ದೇಶ

ತಂದೆಯ ಪುಣ್ಯತಿಥಿಯಂದು ಕೈದಿಗಳ ದಂಡ ಪಾವತಿಸಿ ಸ್ವತಂತ್ರ ಕೊಟ್ಟ ಉ.ಪ್ರ.ವ್ಯಕ್ತಿ!

Sumana Upadhyaya

ಆಗ್ರಾ: ಒಬ್ಬ ವ್ಯಕ್ತಿಯಿಂದಾಗಿ ಆಗ್ರಾ ಜೈಲಿನಿಂದ 9 ಮಂದಿ ಕೈದಿಗಳು ಮುಕ್ತವಾಗಿ ಹೊರಬಂದಿದ್ದಾರೆ.
ಈ ಒಂಭತ್ತು ಮಂದಿ ಕಾರಾಗೃಹ ವಾಸದ ಅವಧಿ ಮುಗಿಸಿದ್ದರೂ ದಂಡ ಪಾವತಿಸದಿದ್ದ ಕಾರಣ ಅವರನ್ನು ಹೊರಬಿಟ್ಟಿರಲಿಲ್ಲ. ಸಣ್ಣಪುಟ್ಟ ಅಪರಾಧಗಳನ್ನು ಮಾಡಿ ಜೈಲುಪಾಲಾಗಿದ್ದರು.


ಹೀಗಿರುವಾಗ ಆಗ್ರಾದ ವ್ಯಕ್ತಿ ಪ್ರವೇಂದ್ರ ಕುಮಾರ್ ಯಾದವ್ ಅವರ ದಂಡದ ಮೊತ್ತ 61 ಸಾವಿರದ 333 ರೂಪಾಯಿಗಳನ್ನು ಪಾವತಿಸಿ ಅವರನ್ನು ಬಂಧಮುಕ್ತಗೊಳಿಸಿದ್ದಾರೆ.


ನನ್ನ ತಂದೆಯವರಾದ ನಿವಾಸ್ ಯಾದವ್ ಅವರ 6ನೇ ಪುಣ್ಯತಿಥಿಯ ದಿನ ಕೈದಿಗಳ ದಂಡ ಪಾವತಿಸಿ ಅವರಿಗೆ ಸ್ವಾತಂತ್ರ್ಯ ನೀಡಲು ನಿರ್ಧರಿಸಿದೆ. ನನ್ನ ತಂದೆಯವರಿಗೆ ನೀಡುತ್ತಿರುವ ನೆನಪಿನ ಕಾಣಿಕೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ ಯಾದವ್.
ಈ ಬಗ್ಗೆ ಮಾತನಾಡಿದ ಆಗ್ರಾ ಜೈಲಿನ ಸೂಪರಿಂಟೆಂಡೆಂಟ್ ಶಶಿಕಾಂತ್ ಮಿಶ್ರಾ, ಇಲ್ಲಿಯವರೆಗೆ ದಂಡ ಪಾವತಿಸಿದ 313 ಕೈದಿಗಳನ್ನು ಬಿಡುಗಡೆ ಮಾಡಲಾಗಿದೆ. ಹೀಗೆ ಕೈದಿಗಳಿಂದ ಸಂಗ್ರಹಿಸಲಾದ ಮೊತ್ತ 21 ಲಕ್ಷವಾಗಿದೆ ಎಂದರು.


ಜೈಲು ವಾಸ ಅವಧಿ ಮುಗಿಸಿದ ಈ ರೀತಿಯ ಕೈದಿಗಳ ದಂಡದ ಮೊತ್ತವನ್ನು ಎನ್ ಜಿಒಗಳು, ವೈದ್ಯರು, ಉದ್ಯಮಿಗಳು ಪಾವತಿಸಿದ ಅನೇಕ ಉದಾಹರಣೆಗಳಿವೆ.

SCROLL FOR NEXT