ದೇಶ

ಜೆಎನ್'ಯು ಹಿಂಸಾಚಾರ: ವಾಟ್ಸ್'ಆ್ಯಪ್ ಗ್ರೂಪ್ ಸದಸ್ಯರ ಫೋನ್'ಗಳ ವಶಕ್ಕೆ 'ಹೈ'  ಸೂಚನೆ

Manjula VN

ನವದೆಹಲಿ: ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್'ಯು) ದಾಳಿಗೆ ಸಂಚು ರೂಪಿಸಿದ್ದ ವಾಟ್ಸ್'ಆ್ಯಪ್ ಗ್ರೂಪ್ ಸದಸ್ಯರ ಫೋನ್ ಗಳನ್ನು ವಶಕ್ಕೆ ತೆಗೆದುಕೊಳ್ಳುವಂತೆ ಪೊಲೀಸರಿಗೆ ದೆಹಲಿ ಹೈಕೋರ್ಟ್ ಮಂಗಳವಾರ ಸೂಚನೆ ನೀಡಿದೆ. 

ವಿಶ್ವವಿದ್ಯಾಲಯದ ಆವರಣದಲ್ಲಿ ಜನವರಿ 5 ರಂದು ನಡೆದ ಹಿಂಸಾಚಾರಕ್ಕೆ ಎರಡು ವಾಟ್ಸ್ ಆ್ಯಪ್ ಗುಂಪುಗಳ ಸದಸ್ಯರು ಸಂಯೋಜಿಸಲಾಗಿದ್ದು, ಗುಂಪಿನ ಸದಸ್ಯರ ಫೋನ್ ಗಳನ್ನು ವಶಕ್ಕೆ ಪಡೆದುಕೊಳ್ಳುವಂತೆ ಪೊಲೀಸರಿಗೆ ನ್ಯಾಯಾಧೀಶ ಬ್ರಿಜೇಶ್ ಸೇಥಿಯವರು ಸೂಚಿಸಿದ್ದಾರೆ. 

ವಾಟ್ಸ್ ಆ್ಯಪ್ ತಾನು ಸಂದೇಶಗಳನ್ನು ಸರ್ವರ್ ಗಳಲ್ಲಿ ಇಟ್ಟುಕೊಂಡಿರುವುದಿಲ್ಲ. ಆದರೆ, ಬಳಕೆದಾರರ ಫೋನ್ ಗಳಿಂದ ಸಂದೇಶಗಳನ್ನು ಪುನಃ ಪಡೆದುಕೊಳ್ಳಬಹುದು ಎಂದು ಹೇಳಿದ ಬಳಿಕ ನ್ಯಾಯಾಲಯ ಈ ಆದೇಶವನ್ನು ನೀಡಿದೆ.

ಅಲ್ಲದೆ, ಪೊಲೀಸರು ಕೇಳಿರುವ ಹಿಂಸಾಚಾರ ಸಿಸಿಟಿವಿ ದೃಶ್ಯಾವಳಿಗಳನ್ನು ಶೀಘ್ರಗತಿಯಲ್ಲಿ ನೀಡುವಂತೆ ಜೆಎನ್'ಯು ಆಡಳಿತ ಮಂಡಳಿಗ ತಿಳಿಸಿದೆ. 

ಹಿಂಸಾಚಾರ ಸಂಬಂಧ ಜೆಎನ್'ಯು ಪ್ರಾಧ್ಯಾಪಕರಾದ ಅಮೀತ್ ಪರಮೇಶ್ವರನ್, ಅತುಲ್ ಸೂದ್, ಶುಕ್ಲಾ ವಿನಾಯಕ್ ಸಾವಂತ್ ಅವರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. 

ಅರ್ಜಿಯಲ್ಲಿ ಸಿಸಿಟಿವಿ ದೃಶ್ಯಾವಳಿಗಳು, ವಾಟ್ಸ್'ಆ್ಯಪ್ ಸಂವಾದಗಳು ಮತ್ತು ಜನವರಿ 5ರ ಗಲಭೆಗೆ ಸಂಬಂಧಿಸಿದ ಇತರೆ ಸಾಕ್ಷ್ಯಾಧಾರಗಳನ್ನು ಸಂರಕ್ಷಿಸುವಂತೆ ಮನವಿ ಮಾಡಿಕೊಂಡಿದ್ದರು.

SCROLL FOR NEXT