ದೇಶ

ಸಿಎಎ ಹಿಂಸಾಚಾರದಲ್ಲಿ ಪಾತ್ರ: ಪಿಎಫ್ಐ ವಿರುದ್ದ ಕ್ರಮಕ್ಕೆ ಗೃಹ ಸಚಿವಾಲಯ ಚಿಂತನೆ

Manjula VN

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಡೆದ ಹಿಂಸಾಚಾರದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಪಾತ್ರವಿದ್ದು, ಸಂಘಟನೆ ವಿರುದ್ಧ ಶೀಘ್ರದಲ್ಲೇ ಕ್ರಮ ಕೈಗೊಳ್ಳಲು ಕೇಂದ್ರ ಗೃಹ ಸಚಿವಾಲಯ ಚಿಂತನೆ ನಡೆಸುತ್ತಿದೆ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರು ಬುಧವಾರ ಹೇಳಿದ್ದಾರೆ. 

ಹಿಂಸಾಚಾರದಲ್ಲಿ ಪಿಎಫ್ಆ ಪಾತ್ರ ಇರುವುದು ಕಂಡು ಬಂದಿದ್ದು, ಈ ಕುರಿಸು ಸಾಕ್ಷ್ಯಾಧಾರಗಳ ಆಧಾರದ ಸೂಕ್ತ ಕೈಗೊಳ್ಳಲಾಗುತ್ತದೆ. ಸಂಘಟನೆಯಲ್ಲಿರುವ ವಿದ್ಯಾರ್ತಿಗಳೂ ಕೂಡ ಸಿಮಿಯೊಂದಿಗೆ ಕೈಜೋಡಿಸಿರುವ ಆರೋಪಗಳೂ ಕೇಳಿ ಬಂದಿವೆ ಎಂದು ಹೇಳಿದ್ದಾರೆ. 

ಪೌರತ್ವ ಕಾಯ್ದೆ ವಿರುದ್ಧ ನಡೆದ ಹಿಂಸಾಚಾರಗಳಲ್ಲಿ ಕೈವಾಡ ಹೊಂದಿದೆ ಎನ್ನಲಾದ ಪಾಪ್ಯುಲರ್ ಫ್ರಂಟ್ ಆಫ್ ಿಂಡಿಯಾ ಸಂಘಟನೆಯನ್ನು ನಿಷೇಧಿಸುವಂತೆ ಉತ್ತರ ಪ್ರದೇಶ ಸರ್ಕಾರ ಈ ಹಿಂದೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡಿತ್ತು. 

ಕೇಂದ್ರಕ್ಕೆ ಬರೆದಿದ್ದ ಉತ್ತರಪ್ರದೇಶ ಸರ್ಕಾರ, ರಾಜ್ಯದಲ್ಲಿ ಹಿಂಸಾಚಾರದ ಹಿನ್ನೆಲೆಯಲ್ಲಿ ಪಿಎಫ್ಐ ಉತ್ತರಪ್ರದೇಶ ಘಟಕದ ಮುಖ್ಯಸ್ಥ ವಾಸಿಂ ಹಾಗೂ 16 ಕಾರ್ಯಕರ್ತರನ್ನು ಬಂಧಿಸಲಾಗಿದೆ. ಆದ್ದರಿಂದ ಪಿಎಫ್ಐ ಮೇಲೆ ನಿಷೇಧ ಹೇರಬೇಕು ಎಂದು ತಿಳಿಸಿತ್ತು. 

SCROLL FOR NEXT