ದೇಶ

ಕಾಶ್ಮೀರದ ಒಂದಿಂಚು ಭೂಮಿ ಕೂಡ ಕರ್ಫ್ಯೂ ಅಡಿಯಲ್ಲಿಲ್ಲ: ಗೃಹ ಸಚಿವ ಅಮಿತ್ ಶಾ

Manjula VN

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಒಂದಿಂಚು ಭೂಮಿ ಕೂಡ ಕರ್ಫ್ಯೂ ಅಡಿಯಲಿಲ್ಲ ಎಂದು ಗೃಹ ಸಚಿವ ಅಮಿತ್ ಶಾ ಅವರು ಹೇಳಿದ್ದಾರೆ. 

ಖಾಸಗಿ ಸುದ್ದಿವಾಹಿನಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370 ವಿಧಿಯನ್ನು ಕೇಂದ್ರ ಮುಟ್ಟಿದರೆ, ಇಡೀ ದೇಶ ಹೊತ್ತು ಉರಿಯಲಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಮೂವರು ಮಾಜಿ ಮುಖ್ಯಮಂತ್ರಿಗಳು ಹೇಳಿದ್ದರು. 370 ವಿಧಿ ರದ್ದುಗೊಂಡ ಬಳಿಕ ಇದೇ ಮೂವರು ನಾಯಕರನ್ನು ಗೃಹ ಬಂಧನದಲ್ಲಿಸಲಾಗಿದೆ. ಮೂವರು ಮಾಜಿ ಸಿಎಂಗಳು ಬಂಧನಕ್ಕೊಳಗಾದರೂ ಯಾರೊಬ್ಬರೂ ಅವರನ್ನು ದೇಶದ್ರೋಹಿಗಳೆಂದು ಕರೆಯಲಿಲ್ಲ ಎಂದು ವ್ಯಂಗ್ಯವಾಡಿದ್ದಾರೆ. 

ಮೂವರು ನಾಯಕರು ಪ್ರಚೋದನಾತ್ಮಕ ಹೇಳಿಕೆಗಳಿಂದಾಗಿ ವಶಕ್ಕೆ ಪಡೆಯಲಾಗಿದೆ. ಅವರ ಹೇಳಿಕೆಯನ್ನು  ನೋಡಿ 370 ವಿಧಿ ಮುಟ್ಟಿದರೆ, ದೇಶ ಹೊತ್ತಿಕೊಂಡು ಉರಿಯಲಿದೆ ಎಂದಿದ್ದಾರೆ. ಆದರೆ, ಹೇಳಿಕೆ ಬಳಿಕ ಅವರೇ ಬಂಧನಕ್ಕೊಳಗಾಗಿದ್ದಾರೆ. ಆಗಸ್ಟ್ 5 ರ ಬಳಿಗ ಮೂವರು ಮಾಜಿ ಸಿಎಂಗಳು ಸೇರಿದಂತೆ ಜಮ್ಮು ಮತ್ತು ಕಾಶ್ಮೀರದ ಹಲವು ರಾಜಕೀಯ ನಾಯಕರು ಬಂಧನಕ್ಕೊಳಗಾಗಿದ್ದಾರೆ. 

370 ವಿಧಿ ರದ್ದುಗೊಂಡ ಬಳಿಕ ಫಾರೂಖ್ ಅಬ್ದುಲ್ಲಾ, ಮೆಹಬೂಬಾ ಮುಫ್ತಿ ಹಾಗೂ ಒಮರ್ ಅಬ್ದುಲ್ಲಾ ಅವರು ಗೃಹ ಬಂಧನದಲ್ಲಿದ್ದಾರೆ. 

ರಾಜಕೀಯ ಬಂಧನ ನಿರ್ಧಾರ ಸ್ಥಳೀಯ ಆಡಳಿತ ಮಂಡಳಿ ತೆಗೆದುಕೊಂಡಿರುವ ನಿರ್ಧಾರವಾಗಿದೆ. ನನ್ನ ಆದೇಶದ ಮೇರೆಗೆ ಬಂಧನಕ್ಕೊಳಪಡಿಸಿಲ್ಲ. ಪರಿಸ್ಥಿತಿಗೆ ಅನುಗುಣವಾಗಿ ಸ್ಥಳೀಯ ಆಡಳಿತ ಮಂಡಳಿಯ ಅವರನ್ನು ಬಿಡುಗಡೆ ಮಾಡಲಿದೆ. ಪ್ರಸ್ತುತ ಕಾಶ್ಮೀರ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದು, ಜನಜೀವನ ಸಾಮಾನ್ಯವಾಗಿದೆ. ಕಾಶ್ಮೀರದ ಒಂದಿಂಚು ಭೂಮಿ ಕೂಡ ಕರ್ಫ್ಯೂ ಅಡಿಯಲಿಲ್ಲ ಎಂದು ತಿಳಿಸಿದ್ದಾರೆ. 

SCROLL FOR NEXT