ದೇಶ

ಪ್ರಧಾನಿ ಮೋದಿಗೆ ಶಿವಾಜಿ ಹೋಲಿಕೆ: ವಿವಾದಿತ ಪುಸ್ತಕ ಹಿಂಪಡೆದ ಬಿಜೆಪಿ, ಕ್ಷಮೆಯಾಚಿಸಿದ ಲೇಖಕ

Manjula VN

ನವದೆಹಲಿ: ತೀವ್ರ ಟೀಕೆ ಹಾಗೂ ವಿರೋಧಕ್ಕೆ ಕಾರಣವಾಗಿದ್ದ ಆಜ್ ಕೇ ಶಿವಾಜಿ- ನರೇಂದ್ರ ಮೋದಿ ಹೆಸರಿನ ಪುಸ್ತಕವನ್ನು ಬಿಜೆಪಿ ಹಿಂಪಡೆದಿದ್ದು, ಪುಸ್ತಕ ಬರೆದಿದ್ದ ಲೇಖಕ ಇದೀಗ ಕ್ಷಮೆಯಾಚಿಸಿದ್ದಾರೆ. 

ವಿವಾದಿತ ಪುಸ್ಕತ ಕುರಿತು ಸಾಮಾಜಿಕ ಜಾಲತಾಮ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಕೇಂದ್ರ ಸಚಿವ ಪ್ರಕಾಶ್ ಜವಡೇಕರ್ ಅವರು, ಪುಸ್ತಕಕ್ಕೂ ಬಿಜೆಪಿ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಪುಸ್ತಕ ಬರೆದಿದ್ದ ಲೇಖಕ ಕೂಡ ಕ್ಷಮೆಯಾಚಿಸಿದ್ದಾರೆ. ಬಿಜೆಪಿಗೂ ಪುಸ್ತಕಕ್ಕೂ ಯಾವುದೇ ಸಂಬಂಧವಿಲ್ಲ. ವಿವಾದಿತ ಪುಸ್ತಕವನ್ನು ಹಿಂಪಡೆಯಲಾಗಿದ್ದು, ವಿವಾದ ಅಂತ್ಯಕಂಡಿದೆ ಎಂದು ಹೇಳಿದ್ದಾರೆ. 

ಶಿವಾಜಿ ಮಹಾರಾಜರು ಅತ್ಯಂತ ದೊಡ್ಡರಾಜ. ದಕ್ಷ ನಿರ್ವಾಹಕರು. ಹಲವು ವರ್ಷಗಳು ಕಳೆದರೂ, ಅವರ ಕಾರ್ಯ ಮಾತ್ರ ಇಂದಿಗೂ ನಮಗೆ ಪ್ರೇರಣೆಯಾಗಿದೆ. ಹೀಗಾಗಿ ಅವರನ್ನು ಯಾರಿಗೂ ಹೋಲಿಕೆ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. 

ದೆಹಲಿ ಬಿಜೆಪಿ ಮುಖಂಡ ಜೈ ಭಗವಾನ್ ಗೋಯಲ್ ಎಂಬುವವರು ಆಜ್ ಕೇ ಶಿವಾಜಿ-ನರೇಂದ್ರ ಮೋದಿ (ಇಂದಿನ ಶಿವಾಜಿ-ನರೇಂದ್ರ ಮೋದಿ) ಹೆಸರಿನಲ್ಲಿ ಪುಸ್ತಕವೊಂದನ್ನು ಬರೆದಿದ್ದರು. ಈ ಪುಸ್ತಕಕ್ಕೆ ಸಾಕಷ್ಟು ವಿರೋಧಗಳು ವ್ಯಕ್ತವಾಗಿವೆ. ಪುಸ್ತಕವನ್ನು ನಿಷೇಧಿಸಬೇಕು ಹಾಗೂ ಬಿಜೆಪಿ ಈ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ಶಿವಸೇನೆ ಆಗ್ರಹಿಸಿತ್ತು. 

SCROLL FOR NEXT