ದೇಶ

ರಾಷ್ಟ್ರಪತಿಗಳ ಮುಂದೆ ಕ್ಷಮಾದಾನ ಅರ್ಜಿಯಿದೆ,ಮರಣದಂಡನೆ ಮುಂದೂಡಿ! ಡೆತ್ ವಾರಂಟ್ ವಿರುದ್ಧ ನಿರ್ಭಯಾ ಅಪರಾಧಿಯಿಂದ ಹೈಕೋರ್ಟಿಗೆ ಮೊರೆ

Raghavendra Adiga

ನವದೆಹಲಿ: ಜನವರಿ 22 ರಂದು ಗಲ್ಲಿಗೇರಿಸಲಿರುವ ನಾಲ್ವರು ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಆರೋಪಿಗಳ ಕ್ಯುರೇಟಿವ್ ಅರ್ಜಯನ್ನು ಸುಪ್ರೀಂ ವಜಾಗೊಳಿಸಿದ ಬೆನ್ನಲ್ಲೇ ಓರ್ವ ಆರೋಪಿ  ವಿಚಾರಣಾ ನ್ಯಾಯಾಲಯ ಹೊರಡಿಸಿರುವ ಡೆತ್ ವಾರಂಟ್‌ ಅನ್ನು ವಜಾಗೊಳಿಸುವಂತೆ ಮತ್ತೆ ದೆಹಲಿ ಹೈಕೋರ್ಟ್‌ಗೆ ಮೊರೆ ಹೋಗಿದ್ದಾನೆ.

ವಿನಯ್ ಶರ್ಮಾ (26), ಮುಖೇಶ್ ಸಿಂಗ್ (32), ಅಕ್ಷಯ್ ಕುಮಾರ್ ಸಿಂಗ್ (31) ಮತ್ತು ಪವನ್ ಗುಪ್ತಾ (25)  ಎಲ್ಲರನ್ನೂ  ಜನವರಿ 22 ರಂದು ಬೆಳಿಗ್ಗೆ 7 ಗಂಟೆಗೆ ತಿಹಾರ್ ಜೈಲಿನಲ್ಲಿ ಗಲ್ಲಿಗೇರಿಸಬೇಕೆಂದು ಕೋರ್ಟ್ ಈ ಹಿಂದೆ ನಿರ್ದೇಶನ ನೀಡಿದ್ದು ಇದೀಗ ಈ ಡೆತ್ ವಾರಂಟ್ ವಿರುದ್ಧ ಆರೋಪಿಯು ಹೈಕೋರ್ಟ್ ಮೊರೆ ಹೋಗಿದ್ದಾನೆ. ಈ ಅರ್ಜಿಯು ನ್ಯಾಯಾಧೀಶರಾದ ಮನಮೋಹನ್ ಮತ್ತು ಸಂಗಿತಾ ಧಿಂಗ್ರಾ ಸೆಹಗಲ್ ಅವರ ನ್ಯಾಯಪೀಠದ ಮುಂದೆಬುಧವಾರ ವಿಚಾರಣೆಗೆ ಬರಲಿದೆ.

ನ್ಯಾಯವಾದಿ ವೃಂದಾ ಗ್ರೋವರ್ ಅವರ ಮೂಲಕ ಸಲ್ಲಿಸಲಾದ ಅರ್ಜಿಯಲ್ಲಿ, ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಮತ್ತು ಭಾರತದ ರಾಷ್ಟ್ರಪತಿಗಳ ಮುಂದೆ ಕ್ಷಮಾದಾನ ಅರ್ಜಿಗಳನ್ನು ಸಲ್ಲಿಸಿದ್ದೇನೆ ಎಂಬ ಕಾರಣಕ್ಕೆ ತನ್ನ ಮೇಲಿನ ಡೆತ್  ವಾರಂಟ್ ತೆಗೆದು ಹಾಕಬೇಕು  ಎಂದು ಕೋರಿದ್ದಾನೆ.

ಮುಖೇಶ್ ಸಿಂಗ್ಮಂಗಳವಾರ ರಾಷ್ಟ್ರಪತಿಗಳಿಗೆ ಕ್ಷಮಾದಾನ ಮನವಿ ಸಲ್ಲಿಸಿದ್ದಾನೆ ಎಂದು ತಿಹಾರ್ ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ. "ತಾನು ಡೆತ್ ವಾರಂಟ್ ಅನ್ನು ಹಿಂಪಡೆಯಲು ಕೋರುತ್ತೇನೆ,  ಇಲ್ಲದಿದ್ದರೆ ಕ್ಷಮಾದಾನ  ಪಡೆಯುವ ತನ್ನ  ಸಾಂವಿಧಾನಿಕ ಹಕ್ಕಿಗೆ ಚ್ಯುತಿಯೊದಗಲಿದೆ ಎಂದು ಅರ್ಜಿಯಲ್ಲಿ ಆತ ವಿವರಿಸಿದ್ದಾನೆ.

ಮುಖೇಶ್ ಮತ್ತು ವಿನಯ್  ಸಲ್ಲಿಸಿದ್ದ ಕ್ಯುರೇಟಿವ್  ಮನವಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ವಜಾಗೊಳಿಸಿದೆ.

SCROLL FOR NEXT