ದೇಶ

ಪ.ಬಂ. ಮಮತಾ ಸರ್ಕಾರ ಕೇಂದ್ರ ಸರ್ಕಾರದ ಯೋಜನೆಗಳನ್ನು ಜಾರಿಗೆ ತರಲು ಉತ್ಸುಕವಾಗಿಲ್ಲ: ಪಿಎಂ ನರೇಂದ್ರ ಮೋದಿ 

Sumana Upadhyaya

ಕೋಲ್ಕತ್ತಾ: ಪಶ್ಚಿಮ ಬಂಗಾಳವನ್ನು ಮತ್ತು ಇಲ್ಲಿನ ಹಿಂದುಳಿದ ವರ್ಗದವರ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.


ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಹರಿಹಾಯ್ದ ಅವರು, ಕೇಂದ್ರ ಸರ್ಕಾರದ ಯೋಜನೆಗಳನ್ನು ಜಾರಿಗೆ ತರಲು ಮಮತಾ ಬ್ಯಾನರ್ಜಿ ನೇತೃತ್ವದ ರಾಜ್ಯ ಸರ್ಕಾರ ಆಸಕ್ತಿ ಹೊಂದಿಲ್ಲ ಎಂದರು.


ಕೋಲ್ಕತ್ತಾ ಪೋರ್ಟ್ ಟ್ರಸ್ಟ್ ನ್ನು ಶ್ಯಾಮ್ ಪ್ರಸಾದ್ ಮುಖರ್ಜಿ ಎಂದು ಮರು ನಾಮಕರಣ ಮಾಡಿದ ನಂತರ ಮಾತನಾಡಿದ ಪ್ರಧಾನಿ, ಕೋಲ್ಕತ್ತಾ ಪೋರ್ಟ್ ಟ್ರಸ್ಟ್ ನ್ನು ಭಾರತದ ಪೂರ್ವ ಭಾಗದಲ್ಲಿ ಕೈಗಾರಿಕಾ ಕೇಂದ್ರಗಳಿಗೆ ಸಂಪರ್ಕ ಕಲ್ಪಿಸುವ ಮೂಲಕ ಜಲಮಾರ್ಗಗಗಳನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ. ಇದರಿಂದ ನಮ್ಮ ನೆರೆಯ ದೇಶಗಳಾದ ಭೂತಾನ್, ಮಯನ್ಮಾರ್ ಮತ್ತು ನೇಪಾಳಗಳಿಗೆ ವ್ಯಾಪಾರಕ್ಕೆ ಸುಲಭವಾಗುತ್ತದೆ ಎಂದರು.


ನಮ್ಮ ದೇಶದ ತೀರಭಾಗಗಳು ಅಭಿವೃದ್ಧಿಯ ಹೆಬ್ಬಾಗಿಲು ಆಗಿವೆ. ಕೇಂದ್ರ ಸರ್ಕಾರ ಸಂಪರ್ಕವನ್ನು ಸುಧಾರಿಸಲು ಸಗರ್ಮಾಲ ಕಾರ್ಯಕ್ರಮವನ್ನು ಆರಂಭಿಸಿದೆ.ಆಯುಷ್ಮಾನ್ ಭಾರತ್ ಯೋಜನೆ, ಪಿಎಂ ಕಿಸಾನ್ ಸಮ್ಮಾನ್ ನಿಧಿ ಸೇರಿದಂತೆ ಕೇಂದ್ರದ ಎಲ್ಲಾ ಯೋಜನೆಗಳ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಮತ್ತೊಮ್ಮೆ ಹೇಳಿದರು.

SCROLL FOR NEXT