಗಳಲ್ಲಿ ಶಾಂತಿಯಾತ್ರೆ ಕೈಗೊಳ್ಳಲು ಹಾಗೂ ಶಾಂತಿ ಸಮಿತಿಗಳನ್ನು ರಚಿಸಲು ತಮಗೆ ಬಿಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವರಿಕೆ ಮಾಡಿಸಬೇಕು ಎಂದು ಕೋರಿದ್ದಾರೆ.

ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚುರಿ, ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ.ರಾಜ, ಡಿಎಂಕೆಯ ಸಂಸದೀಯ ಪಕ್ಷದ ಮುಖಂಡರಾದ ಟಿ.ಆರ್.ಬಾಲು, ಎನ್‌ಸಿಪಿಯ ಸಂಸತ್ ಸದಸ್ಯ ಪ್ರಫುಲ್ ಪಟೇಲ್, ಲೋಕತಾಂತ್ರಿಕ್ ಜನತಾದಳದ ಅಧ್ಯಕ್ಷ ಶರದ್ ಯಾದವ್, ಆಮ್ ಆದ್ಮಿ ಪಾರ್ಟಿಯ ಸಂಸತ್ ಸದಸ್ಯ ಸಂಜಯ್ ಸಿಂಗ್ ಮತ್ತು ಆರ್‌ಜೆಡಿಯ ಸಂಸತ್ ಸದಸ್ಯ ಪ್ರೊ. ಮನೋಜ್ ಕುಮಾರ್ ಝಾ ಈ ಮನವಿ ಪತ್ರಕ್ಕೆ ಸಹಿ ಹಾಕಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮಾತು ಜಗತ್ತಿಗೆ ಉತ್ತಮವಾಗದ ಹೊರತು ಅದು ಶಕ್ತಿಯಲ್ಲ; ಡಿಕೆಶಿ ಪೋಸ್ಟ್​​ಗೆ CM ಸಿದ್ದರಾಮಯ್ಯ ಕೌಂಟರ್

ಸಿದ್ದರಾಮಯ್ಯ ಹೈಕಮಾಂಡ್ ಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾರೆ: CM ಪುತ್ರ ಯತೀಂದ್ರ ಸ್ಫೋಟಕ ಹೇಳಿಕೆ; Video

ದುಬಾರಿಯಾಗುತ್ತಾ LPG ದರ?: ಭಾರತ-ಅಮೆರಿಕ ಒಪ್ಪಂದದಿಂದ ಗ್ರಾಹಕರ ಮೇಲೆ ಪರಿಣಾಮ, ತೈಲ ಸಂಸ್ಥೆಗಳಿಗೆ ದುಬಾರಿ.. ತಜ್ಞರು ಹೇಳಿದ್ದೇನು?

Cricket: ದಕ್ಷಿಣ ಆಫ್ರಿಕಾ ವಿರುದ್ಧ ಹೀನಾಯ ಸೋಲು, ಪಾಕಿಸ್ತಾನಕ್ಕೆ ಲಾಭ, WTC ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಕುಸಿದ ಟೀಂ ಇಂಡಿಯಾ!

ನಗ್ನ ದೃಶ್ಯಗಳಲ್ಲಿ ನಟನೆ ಆರೋಪ: ಆ ಒಬ್ಬ ನಿರ್ದೇಶಕ ಕೇಳಿದರೆ ಬೆತ್ತಲೆಯಾಗಿ ನಟಿಸುತ್ತೇನೆ- ನಟಿ ಆಂಡ್ರೆಯಾ

SCROLL FOR NEXT