ದೇಶ

ಪೌರತ್ವ ಕಾಯ್ದೆ ಯಾರ ಹಕ್ಕನ್ನೂ ಕಸಿಯುವುದಿಲ್ಲ, ಅಲ್ಪಸಂಖ್ಯಾತರಿಗೆ ಸಹಾಯ ಮಾಡಲಿದೆ: ವಿಕೆ.ಸಿಂಗ್

Manjula VN

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ಯಾರ ಹಕ್ಕನ್ನೂ ಕಸಿಯುವುದಿಲ್ಲ. ಅಲ್ಪಸಂಖ್ಯಾತ ಜನರಿಗೆ ಕಾಯ್ದೆಯಿಂದ ಸಹಾಯವಾಗಲಿದೆ ಎಂದು ಕೇಂದ್ರ ಸಚಿವ ವಿಕೆ.ಸಿಂಗ್ ಅವರು ಭಾನುವಾರ ಹೇಳಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇವಲ ವೋಟ್ ಬ್ಯಾಂಕ್'ಗಾಗಿ ಕೆಲಸ ಮಾಡುವ ಪಕ್ಷಗಳು ಕಾಯ್ದೆ ಕುರಿತು ಜನರಿಗೆ ತಪ್ಪು ಮಾಹಿತಿ ನೀಡುತ್ತಿವೆ. ಕಾಯ್ದೆಯು ಯಾರ ಹಕ್ಕನ್ನೂ ಕಸಿದುಕೊಳ್ಳುವುದಿಲ್ಲ. ಅಲ್ಪಸಂಖ್ಯಾತ ಜನರಿಗೆ ಸಹಾಯ ಮಾಡುವ ಸಲುವಾಗಿ ಜಾರಿಗೆ ತರಲಾಗಿದೆ. ಹೃದಯ ಪೂರ್ವಕವಾಗಿ ಜನರು ಜೀವನ ನಡೆಸುವ ಉದ್ದೇಶವನ್ನು ಕಾಯ್ದೆ ಹೊಂದಿದೆ ಎಂದು ಹೇಳಿದ್ದಾರೆ. 

ಜನರಿಗೆ ಸಹಾಯ ಮಾಡಲು ಬಿಜೆಪಿ ಕಾಯ್ದೆ ಜಾರಿಗೆ ತಂದಿದ್ದು, ವಿರೋಧ ಪಕ್ಷಗಳು ಸುಖಾಸುಮ್ಮನೆ ಗೊಂದಲ ಸೃಷ್ಟಿಸುತ್ತಿದೆ ಎಂದು ತಿಳಿಸಿದ್ದಾರೆ.

ಇದೇ ವೇಳೆ ಗುರುದ್ವಾರ ದಾಳಿ ಕುರಿತಂತೆ ಪ್ರತಿಕ್ರಿಯಿಸಿರುವ ಅವರು, ಪಾಕಿಸ್ತಾನ ರಾಷ್ಟ್ರದಲ್ಲಿ ನಮ್ಮ ಜನರು ಸುರಕ್ಷಿತರಾಗಿಲ್ಲ ಎಂಬುದನ್ನು ಈ ದಾಳಿ ಸಾಬೀತು ಪಡಿಸಿದೆ. ಇಂತಹ ಜನರಿಗೆ ಭಾರತ ಜಾರಿಗೆ ತಂದಿರುವ ಕಾಯ್ದೆ ಸಹಾಯ ಮಾಡಲಿದೆ ಎಂದಿದ್ದಾರೆ. 

SCROLL FOR NEXT