ದೇಶ

ಜೆಎನ್ ಯು ಹಿಂಸಾಚಾರ: ವಿದ್ಯಾರ್ಥಿಗಳು, ಪ್ರಾಧ್ಯಾಪಕರಿಂದ 11 ದೂರು ದಾಖಲು

Srinivasamurthy VN

ನವದೆಹಲಿ: ಪ್ರತಿಷ್ಠಿತ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ನಡೆದಿದ್ದ ಹಿಂಸಾಚಾರ ಘಟನೆಗೆ ಸಂಬಂಧಿಸಿದಂತೆ ಇದೀಗ ವಿದ್ಯಾರ್ಥಿಗಳು ಮತ್ತು ಅಲ್ಲಿನ ಪ್ರಾಧ್ಯಾಪಕರ ಸರಣಿ ದೂರುಗಳನ್ನು ನೀಡಿದ್ದಾರೆ ಎಂದು ತಿಳಿದುಬಂದಿದೆ.

ಭಾನುವಾರ ನಡೆದ ಹಿಂಸಾಚಾರ ಘಟನೆಯಲ್ಲಿ ಹಲ್ಲೆಗೊಳಗಾಗಿದ್ದ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ಪೊಲೀಸರಿಗೆ ಒಟ್ಟು 11 ದೂರುಗಳನ್ನು ನೀಡಿದ್ದು, ಈ ಎಲ್ಲ ದೂರುಗಳನ್ನು ಪ್ರಕರಣಗ ತನಿಖೆ ನಡೆಸುತ್ತಿರುವ ದೆಹಲಿ ಕ್ರೈ ಬ್ರ್ಯಾಂಚ್ (ಅಪರಾಧ ದಳ) ರವಾನೆ ಮಾಡಲಾಗಿದೆ ಎಂದು ನೈಋತ್ಯ ದೆಹಲಿ ವಿಭಾಗದ ದೇವೇಂದರ್ ಅಯ್ಯರ್ ಹೇಳಿದ್ದಾರೆ.

ಇದೇ ವೇಳೆ ಜೆಎನ್ ಯು ಭದ್ರತೆ ಕುರಿತು ಮಾತನಾಡಿದ ಅವರು, ಈಗಲೇ ಜೆಎನ್ ಯು ಕ್ಯಾಂಪಸ್ ನಲ್ಲಿ ಪೊಲೀಸ್ ಭದ್ರತೆ ಮುಂದುವರೆದಿದೆ. ಸಮವಸ್ಕ್ರಧಾರಿ ಪೊಲೀಸರೊಂದಿಗೆ ಮಫ್ತಿಯಲ್ಲಿರುವ ಪೊಲೀಸರು ಕೂಡ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಸಮವಸ್ತ್ರಧಾರಿ ಪೊಲೀಸರು ಕ್ಯಾಂಪಸ್ ಆವರಣದ ಹೊರಗೆ ಮಾತ್ರ ಇದ್ದಾರೆ. ಪ್ರಕರಣದ ತನಿಖೆ ಚಾಲ್ತಿಯಲ್ಲಿದ್ದು, ಜೆಎನ್ ಯು ಕ್ಯಾಂಪಸ್ ನಲ್ಲಿಯೇ ಮಫ್ತಿಯಲ್ಲಿ ಅಧಿಕಾರಿಗಳು ತನಿಖೆ ನಡೆಸಿ ಅಗತ್ಯ ಸಾಕ್ಷ್ಯಾಧಾರಗಳನ್ನು ಕಲೆ ಹಾಕುತ್ತಿದ್ದಾರೆ. ಅಲ್ಲದೆ ಸಾರ್ವಜನಿಕರ ಬಳಿ ಇರುವ ವಿಡಿಯೋಗಳನ್ನು ಷೇರ್ ಮಾಡುವಂತೆ ಕೋರಲಾಗಿದೆ. ಇದರಿಂದ ನಿಜವಾದ ಅಪರಾಧಿಗಳ ಗುರುತಿಸಲು ನೆರವಾಗುತ್ತದೆ ಎಂದು ದೇವೇಂದರ್ ಅಯ್ಯರ್ ಹೇಳಿದ್ದಾರೆ.

SCROLL FOR NEXT