ಸಾಂದರ್ಭಿಕ ಚಿತ್ರ 
ದೇಶ

ಶ್ರೀನಗರ: ಗಣರಾಜ್ಯೋತ್ಸವ ವೇಳೆ ದಾಳಿಗೆ ಸ್ಕೆಚ್: ಐವರು ಜೆಇಎಂ ಸಂಚುಕೋರರ ಬಂಧನ

ಗಣರಾಜೋತ್ಸವಕ್ಕೆ  ಕೆಲ ದಿನಗಳು ಬಾಕಿ ಇರುವಂತೆಯೇ ಕಣಿವೆ ರಾಜ್ಯ ಜಮ್ಮು- ಕಾಶ್ಮೀರದ ಶ್ರೀನಗರದಲ್ಲಿ ಮಹತ್ವದ ಕಾರ್ಯಾಚರಣೆಯಲ್ಲಿ ಜೈಷ್-ಇ- ಮೊಹಮ್ಮದ್ ಸಂಘಟನೆಗೆ ಸೇರಿದ ಐವರು ಸಂಚುಕೋರರನ್ನು ಬಂಧಿಸಲಾಗಿದೆ.

ಶ್ರೀನಗರ: ಗಣರಾಜೋತ್ಸವಕ್ಕೆ  ಕೆಲ ದಿನಗಳು ಬಾಕಿ ಇರುವಂತೆಯೇ ಕಣಿವೆ ರಾಜ್ಯ ಜಮ್ಮು- ಕಾಶ್ಮೀರದ 
ಶ್ರೀನಗರದಲ್ಲಿ ಮಹತ್ವದ ಕಾರ್ಯಾಚರಣೆಯಲ್ಲಿ ಜೈಷ್-ಇ- ಮೊಹಮ್ಮದ್ ಸಂಘಟನೆಗೆ ಸೇರಿದ ಐವರು ಸಂಚುಕೋರರನ್ನು ಬಂಧಿಸಲಾಗಿದೆ.

ಗಣರಾಜ್ಯೋತ್ಸವ ದಿನಾಚರಣೆಗೆ ಕೆಲವೇ ದಿನಗಳು ಬಾಕಿ ಇರುವಂತೆಯೇ ಹಜಾರತ್ ಬಾಲ್ ಪ್ರದೇಶದಲ್ಲಿ ಎರಡು ಗ್ರೆನೇಡ್ ಸ್ಫೋಟವಾಗಿದ್ದು, ಜೈಷ್ -ಇ- ಮೊಹಮ್ಮದ್  ಸಂಘಟನೆಯ ಸಂಚನ್ನು ಬೇಧಿಸುವಲ್ಲಿ ಶ್ರೀನಗರ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಜಮ್ಮು-ಕಾಶ್ಮೀರ ಪೊಲೀಸರು ಟ್ವೀಟ್  ಮಾಡಿದ್ದಾರೆ.

ಸಂಚುಕೋರರನ್ನು ಸದರ್ಬಲ್ ಹಜರತ್‌ಬಾಲ್‌ನ ಐಜಾಜ್ ಅಹ್ಮದ್ ಶೇಖ್,  ಹಜಾರತ್ ಬಾಲ್  ಅಸಾರ್ ಕಾಲೋನಿಯ ಉಮರ್ ಹಮೀದ್ ಶೇಖ್, ಇಮ್ತಿಯಾಜ್ ಅಹ್ಮದ್,  ಎಲ್ಲಹಿಬಾಗ್ ಸೌರಾದ ಶಹೀಲ್ ಫಾರೂಖ್ ಗೊಜ್ರಿ ಮತ್ತು ಸದರ್ ಬಲ್ ಹಜಾರತ್ ಬಾಲ್ ನ ನಸೀರ್ ಅಹ್ಮದ್ ಮೀರ್ ಎಂದು ಗುರುತಿಸಲಾಗಿದೆ. 

ಸಂಚುಕೋರರಿಂದ  143 ಗೆಲಾಟಿನ್ ಕಡ್ಡಿಗಳು, 7 ದ್ವಿತೀಯ ಸ್ಫೋಟಕಗಳು, 01 ಸೈಲೆನ್ಸರ್ಸ್, 42 ಡಿಟೊನೆಟರ್ಸ್, ವಾಕಿ ಟಾಕಿ, ಸಿಡಿ ಡ್ರೈವ್,  ಬ್ಯಾಟರಿಗಳು, ಬ್ಯಾಟರಿ ಚಾರ್ಜರ್, ಕಾಯಿಲ್, ಪೌಚ್, ಅಮೆರಿಕಾದ ಪ್ರವಾಸಿಗರು ಬಳಸುವ ರಾಕ್ ಸಾಕ್ ಬ್ಯಾಗ್,  ನ್ಯೂಟ್ರಿಕ್ ಆಸಿಡ್ ಬಾಟಲ್  ಸೇರಿದಂತೆ ಭಾರಿ ಪ್ರಮಾಣದ ಸ್ಪೋಟಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ವಿಮಾನ ಹೈಜಾಕ್ ಬೆದರಿಕೆ ಎಚ್ಚರಿಕೆ: ಫ್ರಾಂಕ್‌ಫರ್ಟ್‌- ದೆಹಲಿ Air India ಜೈಪುರದಲ್ಲಿ ಎಮೆರ್ಜೆನ್ಸಿ ಲ್ಯಾಂಡಿಂಗ್

ಬಿಹಾರದ ವೈಶಾಲಿಯಲ್ಲಿ ದೋಣಿ ಮುಳುಗಿ ಕನಿಷ್ಠ 13 ಮಂದಿ ಸಾವು; ಪ್ರಧಾನಿ ಮೋದಿ ಸಂತಾಪ, ಪರಿಹಾರ ಘೋಷಣೆ; Video

ಬಿಹಾರದ ಯುವಕನ ಜೊತೆ ಪ್ರೀತಿ, ಮದುವೆಗೆ ಸಿದ್ಧತೆ; ತಾಯಿ ಸಲಹೆ ಬೆನ್ನಲ್ಲೇ ನಿರ್ಧಾರ ಬದಲಿಸಿದ ಬೆಂಗಳೂರು ಟೆಕ್ಕಿ.. ಆಗಿದ್ದೇನು?

'ಜಂತರ್ ಮಂತರ್‌'ಗೆ ಅಕ್ರಮ ಪ್ರವೇಶ ಆರೋಪ: ಮುನ್ನೆಚ್ಚರಿಕೆ ಕ್ರಮವಾಗಿ CJPಯ ರಂಕಾ, ದಾಸ್, ಶಿಂಧೆ ಬಂಧನ

‘ರಾಹುಲ್ ಗಾಂಧಿ ನನ್ನನ್ನು ಪಕ್ಕಕ್ಕೆ ತಳ್ಳಿಲ್ಲ,ಕಾಳಜಿ ವಹಿಸಿದರು, ಬಿಜೆಪಿಯವರಿಗೆ ನನ್ಮೇಲೆ ತುಂಬಾ ಪ್ರೀತಿ’: CM ಡಿ.ಕೆ. ಶಿವಕುಮಾರ್; Video