ದೇಶ

ಭಾರತ-ಜಪಾನ್ ಶೃಂಗಸಭೆ ದಿನಾಂಕ ಶೀಘ್ರದಲ್ಲೇ ನಿಗದಿ: ವಿದೇಶಾಂಗ ಸಚಿವಾಲಯ

Manjula VN

ನವದೆಹಲಿ: ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆ ಹಿನ್ನೆಲೆಯಲ್ಲಿ ಈ ಹಿಂದೆ ಮುಂದೂಡಲಾಗಿದ್ದ ಭಾರತ-ಜಪಾನ್ ವಾರ್ಷಿಕ ದ್ವಿಪಕ್ಷೀಯ ಶೃಂಗಸಭೆಗೆ ಶೀಘ್ರದಲ್ಲಿಯೇ ದಿನಾಂಕ ನಿಗದಿ ಮಾಡಲಾಗುತ್ತದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ. 

ಡಿಸೆಂಬರ್ 13 ರಂದು ಭಾರತ ಮತ್ತು ಜಪಾನ್ ನಡುವೆ ವಾರ್ಷಿಕ ಶೃಂಗಸಭೆ ನಡೆಯಬೇಕಿತ್ತು. ಆದರೆ, ದೇಶದಾದ್ಯಂತ ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಶೃಂಗಸಭೆಯನ್ನು ಮುಂದೂಡಲಾಗಿತ್ತು. 

ಜಪಾನ್ ರಾಯಭಾರಿಗಳೊಂದಿಗೆ ಸಂಪರ್ಕದಲ್ಲಿದ್ದು, ಶೀಘ್ರದಲ್ಲೇ ಉಭಯ ರಾಷ್ಟ್ರಗಳ ನಡುವಿನ ಶೃಂಗಸಭೆಗೆ ದಿನಾಂಕವನ್ನು ನಿಗತಿ ಮಾಡಲಾಗುತ್ತದೆ ಎಂದು ವಿದೇಶಾಂಗ ಸಚಿವಾಲಯ ವ್ಯವಹಾರಗಳ ವಕ್ತಾರ ರವೀಶ್ ಕುಮಾರ್ ಅವರು ತಿಳಿಸಿದ್ದಾರೆ. 

ಇದೇ ವರ್ಷದಲ್ಲಿಯೇ ಶೃಂಗಸಭೆ ನಡೆಯಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇದು ವಾರ್ಷಿಕ ಕಾರ್ಯವಿಧಾನವಾಗಿದೆ. ಶೃಂಗಸಭೆ ಡಿಸೆಂಬರ್ ತಿಂಗಳಿನಲ್ಲಿಯೇ ನಡೆಯಬೇಕಿತ್ತು. ಆದರೆ, ಕಾರಣಾಂತರಗಳಿಂದ ಮುಂದೂಡಲಾಗಿತ್ತು. ಆದರೆ, ಇದೀಗ ಶೃಂಗಸಭೆ ದಿನಾಂಕ ನಿಗದಿ ಕುರಿತು ಜಪಾನ್ ಜೊತೆಗೆ ಮಾತುಕತೆ ನಡೆಸಲಾಗುತ್ತಿದ್ದು, ಶೀಘ್ರದಲ್ಲಿಯೇ ದಿನಾಂಕ ನಿಗದಿ ಮಾಡಲಾಗುತ್ತದೆ ಎಂದಿದ್ದಾರೆ. 

SCROLL FOR NEXT