ದೇಶ

ಭಾರತದ ಸಂಸ್ಕೃತಿ, ಪರಂಪರೆ ರಕ್ಷಣೆಗೆ ರಾಷ್ಟ್ರೀಯ ಮಿಷನ್ ಆರಂಭ:ಪ್ರಧಾನಿ ನರೇಂದ್ರ ಮೋದಿ 

Sumana Upadhyaya

ಕೋಲ್ಕತ್ತಾ: ದೇಶದ ಸಂಸ್ಕೃತಿ ಮತ್ತು ಪರಂಪರೆಯನ್ನು ರಕ್ಷಿಸಲು ತಮ್ಮ ಸರ್ಕಾರ ರಾಷ್ಟ್ರೀಯ ಮಿಷನ್ ನ್ನು ಆರಂಭಿಸಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.


ಅವರು ನಿನ್ನೆ ಕೋಲ್ಕತ್ತಾದಲ್ಲಿ ಹಳೆ ನೋಟುಗಳ ಕಟ್ಟಡದಲ್ಲಿ ಪ್ರತಿಮೆಯನ್ನು ಅನಾವರಣಗೊಳಿಸಿ ಮಾತನಾಡಿ, ಇಂದು ಭಾರತದ ಸಂಸ್ಕೃತಿ ಮತ್ತು ಪರಂಪರೆಗೆ ಅತ್ಯಂತ ಮಹತ್ವವಾದ ದಿನ. ಕೇವಲ ಪಶ್ಚಿಮ ಬಂಗಾಳಕ್ಕೆ ಮಾತ್ರವಲ್ಲ ಇಡೀ ಭಾರತಕ್ಕೆ ಸಂಬಂಧಿಸಿದ್ದಾಗಿದೆ. ಭಾರತದ ಸಂಸ್ಕೃತಿ, ಸಂಪ್ರದಾಯಗಳು ಮತ್ತು ಪರಂಪರೆಯನ್ನು ಮರು-ಆವಿಷ್ಕಾರ, ಮರು ಹಂಚಿಕೆ, ಮರು-ನವೀನ ಮತ್ತು ರಕ್ಷಿಸಲು ಇಂದು ಕೋಲ್ಕತ್ತಾದಿಂದ ರಾಷ್ಟ್ರೀಯ ಮಿಷನ್ ನ್ನು ಆರಂಭಿಸುತ್ತಿದ್ದೇವೆ ಎಂದರು.


ಭಾರತದ ಸಾಂಸ್ಕೃತಿಕ ಸಾಮರ್ಥ್ಯವನ್ನು ಹೊಸ ಮಾದರಿಯಲ್ಲಿ ಸಂರಕ್ಷಿಸಲು ಕೇಂದ್ರ ಸರ್ಕಾರ ಮಿಷನ್ ಆರಂಭಿಸಿದ್ದು ಇದರಿಂದ ಭಾರತ ದೇಶ ವಿಶ್ವದಲ್ಲಿಯೇ ಪ್ರಮುಖ ಪರಂಪರೆಯ ಪ್ರವಾಸೋದ್ಯಮ ಕೇಂದ್ರವಾಗಿ ಹೊರಹೊಮ್ಮಲಿದೆ ಎಂದರು. ದೇಶದಲ್ಲಿ 5 ಸಾಂಪ್ರದಾಯಿಕ ವಸ್ತು ಸಂಗ್ರಹಾಲಯಗಳನ್ನು ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ಕೊಂಡೊಯ್ಯಲಾಗುವುದು. ಅದನ್ನು ಕೋಲ್ಕತ್ತಾದ ಇಂಡಿಯನ್ ಮ್ಯೂಸಿಯಮ್ ನಿಂದ ಆರಂಭಿಸುತ್ತಿದ್ದೇವೆ ಎಂದರು.

SCROLL FOR NEXT