ದೇಶ

ಭೂಗತ ಪಾತಕಿ ದಾವೂದ್ ಮಾಜಿ ಸಹವರ್ತಿ ಇಜಾಜ್ ಲಕ್ಡಾವಾಲಾ ಬಂಧನ

Raghavendra Adiga

ಮುಂಬೈ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮಾಜಿ ಬಂಟ ಇಜಾಜ್ ಲಕ್ಡಾವಾಲಾ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ

ಬಂಧಿತ ಪಾತಕಿ ಲಕ್ಡಾವಾಲಾನನ್ನು ಜನವರಿ 21 ರವರೆಗೆ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ ಎಂದು ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ  ಸಂತೋಷ್ ರಾಸ್ತೋಗಿ ಗುರುವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.  

ಕಳೆದ 20 ವರ್ಷಗಳಿಂದ ಪೊಲೀಸರ ಕಣ್ತಪ್ಪಿಸಿ ಓಡಾಡುತ್ತಿದ್ದ ಆತನ ವಿರುದ್ಧ ಮುಂಬೈನಲ್ಲಿ 25 ಪ್ರಕರಣಗಳು ಸೇರಿದಂತೆ ಒಟ್ಟು 27 ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪವಿದೆ.

ಲಕ್ಡಾವಾಲಾ ಅವರು ಛೋಟಾ ರಾಜನ್ ಗ್ಯಾಂಗ್‌ನೊಂದಿಗೂ ಸಂಬಂಧ ಹೊಂದಿದ್ದರು.  ಛೋಟಾ ರಾಜನ್ ನೇತೃತ್ವದ ದಾವೂದ್ ಇಬ್ರಾಹಿಂ ಗ್ಯಾಂಗ್‌ನ ಭಾಗವಾಗಿದ್ದರು. ರಾಜನ್ ದಾವೂದ್‌ನಿಂದ ಬೇರ್ಪಟ್ಟಾಗ, ಲಕ್ಡಾವಾಲಾ ಛೋಟಾ ರಾಜನ್ ಜತೆ ಸೇರಿಕೊಂಡಿದ್ದ, 2008-09ರ ಸುಮಾರಿಗೆ ಬೇರ್ಪಟ್ಟಿದ್ದ ಎಂದು ರಾಸ್ತೋಗಿ ಹೇಳಿದ್ದಾರೆ.
 
“ಈತನ ಬಂಧನದಿಂದಾಗಿ ಮೂಲ ಗ್ಯಾಂಗ್ ಬಗ್ಗೆ ಕೆಲವು ಪ್ರಮುಖ ವಿಚಾರಗಳು ಹೊರಬೀಳುವ  ಸಾಧ್ಯತೆಯಿದೆ.  ನಕಲಿ ಪಾಸ್‌ಪೋರ್ಟ್‌ನಲ್ಲಿ ವಿದೇಶಕ್ಕೆ ಪಲಾಯನ ಮಾಡಬಹುದೆಂದು ಶಂಕೆ ಹಿನ್ನೆಲೆಯಲ್ಲಿ  ಲಕ್ಡಾವಾಲಾನ ಮಗಳು ಸೋನಿಯಾ ಶೇಖ್ ಅವರನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಬಂಧಿಸಿದ ಕೆಲ ದಿನಗಳ ನಂತರ ಲಕ್ಡಾವಾಲಾನನ್ನು ಪಾಟ್ನಾದ ಜಟ್ಟನ್ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಂಧಿಸಲಾಗಿದೆ. 

ಪಾತಕಿಗಾಗಿ ಕೆನಡಾ, ಲಂಡನ್, ಮಲೇಷ್ಯಾ, ಯುಎಸ್ ಮತ್ತು ನೇಪಾಳ ಸೇರಿದಂತೆ ವಿವಿಧ ಸ್ಥಳಗಳು ಮತ್ತು ದೇಶಗಳಲ್ಲಿ ವ್ಯಾಪಕ ಶೋಧ ನಡೆಸಲಾಗಿತ್ತು,  

ಪೊಲೀಸ್ ಕಸ್ಟಡಿಯಲ್ಲಿದ್ದ ಆತನ ಪುತ್ರಿ ಸಾಕಷ್ಟು ಮಾಹಿತಿ ನೀಡಿದರು ಎಂದು ಪೊಲೀಸ್ ಅಧಿಕಾರಿ ರಾಸ್ತೋಗಿ ಹೇಳಿದ್ದಾರೆ.

SCROLL FOR NEXT