ದೇಶ

ಫೋರ್ಬ್ಸ್ 2020ರ ಉನ್ನತ ವ್ಯಕ್ತಿಗಳು ಪಟ್ಟಿಯಲ್ಲಿ ಕನ್ಹಯ್ಯ ಕುಮಾರ್, ಪ್ರಶಾಂತ್ ಕಿಶೋರ್ ಗೆ ಸ್ಥಾನ 

Sumana Upadhyaya

ಪಾಟ್ನಾ: ಬಿಹಾರದ ಇಬ್ಬರು ಯುವಕರು ಫೋರ್ಬ್ಸ್ ಮ್ಯಾಗಜಿನ್ ನಲ್ಲಿ 2020ರ ವಿಶ್ವದ ಟಾಪ್ 20 ವ್ಯಕ್ತಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಅವರಲ್ಲಿ ಒಬ್ಬರು ರಾಜಕೀಯ ಚತುರ ಎಂದು ಹೆಸರು ಪಡೆದಿರುವ ಪ್ರಶಾಂತ್ ಕಿಶೋರ್ ಮತ್ತು ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆಯ ಮಾಜಿ ಅಧ್ಯಕ್ಷ ಕನ್ಹಯ್ಯ ಕುಮಾರ್. 


ಮುಂದಿನ ದಶಕದಲ್ಲಿ ರಾಜಕೀಯದಲ್ಲಿ ಕಿಶೋರ್ ನಿರ್ಧರಿತ ವ್ಯಕ್ತಿಯಾಗುತ್ತಾರೆ ಎಂದು ಬಿಂಬಿಸಲಾಗಿದೆ. 


ಪ್ರಶಾಂತ್ ಕಿಶೋರ್ ರಾಜಕೀಯದಲ್ಲಿ ಮುನ್ನಲೆಗೆ ಬಂದಿದ್ದು 2009ರಲ್ಲಿ, ಗುಜರಾತ್ ನಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರನ್ನು 2014ರ ಲೋಕಸಭಾ ಚುನಾವಣೆಗೆ ಸಜ್ಜುಗೊಳಿಸಿದ್ದು ಇವರೇ. ನಂತರ ಬಿಜೆಪಿ ನೇತೃತ್ವದ ಎನ್ ಡಿಎ ಅಧಿಕಾರಕ್ಕೆ ಬಂದು ನರೇಂದ್ರ ಮೋದಿಯವರು ಪಿಎಂ ಆದರು. ಭಾರತದಲ್ಲಿ ಫೇಸ್ ಬುಕ್ ಅಭಿಯಾನವನ್ನು ರಾಜಕೀಯದಲ್ಲಿ ಆರಂಭಿಸಿದ್ದು ಸಹ ಪ್ರಶಾಂತ್ ಕಿಶೋರ್ ಅವರೇ.


ಬಿಹಾರದ ಬುಕ್ಸರ್ ನವರಾದ ಕಿಶೋರ್ ನಂತರ ಪಂಜಾಬ್ ಕಾಂಗ್ರೆಸ್ ನಾಯಕ ಅಮರಿಂದರ್ ಸಿಂಗ್ ಮತ್ತು ಆಂಧ್ರ ಪ್ರದೇಶದಲ್ಲಿ ವಿ ಜಗನ್ ರೆಡ್ಡಿಯವರಿಗೆ ಸಹ ಚುನಾವಣೆಯಲ್ಲಿ ಗೆಲ್ಲಲು ತಂತ್ರ ಹೇಳಿಕೊಟ್ಟಿದ್ದರು.


ಪ್ರಸ್ತುತ ಪ್ರಶಾಂತ್ ಕಿಶೋರ್ ತಮಿಳುನಾಡಿನಲ್ಲಿ ಡಿಎಂಕೆಗೆ ಚುನಾವಣಾ ತಂತ್ರಗಾರಿಕೆಯನ್ನು ಹೇಳಿಕೊಡುತ್ತಿದ್ದಾರೆ. ಈ ವರ್ಷ ದೆಹಲಿಯಲ್ಲಿ ಅರವಿಂದ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಾರ್ಟಿಗೆ ಚುನಾವಣಾ ತಂತ್ರಗಾರಿಕೆಯನ್ನು ಹೇಳಿಕೊಡುತ್ತಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ನಾಯಕಿ ಸಿಎಂ ಮಮತಾ ಬ್ಯಾನರ್ಜಿಯವರಿಗೆ ಸಹ ಚುನಾವಣಾ ತಂತ್ರಗಾರಿಕೆ ಹೇಳಿಕೊಡುತ್ತಿದ್ದಾರೆ. 

SCROLL FOR NEXT