ದೇಶ

ಜೆಎನ್'ಯು ಹಿಂಸಾಚಾರ: ಬೀದಿಗಿಳಿದು ವಿದ್ಯಾರ್ಥಿಗಳ ಆಕ್ರೋಶ, ಮಹತ್ವದ ಸುಳಿವು ಸಂಗ್ರಹಿಸಿದ ಪೊಲೀಸರು

Manjula VN

ನವದೆಹಲಿ: ರಾಜಧಾನಿ ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಲು ಹಾಗೂ ಅಧ್ಯಾಪಕರ ಮೇಲೆ ಮುಸುಕುಧಾರಿ ಅನಾಮಧೇಯ ಗೂಂಡಾಗಳು ನಡೆಸಿದ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ, ದಾಳಿಕೋರರ ವಿರುದ್ದ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ವರೆಗೆ ಯಾರೂ ಬಂಧನಕ್ಕೊಳಗಾಗಿಲ್ಲ. ಆದರೆ, ಪ್ರಕರಣ ಸಂಬಂಧ ಪೊಲೀಸರಿಗೆ ಮಹತ್ವದ ಸುಳಿವುಗಳು ಲಭ್ಯವಾಗಿವೆ ಎಂದು ಹೇಳಲಾಗುತ್ತಿದೆ. 

ಪ್ರಸ್ತುತ ಪ್ರಕರಣದ ತನಿಖೆ ದೆಹಲಿ ಕ್ರೈಮ್ ಬ್ರಾಂಚ್'ಗೆ ಹಸ್ತಾಂತರಿಸಲಾಗಿದೆ. ಇನ್ನೊಂದೆಡೆ ಜೆಎನ್'ಯು ಹಿಂಸಾಚಾರದ ವಿರುದ್ಧ ದೇಶದಾದ್ಯಂತ ಆಕ್ರೋಷ ವ್ಯಕ್ತವಾಗಿದ್ದು, ರಾಜಕೀಯಕ ಪಕ್ಷಗಳು, ಜನತೆ ಹಾಗೂ ವಿದ್ಯಾರ್ಥಿಗಲು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. 

ದಾಳಿಕೋರರ ಬಂಧನವಾಗಬೇಕು, ಮತ್ತೆಂದೂ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕೆಂದು ಆಗ್ರಹಿಸುತ್ತಿದ್ದಾರೆ. 

ಈ ನಡುವೆ ಶಂಕಿತ ಮುಸುಕುಧಾರಿಗಳಿಂದ ತೀವ್ರ ಹಲ್ಲೆಗೆ ಒಳಗಾಗಿ ಗಾಯಗೊಂಡಿದ್ದ ವಿವಿ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಆಯಿಷಿ ಘೋಷ್ ಅವರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, 20-25 ದಾಳಿಕೋರರು ಕಬ್ಬಿಣದ ಸರಳುಗಳಿಂದ ಹೊಡೆದರು. ನನ್ನನ್ನು ಅವರು ಬಡಿದು ಸಾಯಿಸಿಯೇ ಬಿಡುತ್ತಿದ್ದರು. ಬದುಕಿದ್ದೇ ಹೆಚ್ಚು ಎಂದು ಹೇಳಿದ್ದಾರೆ. 

ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ ಅಧಿಕಾರಿಗಳು ವಿಶ್ವವಿದ್ಯಾಲಯದ್ ಅಧಿಕಾರಿಗಳ ಜೊತಗೆ ಘಟನೆಯ ಮಾಹಿತಿ ಪಡೆದುಕೊಂಡರು. ಈ ವೇಲೆ ವಿವಿ ಕುಲಪತಿ ಜಗದೀಶ್ ಕುಮಾರ್ ಗೈರು ಹಾಜರಾಗಿದ್ದರು. ಜಗದೀಶ್ ಕುಮಾರ್ ವಜಾಕ್ಕೆ ಶಿಕ್ಷಕರ ಸಂಘ ಮತ್ತು ಜೆಎನ್'ಯುಎಸ್'ಯು ಆಗ್ರಹಿಸಿವೆ,

ಹಂಸಾಚಾರದ ಬಳಿಕ ಏಮ್ಸ್'ಗೆ ದಾಖಲಾಗಿದ್ದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸೇರಿ 34 ಜನರನ್ನು ಬಿಡುಗಡೆ ಮಾಡಲಾಗಿದೆ. 

SCROLL FOR NEXT