ದೇಶ

ಜೆಎನ್'ಯು ದಾಳಿ: ಹಿಂಸಾಚಾರದ ವಿರುದ್ಧ ಒಗ್ಗೂಡಿದ ವಿದ್ಯಾರ್ಥಿ ಸಂಘಟನೆಗಳು, ಮುಂಬೈ, ಪುಣೆಯಲ್ಲಿ ಪ್ರತಿಭಟನೆ

Manjula VN

ನವದೆಹಲಿ: ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ನಡೆದ ಹಿಂಸಾಚಾರಕ್ಕೆ ದೇಶದ ಹಲವು ವಿದ್ಯಾರ್ಥಿ ಸಂಘಟನೆಗಳು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದು, ಮಹಾರಾಷ್ಟ್ರದ ಮುಂಬೈ, ಪುಣೆ ಸೇರಿದಂತೆ ಹಲವೆಡೆ ಇದೀಗ ಪ್ರತಿಭಟನೆಗಳು ಆರಂಭಗೊಂಡಿವೆ. 

ವಾಣಿಜ್ಯ ನಗರಿ ಮುಂಬೈನ ಗೇಟ್ ವೇ ಆಪ್ ಇಂಡಿಯಾ ಬಳಿ ಕಳೆದ ಮಧ್ಯರಾತ್ರಿಯಿಂದ ಶುರುವಾಗಿರುವ ದಿಢೀರ್ ಪ್ರತಿಭಟನೆ ಇಂದು ಬೆಳಗ್ಗೆ ಕೂಡಾ ಮುಂದುವರಿದಿವೆ. ಪುಣೆಯ ಎಫ್'ಟಿಐಐ ಕ್ಯಾಂಪಸ್ ನಲ್ಲೂ ಪ್ರತಿಭಟನೆ ನಡೆಸಲಾಗುತ್ತಿದೆ. ಕೈಗಳಲ್ಲಿ ತ್ರಿವರ್ಣ ಧ್ವಜ, ಬ್ಯಾನರ್ ಗಳು ಹಾಗೂ ಕ್ಯಾಂಡಲ್ ಗಳನ್ನು ಹಿಡಿದಿರುವ ಪ್ರತಿಭಟನಾಕಾರರು ಜೆಎನ್'ಯು ಮೇಲೆ ದಾಳಿ ನಡೆಸಿದ ದುಷ್ಕರ್ಮಿಗಳು ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸುತ್ತಿದ್ದಾರೆ. 

ಹಿಂಸಾಚಾರದ ಕುರಿತು ಪ್ರತಿಕ್ರಿಯೆ ನೀಡಿರುವ ಎನ್'ಪಕ್ಷದ ಅಧ್ಯಕ್ಷ ಶರದ್ ಪವಾರ್ ಅವರು, ಇದೊಂದು ಯೋಜಿತ ದಾಳಿಯಾಗಿದೆ. ಇಂತಹ ಹೇಡಿತನದ ದಾಳಿಗೆ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ಬಲಿಪಶುಗಳಾಗಿದ್ದಾರೆ. ವಿಶ್ವವಿದ್ಯಾಲಯಜಲ್ಲಿ ನಡೆದ ಈ ವಿಧ್ವಂಸಕತೆ ಹಾಗೂ ಹಿಂಸಾಚಾರವನ್ನು ತೀವ್ರವಾಗಿ ಖಂಡಿಸುತ್ತೇನೆ. ಪ್ರಜಾಪ್ರಭುತ್ವ ಮೌಲ್ಯಗಳು ಮತ್ತು ಚಿಂತನಗಳನ್ನು ನಿಗ್ರಹಿಸಲು ಹಿಂಸಾತ್ಮಕ ವಿಧಾನಗಳ ಬಳಕೆ ಮಾಡುವುದು ಎಂದಿಗೂ ಯಶಸ್ವಿಯಾಗುವುದಿಲ್ಲ ಎಂದು ಹೇಳಿದ್ದಾರೆ. 

SCROLL FOR NEXT