ದೇಶ

ಕೆಲವೇ ನಿಮಿಷಗಳಲ್ಲಿ ಧರೆಗುರುಳಿದ ಗಗನಚುಂಬಿ ಕಟ್ಟಡ: ಕೇರಳದ ಕೊಚ್ಚಿಯಲ್ಲಿ ಕೊಚ್ಚಿಹೋಯ್ತು 'ಅಕ್ರಮ'ಮರಡು ಫ್ಲಾಟ್ 

Sumana Upadhyaya

ಕೊಚ್ಚಿ: ಭಾರತದಲ್ಲಿ ಬೃಹತ್ ಕಟ್ಟಡ ನೆಲಸಮ ಪ್ರಕರಣದಲ್ಲಿ ಶನಿವಾರ ಬೆಳಗ್ಗೆ ಕೇರಳದ ಕೊಚ್ಚಿಯಲ್ಲಿರುವ ಮರಡುವಿನಲ್ಲಿ 19 ಅಂತಸ್ತಿನ ಬೃಹತ್ ಅಪಾರ್ಟ್ ಮೆಂಟ್ ವೊಂದನ್ನು ನೆಲಸಮ ಮಾಡಲಾಗಿದೆ.


ಕೆರೆ ತೀರದಲ್ಲಿ ಕಟ್ಟಡ ನಿರ್ಮಾಣ ವೇಳೆ ನಿಯಮ ಉಲ್ಲಂಘಿಸಿದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಈ ಕಟ್ಟಡ ಅಕ್ರಮವೆಂದು ನೆಲಸಮ ಮಾಡಲು ಆದೇಶ ನೀಡಿತ್ತು. ಹೀಗಾಗಿ ಕೆರೆ ತೀರದಲ್ಲಿದ್ದ ನಾಲ್ಕು ವಸತಿ ಮಳಿಗೆಗಳನ್ನು ಹೊಂದಿದ್ದ 60 ಮೀಟರ್ ಎತ್ತರದ ಹೋಲಿಫೈತ್ ಹೆಚ್ 20 ಹೆಸರಿನ ಬೃಹತ್ ಫ್ಲಾಟ್ ನ್ನು ಕೇವಲ 24 ನಿಮಿಷಗಳಲ್ಲಿ ನೆಲಸಮಗೊಳಿಸಲಾಗಿದೆ.


ಇಂದು ಬೆಳಗ್ಗೆ 11.19ರ ವೇಳೆಗೆ ಕಟ್ಟಡವನ್ನು ನೆಲಸಮ ಮಾಡಲಾಗಿದ್ದು ಈ ಘಟನೆಯನ್ನು ನೋಡಲು ಅಲ್ಲಿ ಸಾವಿರಾರು ಜನರು ಸೇರಿದ್ದರು.


ಈ ಕಾಂಪ್ಲೆಕ್ಸ್ ನಲ್ಲಿ ಒಟ್ಟು 343 ಫ್ಲಾಟ್ ಗಳನ್ನು ನಿರ್ಮಿಸಲಾಗಿತ್ತು. 138 ದಿನಗಳೊಳಗೆ ಈ ಅಪಾರ್ಟ್ ಮೆಂಟನ್ನು ನೆಲಸಮ ಮಾಡಬೇಕೆಂದು ಕಳೆದ ವರ್ಷ ಸಪ್ಟೆಂಬರ್ ನಲ್ಲಿ ಸುಪ್ರೀಂ ಕೋರ್ಟ್ ಕೇರಳ ಸರ್ಕಾರಕ್ಕೆ ಆದೇಶ ನೀಡಿತ್ತು. 

ಅವಳಿ ಅಪಾರ್ಟ್ ಮೆಂಟ್ ಗಳಲ್ಲಿ ನಾಲ್ಕರಲ್ಲಿ ಎರಡು ಅಪಾರ್ಟ್ ಮೆಂಟ್ ಗಳನ್ನು ಸ್ಪೋಟಕಗಳನ್ನು ಬಳಸಿ ಇಂದು ನೆಲಸಮ ಮಾಡಲಾಗಿದ್ದು ಉಳಿದ ಎರಡು ಅಪಾರ್ಟ್ ಮೆಂಟ್ ಗಳನ್ನು ನಾಳೆ ಕೆಡವಲಾಗುತ್ತದೆ. ಭದ್ರತೆ ಕ್ರಮವಾಗಿ ಈ ಪ್ರದೇಶದ ಭೂ, ವಾಯು ಮತ್ತು ಜಲಭಾಗಗಳಲ್ಲಿ ಸೆಕ್ಷನ್ 144ನ್ನು ಜಾರಿಗೊಳಿಸಲಾಗಿದೆ. 
 

SCROLL FOR NEXT