ದೇಶ

ಸಿಎಎ ವಿರೋಧಿ ಪ್ರತಿಭಟನೆ: ವಿದ್ಯಾರ್ಥಿಗಳಿಗೆ 20 ಪ್ರತಿಪಕ್ಷಗಳಿಂದ ಬೆಂಬಲ 

Srinivas Rao BV

ದೇಶಾದ್ಯಂತ ಸಿಎಎ ವಿರೋಧಿ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸೋನಿಯಾ ಗಾಂಧಿ ನೇತೃತ್ವದಲ್ಲಿ ಪ್ರತಿಪಕ್ಷಗಳ ಸಭೆ ಜ.13 ರಂದು ನಡೆಯಿತು. 

ಸಭೆಯಲ್ಲಿ ಸಿಎಎ ವಿರೋಧಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಬೆಂಬಲ ಘೋಷಿಸಲಾಗಿದೆ. 

ಬಿಎಸ್ ಪಿ, ಆಮ್ ಆದ್ಮಿ ಪಕ್ಷ, ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಪಕ್ಷಗಳು ಈ ಸಭೆಯಿಂದ ದೂರ ಉಳಿದಿದ್ದು ಅಚ್ಚರಿ ಮೂಡಿಸಿದೆ. 

ಎನ್ ಸಿಪಿ ನಾಯಕ ಶರದ್ ಪವಾರ್, ಎಡಪಕ್ಷಗಳ ನಾಯಕ ಸೀತಾರಾಮ್ ಯೆಚೂರಿ, ಡಿ ರಾಜ, ಜೆಎಂಎಂ ನಾಯಕ ಹಾಗೂ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್, ಎಲ್ ಜೆಡಿ ಮುಖ್ಯಸ್ಥ ಶರದ್ ಯಾದವ್, ರಾಷ್ಟ್ರೀಯ ಲೋಕ್ ಸಮತಾ ಪಕ್ಷದ ನಾಯಕ ಉಪೇಂದ್ರ ಕುಶ್ವಾಹ, ಆರ್ ಜೆಡಿ ನಾಯಕ ಮನೋಜ್ ಝಾ, ಎನ್ ಸಿ ನಾಯಕ ಹಸ್ನೈನ್ ಮಸೂದಿ, ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಗುಲಾಮ್ ನಬಿ ಆಜಾದ್, ಅಹ್ಮದ್ ಪಟೇಲ್, ಮಾಜಿ ಪ್ರಧಾನಿ ಸಿಂಗ್ ಸಭೆಯಲ್ಲಿ ಭಾಗವಹಿಸಿದ್ದರು. 

ವಿದ್ಯಾರ್ಥಿಗಳಿಗೆ ಬೆಂಬಲ ನೀಡುವ ಮೂಲಕ ಸಿಎಎ ಪ್ರತಿಭಟನೆಗಳಿಗೆ ಸಂಬಂಧಿಸಿದಂತೆ ಯುವಕರ ಮನಗೆಲ್ಲಲು ಪ್ರತಿಪಕ್ಷಗಳು ನಿರ್ಧರಿಸಿವೆ. 

SCROLL FOR NEXT