ದೇಶ

ಯಾವುದೇ ಬಂದ್, ಪ್ರತಿಭಟನೆಗೆ ಅವಕಾಶವಿಲ್ಲ; ಕಾಂಗ್ರೆಸ್, ಎಡಪಕ್ಷಗಳ ವಿರುದ್ಧ ತಿರುಗಿಬಿದ್ದ ದೀದಿ

Srinivasamurthy VN

ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ಆರ್ಥಿಕತೆಗೆ ಪೆಟ್ಟು ನೀಡುವ ಯಾವುದೇ ರೀತಿಯ ಬಂದ್, ಪ್ರತಿಭಟನೆಗಳಿಗೆ ಅವಕಾಶ ನೀಡುವುದಿಲ್ಲ ಎಂದು ಹೇಳುವ ಮೂಲಕ ತಮ್ಮಗೇ ಮಿತ್ರ ಪಕ್ಷ ಕಾಂಗ್ರೆಸ್ ಹಾಗೂ ಎಡಪಕ್ಷಗಳ ವಿರುದ್ಧ ಸಿಎಂ ಮಮತಾ ಬ್ಯಾನರ್ಜಿ ತಿರುಗಿಬಿದ್ದಿದ್ದಾರೆ.

ಹೌದು.. ಕೇಂದ್ರ ಸರ್ಕಾರದ ಕಾರ್ಮಿಕ ನೀತಿ ವಿರೋಧಿಸಿ ಮತ್ತು ವಿವಿಧ ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿ ದೇಶಾದ್ಯಂತ ಇಂದು ಭಾರತ್ ಬಂದ್ ನಡೆಸಲಾಗುತ್ತಿದೆ. ಅತ್ತ ಬಿಜೆಪಿಯೇತರ ಸರ್ಕಾರಗಳಿರುವ ರಾಜ್ಯಗಳಲ್ಲಿ ಬಂದ್ ಗೆ ಬೆಂಬಲ ವ್ಯಕ್ತವಾಗುತ್ತಿದೆಯಾದರೂ ಪ್ರಮುಖವಾಗಿ ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಬಂದ್ ಭಾಗಶಃ ಯಶಕಂಡಿದೆ. 

ಆದರೆ ಇದರ ನಡುವೆಯೇ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು, ಕಾಂಗ್ರೆಸ್ ಮತ್ತು ಎಡಪಕ್ಷಗಳಿಗೆ ಶಾಕ್ ನೀಡಿದ್ದು, ಆರ್ಥಿಕತೆಗೆ ಪೆಟ್ಟು ನೀಡುವ ಯಾವುದೇ ರೀತಿಯ ಬಂದ್, ಪ್ರತಿಭಟನೆಗಳಿಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ ಎಡಪಕ್ಷಗಳಾದ ಸಿಪಿಎಂ, ಸಿಪಿಐ ವಿರುದ್ದ ಕಿಡಿಕಾರಿರುವ ಅವರು ಬಂಗಾಳದಲ್ಲಿ ಅಸ್ಥಿತ್ವದಲ್ಲೇ ಇಲ್ಲದ ಪಕ್ಷಗಳು ನೀಡಿರುವ ಬಂದ್ ಗೆ ನಾನು ಸೊಪ್ಪುಹಾಕುವುದಿಲ್ಲ. ಬಂದ್ ಮೂಲಕ ಈ ಪಕ್ಷಗಳು ನೀಚ ರಾಜಕೀಯ ಮಾಡುತ್ತಿದ್ದು, ತಮ್ಮ ಸ್ವಹಿತಾಸಕ್ತಿಗಾಗಿ ಬಂದ್ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ಅಂತೆಯೇ ಕೇಂದ್ರ ಸರ್ಕಾರದ ಕಾರ್ಮಿಕ ನೀತಿ ವಿರೋಧಿಸಿ ಕಾರ್ಮಿಕ ಸಂಘಟನೆಗಳು ನೀಡಿರುವ ಪ್ರತಿಭಟನೆಗೆ ಬೆಂಬಲ ನೀಡಿರುವ ದೀದಿ, ಕಾರ್ಮಿಕರ ಒತ್ತಾಯದಲ್ಲಿ ನಿಜಾಂಶವಿದೆ. ಕಾರ್ಮಿಕರ ಸಮಸ್ಯೆಗಳನ್ನು ಈಡೇರಿಸದ ಹೊರತು ಉತ್ತಮ ಆರ್ಥಿಕತೆ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

SCROLL FOR NEXT