ದೇಶ

ರಾಜಸ್ಥಾನ: 48 ಗಂಟೆಗಳಲ್ಲಿ 8 ನವಜಾತ ಶಿಶುಗಳ ಸಾವು, ಡಿಸೆಂಬರ್ ನಲ್ಲಿ 100 ಮಕ್ಕಳ ಸಾವು

Srinivasamurthy VN

ಕೋಟಾ: ಕೇವಲ 48 ಗಂಟೆಗಳಲ್ಲಿ 8 ನವಜಾತ ಶಿಶುಗಳು ಸಾವನ್ನಪ್ಪಿದ್ದು, ಆ ಮೂಲಕ ಡಿಸೆಂಬರ್ ನಲ್ಲಿ ಸಾವನ್ನಪ್ಪಿದ ಶಿಶುಗಳ ಸಂಖ್ಯೆ 100 ಮಕ್ಕಳು ಸಾವನ್ನಪ್ಪಿವೆ.

ರಾಜಸ್ಥಾನದ ಕೋಟಾದಲ್ಲಿ ಕಳೆದ 2 ದಿನಗಳಲ್ಲಿ 8 ನವಜಾತ ಶಿಶುಗಳು ಸಾವನ್ನಪ್ಪುವ ಮೂಲಕ ಮಕ್ಕಳ ಸಾವಿನ ಸರಣಿ ಮುಂದುವರೆದಿದೆ. ಈ ಕುರಿತಂತೆ ಮಾತನಾಡಿರುವ ಜಿಲ್ಲಾಸ್ಪತ್ರೆಯ ವರಿಷ್ಠಾಧಿಕಾರಿ ಡಾ. ಅಮೃತ್ ಲಾಲ್ 
ಅವರು, ವಿವಿಧ ಕಾರಣಗಳಿಂದಾಗಿ ಕೋಟಾ ಜಿಲ್ಲಾಸ್ಪತ್ರೆಯಲ್ಲಿ 8 ಮಕ್ಕಳು ಸಾವನ್ನಪ್ಪಿದ್ದಾರೆ. ಆ ಮೂಲಕ ಡಿಸೆಂಬರ್ ತಿಂಗಳಲ್ಲಿ ಗರಿಷ್ಠ ಅಂದರೆ 100 ಮಕ್ಕಳು ಸಾವನ್ನಪ್ಪಿವೆ. ಪ್ರಸ್ತುತ ಮಕ್ಕಳ ಸಾವಿನ ಕುರಿತು ವೈದ್ಯರೊಂದಿಗೆ ಚರ್ಚೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

ಇನ್ನು ಆಸ್ಪತ್ರೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಶಿಶು ಮರಣ ಪ್ರಮಾಣ ಗಣನೀಯ ಇಳಿಕೆಯಾಗಿದೆ ಎಂದು ಕೂಡ ಮೀನಾ ಹೇಳಿದರು. 10 ಶಿಶುಗಳು ಸಾವನ್ನಪ್ಪಿರುವ ಪ್ರಕರಣದ ತನಿಖೆ ನಡೆಸಲು ಶಿಶು ರೋಗ ವಿಭಾಗದ ಶಿಶು ತಜ್ಞ ಡಾ. ಅಮೃತ್ ಲಾಲ್ ಬೈರವ್ ನೇತೃತ್ವದಲ್ಲಿ ಮೂವರು ಸದಸ್ಯರ ಸಮಿತಿಯನ್ನು ಆಸ್ಪತ್ರೆಯ ಆಡಳಿತ ಮಂಡಳಿ ರೂಪಿಸಿದೆ.

SCROLL FOR NEXT